ಮ್ಯಾಡ್ರಿಡ್ : ಸ್ಪೇನ್ ರಾಷ್ಟ್ರೀಯ ತಂಡದ ಮಾಜಿ ಫುಟ್ಬಾಲ್ ಆಟಗಾರ ಜೋಸ್ ಆಂಟೋನಿಯೊ ರೆಯೆಸ್ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಪೇನ್ ತಂಡದ ಜೊತೆ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ತಂಡದಲ್ಲೂ ಆಡಿದ್ದ ರೆಯೆಸ್ ಸಾವನ್ನಪ್ಪಿರುವ ವಿಚಾರವನ್ನು ಆ ಕ್ಲಬ್ಗಳು ದೃಡಪಡಿಸಿವೆ.
ಮೊದಲು ಸೆವಿಲ್ಲಾ ತಂಡದಲ್ಲಿ ಆಡಿ ಖ್ಯಾತಿಗಳಿಸಿದ್ದ ಜೋಸ್ ಆಂಟೋನಿಯೊ ಅನಂತರ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಪರ ಗಮನ ಸೆಳೆದಿದ್ದರು. 16ನೇ ಹರೆಯದಲ್ಲಿ ಸೆವಿಲ್ಲಾ ತಂಡ ಸೇರಿಕೊಂಡಿದ್ದರು. ರೆಯೆಸ್ ಸ್ಪೈನ್ ಪರ 2003ರಿಂದ 2006ರವರಗೆ 21 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.