ಲಿಸ್ಬನ್(ಪೋರ್ಚುಗಲ್): ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ತಂಡವನ್ನು 1-0 ಗೋಲುಗಳಿಂದ ಮಣಿಸುವ ಮೂಲಕ ಬೇಯರ್ನ್ ಮ್ಯೂನಿಚ್ ತಂಡ 6ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಲಿಸ್ಬನ್ನ ಎಸ್ಟಾಡಿಯೊ ಡು ಸ್ಪೋರ್ಟ್ ಲಿಸ್ಬೊವಾ ಇ ಬೆನ್ಫಿಕಾ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಸೋಲು ಕಾಣುವ ಮೂಲಕ 27 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಫ್ರಾನ್ಸ್ ಮೂಲದ ಪಿಎಸ್ಜಿ ತಂಡ ಕಳೆದುಕೊಂಡಿದೆ.
ರೋಚಕ ಫೈನಲ್ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ತಂಡದ ಪ್ರೆಂಚ್ ಮಿಡ್ಫೀಲ್ಡರ್ ಕಿಂಗ್ಸ್‌ಲೆ ಕೋಮನ್ ಅವರು 59ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಮ್ಮ ತಂಡಕ್ಕೆ 6ನೇ ಬಾರಿ ಪ್ರಶಸ್ತಿ ತಂದು ಕೊಟ್ಟರು.
ಈ ಮೂಲಕ ಬ್ಯೂರಿಚ್ ಹೆಚ್ಚು ಯೂರೋಪಿಯನ್/ ಚಾಂಪಿಯನ್ ಲೀಗ್ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆಯನ್ನು ಲಿವರ್ಪೂಲ್ ಜೊತೆ ಹಂಚಿ ಕೊಂಡಿತು. 7 ಪ್ರಶಸ್ತಿ ಗೆದ್ದಿರುವ ಎಸಿ ಮೆಲನ್ 2ನೇ ಸ್ಥಾನದಲ್ಲಿ ಹಾಗೂ ಲಾಲೀಗ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ 13 ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.