ETV Bharat / sports

ಭಾರತದಲ್ಲಿ ನಡೆಯುವ ಫಿಫಾ ಅಂಡರ್-​17 ಮಹಿಳಾ ವಿಶ್ವಕಪ್​ನ ಬದಲಿ ವೇಳಾಪಟ್ಟಿ ಪ್ರಕಟ..

author img

By

Published : May 13, 2020, 12:04 PM IST

ಭಾರತದಲ್ಲಿ ಮಹಿಳೆಯರ ಫುಟ್‌ಬಾಲ್‌ ಬೆಳವಣಿಗೆಗೆ ಉತ್ತೇಜನಕಾರಿಯಾಗುವ ರೀತಿ ಒಂದು ವೇದಿಕೆ ಅಭಿವೃದ್ದಿಗೊಳಿವುದು ನಮ್ಮ ಗುರಿಯಾಗಿದೆ. ಈಗಾಗಲೇ ಎಲ್ಲಾ ಆತಿಥೇಯ ನಗರಗಳು ಬಹಳ ಅಚ್ಚುಕಟ್ಟು ಹಾಗೂ ಬದ್ಧತೆಯೊಂದಿಗೆ ಈ ಮಹಾಕೂಟಕ್ಕೆ ಸಿದ್ಧವಾಗಿವೆ.

ಫಿಫಾ ಅಂಡರ್-​17 ಮಹಿಳಾ ವಿಶ್ವಕಪ್​
ಫಿಫಾ ಅಂಡರ್-​17 ಮಹಿಳಾ ವಿಶ್ವಕಪ್​

ನವದೆಹಲಿ : ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿದ್ದ ಭಾರತದಲ್ಲಿ ಮೊದಲೇ ಆಯೋಜನೆಗೊಂಡಿದ್ದ ಫಿಫಾ ಅಂಡರ್‌-17 ವನಿತಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಹೊಸ ವೇಳಾಪಟ್ಟಿ ನಿಗದಿಗೊಳಿಸಲಾಗಿದೆ.

ನವೆಂಬರ್​ 2ರಿಂದ 21ರವರೆಗೆ ನಡೆಯಬೇಕಿದ್ದ ಈ ಟೂರ್ನಿ ಕೊರೊನಾ ಸಾಂಕ್ರಾಮಿಕ ಭೀತಿಯಿಂದ ಮುಂದೂಡಲ್ಪಟ್ಟಿತ್ತು. ಇದೀಗ ಫಿಫಾ 2021ರ ಫೆಬ್ರವರಿ 17ರಿಂದ ಮಾರ್ಚ್​ 7ರ ತನಕ ನಡೆಯಲಿದೆ ಎಂದು ಫಿಫಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಯುಇಎಫ್​ಎ, ಕಾನ್ಕಕಾಫ್​​, ಸಿಎಫ್​ಒಎಫ್​ಸಿ ಮತ್ತ ಕಾನ್​ಮೆಬೊಲ್​ನ ಅರ್ಹತಾ ಪಂದ್ಯಾವಳಿಗಳನ್ನು ಪ್ರಶಸ್ತ ವಾತಾವರಣವನ್ನು ಗಮನಿಸಿ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ ಎಂದು ಎಲ್​ಒಸಿ ತಿಳಿಸಿದೆ. ಭಾರತದಲ್ಲಿ ಮಹಿಳೆಯರ ಫುಟ್‌ಬಾಲ್‌ ಬೆಳವಣಿಗೆಗೆ ಉತ್ತೇಜನಕಾರಿಯಾಗುವ ರೀತಿ ಒಂದು ವೇದಿಕೆ ಅಭಿವೃದ್ದಿಗೊಳಿವುದು ನಮ್ಮ ಗುರಿಯಾಗಿದೆ. ಈಗಾಗಲೇ ಎಲ್ಲಾ ಆತಿಥೇಯ ನಗರಗಳು ಬಹಳ ಅಚ್ಚುಕಟ್ಟು ಹಾಗೂ ಬದ್ಧತೆಯೊಂದಿಗೆ ಈ ಮಹಾಕೂಟಕ್ಕೆ ಸಿದ್ಧವಾಗಿವೆ.

ಹೊಸ ದಿನಾಂಕಗಳು ಕಳೆದು ಹೋಗಿರುವ ಸಮಯವನ್ನು ಸರಿದೂಗಿಸಲು ಮತ್ತು ಮುಂದೆ ವೇಗವಾಗಿ ಸಾಗಲು ಅವಕಾಶ ಮಾಡಿಕೊಡುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದೆ. ಈ ಫಿಫಾ ವಿಶ್ವಕಪ್​ ಭಾರತದ ಪ್ರಮುಖ ನಗರಗಳಾದ ನವಿಮುಂಬೈ, ಗುವಾಹಟಿ, ಅಹ್ಮದಾಬಾದ್​, ಗುವಾಹಟಿ, ಕೋಲ್ಕತಾ ಮತ್ತು ಭುವನೇಶ್ವರದಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.