ETV Bharat / sports

Exclusive Interview: ಯುರೋ 2020ರಲ್ಲಿ Ronaldo ಮಿಂಚಲಿದ್ದಾರೆ ಎಂದು ಐರಿಸ್​ ಕೋಚ್​ ಟೆರಿ ಫೆಲನ್

ರೊನಾಲ್ಡೊ ತಮ್ಮ 36 ನೇ ವಯಸ್ಸಿನಲ್ಲಿ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಪೋರ್ಚುಗಲ್ ಪರ ಎರಡು ಗೋಲು ಗಳಿಸಿದರು. ನೀವು ಅವರನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಆತ ನಿಜಕ್ಕೂ ಅದ್ಭುತ ಆಟಗಾರ ಮತ್ತು ನನ್ನನ್ನು ಹೆಚ್ಚು ಆಕರ್ಷಿಸಿದ ಆಟಗಾರ ಎಂದು ಐರ್ಲೆಂಡ್ ಕೋಚ್ ಟೆರಿ ಫೆಲನ್ ತಿಳಿಸಿದ್ದಾರೆ.

ಯುರೋ 2020
ಯುರೋ 2020
author img

By

Published : Jun 21, 2021, 8:55 PM IST

ಮುಂಬೈ: 36 ವರ್ಷದ ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ UEFA Euro 2020 ಯಲ್ಲಿ ಎದ್ದು ಕಾಣುವ ಆಟಗಾರ ಎಂದು ಮಾಜಿ ಮ್ಯಾಂಚೆಸ್ಟರ್​ ಸಿಟಿ ತಂಡದ ಫುಟ್​ಬಾಲ್ ಆಟಗಾರ ಹಾಗೂ ಐರ್ಲೆಂಡ್​ ಕೋಚ್​ ಟೆರಿ ಫೆಲನ್​ ಈಟಿವಿ ಭಾರತಕ್ಕೆ ನೀಡಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೇ ತಮ್ಮನ್ನು ಹೆಚ್ಚು ಆಕರ್ಷಿಸಿದ ತಂಡ ಇಟಲಿ ಎಂದು ಮತ್ತು ಈ ಟೂರ್ನಿಯಲ್ಲಿ ಮೆಸ್ಸಿ ಆಡುವುದನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ ಎಂದು ಫೆಲನ್ ತಿಳಿಸಿದ್ದಾರೆ.

ಯಾವ ತಂಡ ನಿಮ್ಮನ್ನು ಇಲ್ಲಿಯವರೆಗೆ ಹೆಚ್ಚು ಆಕರ್ಷಿತರನ್ನಾಗಿಸಿದೆ?

ಇಟಾಲಿಯನ್ಸ್​ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅವರು ಕಳೆದ ಕೆಲವು ಪಂದ್ಯಗಳಲ್ಲಿ ಸೋಲೇ ಕಂಡಿಲ್ಲ. ಅವರು ಕಳೆದ ಎರಡು ವರ್ಷಗಳಲ್ಲಿ ಸೋತಿಲ್ಲ. ಅವರು ನಿಜಕ್ಕೂ ಅದ್ಭುತವಾಗಿ ಫುಟ್ಬಾಲ್​ ಆಡುತ್ತಿದ್ದಾರೆ. ಅವರು ಅತ್ಯುತ್ತಮವಾಗಿ ಸಂಘಟಿತರಾಗಿದ್ದಾರೆ. ನನ್ನ ಮಟ್ಟಿಗೆ, ಅವರನ್ನು ರಾಬರ್ಟ್ ಮಂಚಿನಿ ಪರಿವರ್ತಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಂಡದಲ್ಲಿ ಹಳೆಯ ಇಟಲಿಯನ್ ಮನಸ್ಥಿತಿಯನ್ನು ಮರಳಿ ತಂದಿದ್ದಾರೆ. ನನ್ನ ಪ್ರಕಾರ ಫ್ರಾನ್ಸ್​ ಜೊತೆಗೆ ಇಟಲಿ ಟೂರ್ನಿಯಲ್ಲಿ ಮುಂಚೂಣಿಯಲ್ಲಿರುವ ತಂಡ.

ಯಾವ ಆಟಗಾರ ನಿಮ್ಮನ್ನು ಹೆಚ್ಚು ಆಕರ್ಷಿಸಿದ್ದಾರೆ?

ರೊನಾಲ್ಡೊ... ಅವರು ತಮ್ಮ 36 ನೇ ವಯಸ್ಸಿನಲ್ಲಿ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಪೋರ್ಚುಗಲ್ ಪರ ಎರಡು ಗೋಲು ಗಳಿಸಿದರು. ನೀವು ಅವರನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಆತ ನಿಜಕ್ಕೂ ಅದ್ಭುತ ಆಟಗಾರ.

ಇದು ಬೇಗ ಎನಿಸಬಹುದು, ಆದರೂ ಟೂರ್ನಿಯಲ್ಲಿ ನಿಮ್ಮ ಪ್ರಕಾರ ಫೇವರೇಟ್ ಯಾವ ತಂಡ?

ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನಾವು ಸಣ್ಣ ರಾಷ್ಟ್ರಗಳನ್ನು ನೋಡಿದರೆ, ಅವುಗಳೂ ಕೂಡ ನಿಜವಾಗಿಯೂ ಉತ್ತಮವಾಗಿ ಆಡುತ್ತಿವೆ. ಫಿನ್​ಲ್ಯಾಂಡ್ ಮತ್ತು ಆಸ್ಟ್ರೀಯ ಅತ್ಯುತ್ತಮ ಕಾರ್ಯ ಸಾಧನೆ ಮಾಡಿವೆ. ಆಸ್ಟ್ರೇಲಿಯಾ ಮೆಸಿಡೋನಿಯಾ ವಿರುದ್ಧ ಆಡಿದೆ, ವೇಲ್ಸ್​ ಅಂತೂ ರೋಚಕವಾಗಿದೆ. ನಾವು ಟರ್ಕಿಯಿಂದಲೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ. ನಮ್ಮಲ್ಲಿ ಉಕ್ರೇನ್ ಇದೆ, ಹಾಗಾಗಿ ಇದು ಖಂಡಿತ ಈ ಪ್ರಶ್ನೆಗೆ ಉತ್ತರಿಸುವುದು ಕಠಿಣ. ನನ್ನ ಪ್ರಕಾರ ಎಲ್ಲ ತಂಡಗಳು ಉತ್ತಮ ಪ್ರಯತ್ನದಲ್ಲಿವೆ.

ನಿಮ್ಮ ಪ್ರಕಾರ, ಈ ಪಂದ್ಯಾವಳಿಯಲ್ಲಿ ಯಾರು ಅಚ್ಚರಿಯ ಪ್ಯಾಕೇಜ್ ಆಗಬಹುದು?

ನಾವು ಪೋರ್ಚುಗಲ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಇತರರ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಆಶ್ಚರ್ಯಕರ ಪ್ಯಾಕೇಜ್ ಇಟಾಲಿಯನ್ನರು ಆಗಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಸ್ವಲ್ಪ ಅಹಂಕಾರದ ಫುಟ್ಬಾಲ್ ಆಡುತ್ತಿದ್ದಾರೆ. ಅವರದು ಉತ್ತಮ ತಂಡವಾಗಿದೆ. ಅವರು ತಮ್ಮ ಎ - ಗೇಮ್ ಅನ್ನು 16 ನೇ ಸುತ್ತಿನಲ್ಲಿ ತರಬೇಕಾಗಿದೆ. ಇನ್ನು ಇಂಗ್ಲೆಂಡ್ ಕೂಡ ಆಗಬಹುದೇ? ನಾವು ಕಾದು ನೋಡನೋಡಬೇಕಾಗಿದೆ. ಸಣ್ಣ ತಂಡಗಳಲ್ಲಿ, ಬಹುಶಃ ವೇಲ್ಸ್ ತಂಡವನ್ನು ಅಚ್ಚರಿಯ ಪ್ಯಾಕೇಜ್ ಎಂದು ಪರಿಗಣಿಸಬಹುದು.

ನೀವು ಯುರೋದಲ್ಲಿ ನೋಡಲು ಇಷ್ಟಪಡುವ ಒಬ್ಬ ಆಟಗಾರ ಯಾರು?

ಮೆಸ್ಸಿ, ನೀವು ಕೂಡ ಅವರು ಆಡುವುದನ್ನು ನೋಡಲು ಬಯಸುವುದಿಲ್ಲವೇ?. ಆದರೆ, ಅದು ನಡೆಯುವುದು ಅಸಾಧ್ಯ, ಏಕೆಂದರೆ ಅವರು ಅರ್ಜೆಂಟೀನಾ ಪರ ಆಡುತ್ತಿದ್ದಾರೆ. ಅದ್ಯ ಕೊಪಾ ಅಮೆರಿಕ(ಕಪ್​)ದಲ್ಲಿ ಆಡುತ್ತಿದ್ದಾರೆ. ಹಾಗಾಗಿ ನೀವು ಕೊಪಾ ಅಮೆರಿಕದಲ್ಲಿ ಮೆಸ್ಸಿ ಆಡುವುದನ್ನು ನೋಡಬಹದು. ನೀವು ಅಲ್ಲಿ ನೇಮರ್​ ಆಡುವುದನ್ನೂ ನೋಡಬಹುದು. ಆದರೆ ನಾವು ಈ ಟೂರ್ನಮೆಂಟ್​ನಲ್ಲೂ(ಯೂರೋ) ಅದ್ಭುತವಾದ ಆಟಗಾರರ ಆಟ ನೋಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.