ETV Bharat / sports

ಯೂರೋ-2020: ಬಲಿಷ್ಠ ಫ್ರಾನ್ಸ್‌ಗೆ ಆಘಾತ; ಕ್ವಾರ್ಟರ್ ಫೈನಲ್​​ಗೆ ಲಗ್ಗೆ ಇಟ್ಟ ಸ್ವಿಟ್ಜರ್ಲೆಂಡ್‌ - ಯೂರೋ-2020

ಪಂದ್ಯದ 90ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್ ತಂಡದ ಮಾರಿಯೊ ಗವ್‌ರನೊವಿಕ್ ಹೊಡೆದ ಗೋಲು ಸಮಬಲಕ್ಕೆ ಕಾರಣವಾಗಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಸ್‌ ತಂಡ ಸ್ಪೇನ್ ಜತೆ ಸೆಣಸಾಡಲಿದೆ.

Euro 2020
ಯೂರೋ-2020
author img

By

Published : Jun 29, 2021, 11:27 AM IST

ಬ್ಯುಚರೆಸ್ಟ್: ನಿನ್ನೆ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ ವಿಶ್ವ ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್ ತಂಡವನ್ನು 5-4 ಗೋಲುಗಳಿಂದ ಸ್ವಿಟ್ಜರ್ಲೆಂಡ್ ಮಣಿಸಿದ್ದು, ಈ ಮೂಲಕ ಟೂರ್ನಿಯ 8ರ ಘಟ್ಟಕ್ಕೆ ಪ್ರವೇಶ ಪಡೆಯಿತು.

ಬ್ಯುಚರೆಸ್ಟ್‌ನಲ್ಲಿ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಕೈಲಿಯನ್ ಬಾಪ್ಪೆ ನಿರ್ಣಾಯಕ ಸ್ಪಾಟ್ ಕಿಕ್‌ನಲ್ಲಿ ಗೋಲು ಗಳಿಸಲು ವಿಫಲರಾಗುವ ಮೂಲಕ ವಿಶ್ವಚಾಂಪಿಯನ್ನರು ಟೂರ್ನಿಯಿಂದ ಹೊರ ನಡೆದರು. ಇದಕ್ಕೂ ಮುನ್ನ ನಿಗದಿತ ಸಮಯದಲ್ಲಿ ಪಂದ್ಯ 3-3 ಗೋಲುಗಳಿಂದ ಪಂದ್ಯ ಡ್ರಾಗೊಂಡಿತ್ತು.

  • 🇨🇭 RESULT: Switzerland through to quarter-finals after thrilling shoot-out!

    WHAT A GAME! 😮

    🤔 Did you see that coming!? #EURO2020

    — UEFA EURO 2020 (@EURO2020) June 28, 2021 " class="align-text-top noRightClick twitterSection" data=" ">

90ನೇ ನಿಮಿಷದಲ್ಲಿ ಸ್ವಿಟ್ಜರ್ಲೆಂಡ್‌ನ ಮಾರಿಯೊ ಗವ್‌ರನೊವಿಕ್ ಹೊಡೆದ ಗೋಲಿನಿಂದಾಗಿ ಪಂದ್ಯ ಸಮಬಲ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್ ತಂಡ ಸ್ಪೇನ್ ಜತೆ ಸೆಣಸಾಡಲಿದೆ. ವ್ಲಾದಿಮಿರ್ ಪೆಟ್ಕೊವಿಕ್ ನೇತೃತ್ವದ ಸ್ವಿಸ್‌ ತಂಡಕ್ಕೆ ಹ್ಯಾರಿಸ್ ಸೆಫೆರೊವಿಕ್ 15ನೇ ನಿಮಿಷದಲ್ಲೇ ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಅವಧಿಯ ಆರಂಭದಲ್ಲಿ ರಿಕಾರ್ಡೊ ರೋಡ್ರಿಗಸ್ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆಯುವ ಮೂಲಕ ಹ್ಯುಗೊ ಲಾರಿಸ್ ಗಮನ ಸೆಳೆದರು.

ಈ ಹಂತದಲ್ಲಿ ಐದೂವರೆ ವರ್ಷಗಳ ಬಳಿಕ ಫ್ರಾನ್ಸ್ ತಂಡ ಸೇರಿಕೊಂಡಿದ್ದ ಕರೀಂ ಬೆಂಝಿಮಾ ಎರಡು ಗೋಲುಗಳನ್ನು ಹೊಡೆದಿದ್ದು 2016ರ ಯೂರೊ ಫೈನಲಿಸ್ಟ್‌ಗಳನ್ನು ಮತ್ತೆ ಹಳಿಗೆ ತಂದರು. ಪಾಲ್ ಪೊಗ್ಬಾ ಮತ್ತೊಂದು ಗೋಲು ಗಳಿಸುವ ಮೂಲಕ ಫ್ರಾನ್ಸ್ ಮುನ್ನಡೆಯನ್ನು 3-1ಕ್ಕೇರಿಸಿದರು. ಆದರೆ ಸೆಫೆರೊವಿಕ್ ಎರಡನೇ ಗೋಲು ಗಳಿಸಿದ ಬೆನ್ನಲ್ಲೇ ಮಾರಿಯೊ ಗವ್‌ರನೊವಿಕ್ ಅಂತಿಮ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸುವ ಮೂಲಕ ಹೆಚ್ಚುವರಿ ಅವಧಿಗೆ ಪಂದ್ಯ ವಿಸ್ತರಿಸಲ್ಪಟ್ಟಿತು.

ಸ್ವಿಟ್ಜರ್ಲೆಂಡ್ ತನ್ನ 5 ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡರೆ, ಫ್ರಾನ್ಸ್‌ನ ಬಾಪ್ಪೆ ಹೊಡೆದ ಕಿಕ್ ಅನ್ನು ಸೊಮೆರ್ ಬಲಕ್ಕೆ ಹಾರಿ ಅದ್ಭುತವಾಗಿ ಹಿಡಿಯುವ ಮೂಲಕ ಚಾಂಪಿಯನ್ನರಿಗೆ ನಿರ್ಗಮನ ಬಾಗಿಲು ತೋರಿದರು. 83 ವರ್ಷಗಳಲ್ಲೇ ಮೊದಲ ಬಾರಿಗೆ ಸ್ವಿಸ್ ತಂಡ ಪ್ರಮುಖ ಟೂರ್ನಿಯ ನಾಕೌಟ್‌ನಲ್ಲಿ ಗೆಲುವು ಸಾಧಿಸಿತು.

ಇದನ್ನೂ ಓದಿ : Euro Cup: ಕ್ರೊಯೇಷಿಯಾ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ ಸ್ಪೇನ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.