ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿ ಜಿಲ್ಲೆಯ ದಾಹು ಎಂಬ ಹಳ್ಳಿಯ ಸೀಮಾ ಎಂಬ ಕೂಲಿ ಕಾರ್ಮಿಕರ ಮಗಳಿಗೆ ವಿಶ್ವಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಯನ ಮಾಡಲು ಅವಕಾಶ ಲಭಿಸಿದೆ.
ಕೆಂಬ್ರಿಡ್ಜ್ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸೀಮಾ ಕುಮಾರಿ ಸ್ಕಾಲರ್ಶಿಪ್ ಪಡೆದಿದ್ದಾರೆ ಎಂದು ಯುವ(Yuwa) ಎಂಬ ಎನ್ಜಿಒ ಈ ಖುಷಿ ವಿಚಾರವನ್ನು ತನ್ನ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದೆ.
-
Last week, Seema, a Yuwa Class 2021 graduate, was offered & accepted a full scholarship 2 @Harvard University. Harvard, considered 1 of the best universities n the world, had a historically low acceptance rate this yr, 3.4% - & a record # of applicants. Seema defied these odds. pic.twitter.com/STbnxNmlHR
— Yuwa (@YuwaFootball) April 23, 2021 " class="align-text-top noRightClick twitterSection" data="
">Last week, Seema, a Yuwa Class 2021 graduate, was offered & accepted a full scholarship 2 @Harvard University. Harvard, considered 1 of the best universities n the world, had a historically low acceptance rate this yr, 3.4% - & a record # of applicants. Seema defied these odds. pic.twitter.com/STbnxNmlHR
— Yuwa (@YuwaFootball) April 23, 2021Last week, Seema, a Yuwa Class 2021 graduate, was offered & accepted a full scholarship 2 @Harvard University. Harvard, considered 1 of the best universities n the world, had a historically low acceptance rate this yr, 3.4% - & a record # of applicants. Seema defied these odds. pic.twitter.com/STbnxNmlHR
— Yuwa (@YuwaFootball) April 23, 2021
ಯುವ ಸಂಸ್ಥೆ ಮಾಡಿರುವ ಟ್ವೀಟ್ನ ಮಾಹಿತಿಯ ಪ್ರಕಾರ ಸೀಮಾ ಅಶೋಕ ವಿಶ್ವವಿದ್ಯಾಲಯ, ಅಮೆರಿಕಾದ ಮೆಡೆಲ್ಬರಿ ಮತ್ತು ಟ್ರಿನಿಟಿ ಕಾಲೇಜಿನಿಂದಲೂ ಸ್ಕಾಲರ್ಶಿಪ್ ಅವಕಾಶಗಳು ಬಂದಿದ್ದವೆಂದು ಹಾಗೂ ಸೀಮಾ ಹಾರ್ವರ್ಡ್ ಯುನಿವರ್ಸಿಟಿಯ ಸ್ಕಾಲರ್ಶಿಪ್ಅನ್ನು ಸ್ವೀಕರಿಸಿದ್ದಾರೆಂದು ತಿಳಿದು ಬಂದಿದೆ.
ಸೀಮಾ ಪೋಷಕರು ದಿನಗೂಲಿ ನೌಕರರಾಗಿದ್ದು, ಯಾವುದೇ ಶಿಕ್ಷಣ ಪಡೆಯದ ಅವಿದ್ಯಾವಂತರು. ಸೀಮಾ 2012ರಲ್ಲಿ ಯುವ ಯೂತ್ ಫುಟ್ಬಾಲ್ ತಂಡಕ್ಕೆ ಸೇರಿದ್ದರು. ಆರಂಭದಲ್ಲಿ ಅವರು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ದೈರ್ಯ ಕಳೆದುಕೊಳ್ಳದ ಸೀಮಾ ಮುಂದುವರೆದಿದ್ದರು. ಇದೀಗ ಯುನಿವರ್ಸಿಟಿ ಮೆಟ್ಟಿಲು ಹತ್ತಿದ ಕುಟುಂಬದ ಮೊದಲ ಹುಡುಗಿ ಎನಿಸಿಕೊಂಡಿದ್ದಾರೆ.
ಇದನ್ನು ಓದಿ:ಯುವ ಆಟಗಾರರಿಗೆ ವಿಶ್ವಾಸ ತುಂಬುವಲ್ಲಿ ರವಿ ಶಾಸ್ತ್ರಿಯವರ ಸಾಮರ್ಥ್ಯ ಅಸಾಧಾರಣ: ಗವಾಸ್ಕರ್