ಲಂಡನ್: ಮೋರ್ಚುಗಲ್ ಮತ್ತು ಜುವೆಂಟಸ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೊಗೆ ಮತ್ತೊಮ್ಮೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಮುಂದಿನವಾರ ಬಾರ್ಸಿಲೋನ ತಂಡದ ವಿರುದ್ಧ ಮಹತ್ವದ ಪಂದ್ಯದಿಂದ ಹೊರಬಿದ್ದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ವಿರಾಮದ ಸಮಯದಲ್ಲಿ ರೊನಾಲ್ಡೊ ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದರು. ಪರಿಣಾಮ ಸ್ವೀಡನ್ ವಿರುದ್ಧದ ಯುಇಎಫ್‌ಎ ನೇಷನ್ಸ್ ಲೀಗ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೊನಾಲ್ಡೊಗೆ ಆ ಸಂದರ್ಭದಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಪೋರ್ಚುಗಲ್‌ನ ಫುಟ್‌ಬಾಲ್ ಫೆಡರೇಶನ್ ತಿಳಿಸಿತ್ತು.
ಇದೀಪ ಮತ್ತೊಮ್ಮೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿರುವುದರಿಂದ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಇದರಿಂದ ರೊನಾಲ್ಡೊ ಚಾಂಪಿಯನ್ಸ್ ಲೀಗ್ನಲ್ಲಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಶೆಯುಂಟಾಗಿದೆ. ರೊನಾಲ್ಡೊ ಹುಷಾರಾಗಿದ್ದರೆ ಮುಂದಿನ ವಾರ ಮೆಸ್ಸಿ ಇರುವ ಬಾರ್ಸಿಲೋನಾ ವಿರುದ್ಧದ ಕದನ ಉತ್ತಮ ಪೈಪೋಟಿಯಿಂದ ಕೂಡಿರುತ್ತಿತ್ತು.
ಪೋರ್ಚುಗಲ್ ಸೂಪರ್ ಸ್ಟಾರ್ ರಿಯಲ್ ಮ್ಯಾಡ್ರಿಡ್ ತಂಡದಿಂದ 2 ವರ್ಷಗಳ ಹಿಂದೆ ಜುವೆಂಟಸ್ ಕ್ಲಬ್ಗೆ ವರ್ಗಾವಣೆಗೊಂಡಿದ್ದರು. ಜುವೆಂಟಸ್ ರೊನಾಲ್ಡೊಗಾಗಿ 100 ಮಿಲಿಯನ್ ಯೂರೋ( 736 ಕೋಟಿ ರೂ ) ನೀಡಿತ್ತು.