ETV Bharat / sports

ಕೋಪಾ ಅಮೆರಿಕ ಪಂದ್ಯ: ಬೊಲಿವಿಯಾ ಮಣಿಸಿದ ಮೆಸ್ಸಿ ತಂಡ - ಬೊಲಿವಿಯಾ

ಅರ್ಜೆಂಟೀನಾ ಬೊಲಿವಿಯಾವನ್ನು 4-1 ಗೋಲುಗಳಿಂದ ಸೋಲಿಸಿದ್ದು, ಮೆಸ್ಸಿ ತಂಡಕ್ಕೆ ಇದು ಮೂರನೇ ಗೆಲುವಾಗಿದೆ. ಇದೀಗ ಮೆಸ್ಸಿ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

Copa America
ಬೊಲಿವಿಯಾ ಮಣಿಸಿದ ಮೆಸ್ಸಿ ತಂಡ
author img

By

Published : Jun 29, 2021, 5:50 PM IST

ಕ್ಯೂಬಾ (ಬ್ರೆಜಿಲ್): ಕೋಪಾ ಅಮೆರಿಕ ಪಂದ್ಯದಲ್ಲಿ ಅರ್ಜೆಂಟೀನಾ ಬೊಲಿವಿಯಾವನ್ನು 4-1 ಗೋಲುಗಳಿಂದ ಸೋಲಿಸಿದ್ದು, ಲಿಯೋನೆಲ್ ಮೆಸ್ಸಿ ಎರಡು ಗೋಲು ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ ಅರ್ಜೆಂಟೀನಾ ಮೊದಲ ಸ್ಥಾನ ಪಡೆದಿದೆ.

ಬೊಲಿವಿಯಾ ಪರ ಎರ್ವಿನ್ ಸಾವೇದ್ರಾ ಒಂದು ಗೋಲು ಗಳಿಸಿದರೆ, ಅರ್ಜೆಂಟೀನಾ ಪರ ಅಲೆಜಾಂಡ್ರೊ ಗೊಮೆಜ್, ಮೆಸ್ಸಿ, ಲೌಟಾರೊ ಮಾರ್ಟಿನೆಜ್ ಗೋಲು ಗಳಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಮೆಸ್ಸಿ ತಂಡಕ್ಕೆ ಇದು ಮೂರನೇ ಗೆಲುವಾಗಿದ್ದು, ಇದೀಗ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನು ಈ ಗುಂಪಿನಲ್ಲಿ ನಾಲ್ಕು ಪಂದ್ಯಗಳಿಂದ ಏಳು ಅಂಕ ಪಡೆದ ಉರುಗ್ವೆ ತಂಡ ಎರಡನೇ ಸ್ಥಾನದಲ್ಲಿದೆ.

ತಮ್ಮ ನಾಲ್ಕನೇ ಪಂದ್ಯದಲ್ಲಿ ಉರುಗ್ವೆ 1- 0 ಗೋಲುಗಳಿಂದ ಪರಾಗ್ವೆ ತಂಡವನ್ನು ಮಣಿಸಿತ್ತು. ಎಡಿಸನ್ ಕವಾನಿ 31ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಉರುಗ್ವೆ ಪರ ಏಕೈಕ ಗೋಲು ಗಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.