ETV Bharat / sports

‘ಬ್ಲಾಕ್​ ಲೈವ್ಸ್​ ಮ್ಯಾಟರ್​’ ಆಂದೋಲನಕ್ಕೆ ಕೈಜೋಡಿಸಿದ ಚೆಲ್ಸಿಯಾ ಫುಟ್ಬಾಲ್‌ ಆಟಗಾರರು - ಮಾಸನ್​ ಮೌಂಟ್​

ನಾವು ಹೇಳಬೇಕೆಂದಿರುವ ವಿಚಾರವನ್ನು ಈ ಚಿತ್ರವೇ ತಿಳಿಸುತ್ತದೆ ಹಾಗೂ ಅದರಿಂದ ಹೊರ ಬರುವ ಸಂದೇಶ ಕೂಡ ಶಕ್ತಿಯುತವಾಗಿರುತ್ತದೆ. ನಾವೆಲ್ಲರೂ ಒಂದಾಗಬೇಕಿದೆ ಎಂದು ಚೆಲ್ಸಿಯಾ ಫುಟ್ಬಾಲ್‌ ಕ್ಲಬ್​ನ ಅಧಿಕೃತ ವೆಬ್​ಸೈಟ್​ ಮೌಂಟ್​ ತಿಳಿಸಿದೆ.

‘ಬ್ಲಾಕ್​ ಲೈವ್ಸ್​ ​ ಮ್ಯಾಟರ್​’ಆಂದೋಲನ
‘ಬ್ಲಾಕ್​ ಲೈವ್ಸ್​ ​ ಮ್ಯಾಟರ್​’ಆಂದೋಲನ
author img

By

Published : Jun 9, 2020, 12:07 PM IST

ಲಂಡನ್ (ಯುಕೆ): ‘ಬ್ಲಾಕ್​ ಲೈವ್ಸ್​ ಮ್ಯಾಟರ್​’ ಆಂದೋಲನಕ್ಕೆ ಕ್ಲಬ್​ನ ಎಲ್ಲಾ ಆಟಗಾರರು ಬೆಂಬಲ ನೀಡಿದ್ದು, ಮಂಡಿಯೂರಿ ಎನಫ್​ ಇಸ್​ ಎನಫ್ ​(enough is enough)ಎಂಬ ಸಂದೇಶ ಸಾರಿದ್ದಾರೆ ಎಂದು ಚೆಲ್ಸಿಯಾ ಕ್ಲಬ್​ನ ಸ್ಟಾರ್​ ಆಟಗಾರ ಮಾಸನ್ ಮೌಂಟ್​ ತಿಳಿಸಿದ್ದಾರೆ.

ಜೂನ್​ 2 ರಂದು ಚೆಲ್ಸಿಯಾ ಆಟಗಾರರು ಮತ್ತು ಕೋಚಿಂಗ್​ ಸಿಬ್ಬಂದಿ ಆಫ್ರಿಕನ್​-ಅಮೆರಿಕನ್​ ವ್ಯಕ್ತಿ ಜಾರ್ಜ್​ ಫ್ಲಾಯ್ಡ್​ಗೆ ಗೌರವ ಸಲ್ಲಿಸಲು ತಮ್ಮ ತರಬೇತಿಗೂ ಮುನ್ನ ಮಂಡಿಯೂರಿ ಹೆಚ್​(H) ಅಕ್ಷರವನ್ನು ರಚಿಸಿದ್ದರು.

ನಾವು ಹೇಳಬೇಕೆಂದಿರುವ ವಿಚಾರವನ್ನು ಈ ಚಿತ್ರವೇ ತಿಳಿಸುತ್ತದೆ. ಅದರಿಂದ ಜಗತ್ತಿಗೆ ಕಳುಹಿಸುವ ಸಂದೇಶ ಕೂಡ ಶಕ್ತಿಯುತವಾಗಿರುತ್ತದೆ. ನಾವೆಲ್ಲರೂ ಒಂದಾಗಬೇಕಿದೆ. ಇಲ್ಲಿಯವರೆಗೆ ಆಗಿದ್ದು ಸಾಕಾಯಿತು ಎಂದು ಕ್ಲಬ್​ನ ಅಧಿಕೃತ ವೆಬ್​ಸೈಟ್​ ಮೌಂಟ್​ ತಿಳಿಸಿದೆ.

ನಾವು ಫುಟ್ಬಾಲ್ ಆಟಗಾರರಾದ ನಾವು ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವುದಕ್ಕೆ ಅದೃಷ್ಠಶಾಲಿಗಳಾಗಿದ್ದೇವೆ. ಆದ್ದರಿಂದ ನಮ್ಮ ಸಂದೇಶವನ್ನು ಪ್ರಸರಿಸಲು ಈ ಮಾಧ್ಯಮ ಉತ್ತಮ ವೇದಿಕೆಯನ್ನಾಗಿ ಬಳಸಿಕೊಳ್ಳಲು ಬಯಸಿದ್ದೇವೆ. ಜೊತೆಗೆ ನಾವೆಲ್ಲರೂ ಒಂದಾಗಿರುತ್ತೇವೆ ಎಂದು ತೋರಿಸುತ್ತೇವೆ. ಮಂಡಿಯೂರಿ ಬ್ಲಾಕ್​ ಲೈವ್ಸ್​ ಮ್ಯಾಟರ್​ ಹೋರಾಟಕ್ಕೆ ನಮ್ಮಲ್ಲಿರುವ ಒಗ್ಗಟ್ಟನ್ನು ತೋರಿಸಲು ನಮ್ಮ ತಂಡದ ಎಲ್ಲಾ ಆಟಗಾರರು ಕೈಜೋಡಿಸಲಿದ್ದಾರೆ ಎಂದಿದ್ದಾರೆ.

ಮೇ 25 ರಂದು ಅಮೆರಿಕದ ಪೊಲೀಸ್​ ಅಧಿಕಾರಿಯಿಂದ ಜಾರ್ಜ್​ ಫ್ಲಾಯ್ಡ್ ಎಂಬ ಕಪ್ಪುವರ್ಣಿಯ ದಾರುಣವಾಗಿ ಕೊಲೆಯಾಗಿದ್ದ. ಇದರಿಂದ ಅಮೆರಿಕದಾದ್ಯಂತ ಕಪ್ಪುವರ್ಣೀಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಯನ್ನು ಜಾಗತಿಕ ಆಟಗಾರರಾದ ಕ್ರಿಸ್‌​ ಗೇಲ್​, ಮೇವೆದಾರ್​ ಹಾಗೂ ಹ್ಯಾಮಿಲ್ಟನ್​ ಖಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.