ETV Bharat / sports

ಐಎಸ್​ಎಲ್ 2021​: ಈಸ್ಟ್​ ಬೆಂಗಾಲ್ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಎಫ್​ಸಿ

ಮಂಗಳವಾರ ನಡೆದ 2ನೇ ಪಂದ್ಯದಲ್ಲಿ ಚೆಟ್ರಿಪಡೆ 2-0 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಸತತ 8 ಪಂದ್ಯಗಳ ಬಳಿಕ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಮೂಲಕ ಸುನೀಲ್ ಚೆಟ್ರಿ ಬಳಗ ಪ್ಲೇಆಫ್​ ರೇಸ್​ಗೆ ಮರಳಿದೆ

author img

By

Published : Feb 3, 2021, 4:45 AM IST

ಈಸ್ಟ್​ ಬೆಂಗಾಲ್ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಎಫ್​ಸಿ

ವಾಸ್ಕೋ(ಗೋವಾ): ಬೆಂಗಳೂರು ಎಫ್​ಸಿ ತಂಡ 7ನೇ ಆವೃತ್ತಿಯ ಐಎಸ್​ಎಲ್​ನಲ್ಲಿ ಕೊನೆಗೂ ಜಯದ ಹಾದಿಗೆ ಮರಳಿದೆ. ಮಂಗಳವಾರ ಎಫ್​ಸಿ ಈಸ್ಟ್​ ಬೆಂಗಾಲ್ ತಂಡವನ್ನು ಸೋಲಿಸಿದೆ.

ಮಂಗಳವಾರ ನಡೆದ 2ನೇ ಪಂದ್ಯದಲ್ಲಿ ಚೆಟ್ರಿಪಡೆ 2-0 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಸತತ 8 ಪಂದ್ಯಗಳ ಬಳಿಕ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಮೂಲಕ ಸುನೀಲ್ ಚೆಟ್ರಿ ಬಳಗ ಪ್ಲೇಆಫ್​ ರೇಸ್​ಗೆ ಮರಳಿದೆ

ಪಂದ್ಯ ಆರಂಭವಾದ ಕೇವಲ 12ನೇ ನಿಮಿಷದಲ್ಲೇ ಕ್ಲಿಟನ್ ಸಿಲ್ವ ಗೋಲು ಬಾರಿಸಿ ಬಿಎಫ್​ಸಿ ಆರಂಭಿಕ ಮುನ್ನಡೆ ತೊಂದುಕೊಟ್ಟರು. ಇನ್ನು ಮೊದಲಾರ್ಧ ಮುಕ್ತಾಯದಂಚಿನಲ್ಲಿದ್ದಾಗ ಈಸ್ಟ್​ ಬೆಂಗಾಲ್​ನ ದೇಬ್‌ಜಿತ್ ಮಜುಮ್ದಾರ್ ಮಾಡಿದ ಸ್ವಗೋಲಿನ(own goal) ಎಡವಟ್ಟಿನಿಂದ ಬಿಎಫ್​ಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು.

ಬೆಂಗಳೂರು ಎಫ್​ಸಿ ದ್ವೀತೀಯಾರ್ಧದಲ್ಲಿ ರಕ್ಷಣೆಗೆ ಒತ್ತು ನೀಡಿ ಪಂದ್ಯವನ್ನು ಗೆದ್ದುಕೊಂಡಿತು. ಒಟ್ಟಾರೆ ಟೂರ್ನಿಯಲ್ಲಿ 15ನೇ ಪಂದ್ಯದಲ್ಲಿ 4ನೇ ಗೆಲುವು ಪಡೆದ ಚೆಟ್ರಿ ಬಳಗ 18 ಅಂಕದೊಂದಿಗೆ 6ನೇ ಸ್ಥಾನಕ್ಕೇರಿದರೆ, 15ನೇ ಪಂದ್ಯದಲ್ಲಿ 6ನೇ ಸೋಲು ಕಂಡ ಈಸ್ಟ್ ಬೆಂಗಾಲ್ ತಂಡ 10ನೇ ಸ್ಥಾನದಲ್ಲೇ ಉಳಿದಿದೆ.

ಇದನ್ನು ಓದಿ:ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅಶೋಕ್ ದಿಂಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.