ಬರ್ಲಿನ್ : ಲಾ ಲಿಗಾದೊಂದಿಗೆ ಉಳಿಯಲು ಲಿಯೋನೆಲ್ ಮೆಸ್ಸಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಬಾರ್ಸಿಲೋನಾ ಅಧ್ಯಕ್ಷ ಜೋನ್ ಲ್ಯಾಪೋರ್ಟಾಗೆ ಮನವರಿಕೆಯಾಗಿದೆ.
ಕ್ಯಾಂಪ್‌ನೌನಲ್ಲಿ ತನ್ನ ವೃತ್ತಿ ಜೀವನವನ್ನು ಕಳೆದ ಮೆಸ್ಸಿಯ ಒಪ್ಪಂದಕ್ಕೆ ಲಾಪೋರ್ಟಾ ನಿಶ್ಚಯಿಸಿದ್ದಾರೆ. ಅಥ್ಲೆಟಿಕ್ ಬಿಲ್ಬಾವೊ ವಿರುದ್ಧದ ವಾರಾಂತ್ಯದ ಕೋಪಾ ಡೆಲ್ ರೇ ಫೈನಲ್‌ಗೆ ಬಾರ್ಕಾ ತಯಾರಿ ನಡೆಸುತ್ತಿದ್ದಂತೆ, ಆರು ಬಾರಿ ಬ್ಯಾಲನ್ ಡಿ ಓರ್ ವಿಜೇತರ ಬಗ್ಗೆ ಲಾಪೋರ್ಟಾಗೆ ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಉತ್ತರಿಸಿರುವ ಲಾಪೋರ್ಟಾ ಎಲ್ಲವೂ ಸಮರ್ಪಕವಾಗಿ ಪ್ರಗತಿಯಲ್ಲಿದೆ.
"ನಾನು ಮೆಸ್ಸಿಯನ್ನು ಉಳಿಸಿಕೊಳ್ಳಲು ಕ್ಲಬ್‌ನ ಸಾಮರ್ಥ್ಯದೊಳಗೆ ಪ್ರಯತ್ನ ಮಾಡುತ್ತೇನೆ. ಮೆಸ್ಸಿ ಪ್ರೇರೇಪಿತರಾಗಿದ್ದಾರೆ. ಅವರು ಅಸಾಧಾರಣ ವ್ಯಕ್ತಿ. ಅವರು ಬಾರ್ಕಾದಲ್ಲಿ ಮುಂದುವರಿಯಲು ಇಚ್ಛಿಸಿದ್ದಾರೆ ಎಂದು ನನಗೆ ಮನವರಿಕೆಯಾಗಿದೆ ಎಂದಿದ್ದಾರೆ.
ಮೆಸ್ಸಿ ಈ ಋತುವಿನಲ್ಲಿ ಬಾರ್ಕಾ ಪರ 28 ಲಾ ಲಿಗಾ ಪಂದ್ಯಗಳಲ್ಲಿ 23 ಗೋಲುಗಳನ್ನು ಗಳಿಸಿದ್ದಾರೆ. ಒಟ್ಟಾರೆ ಮೆಸ್ಸಿ 2020-21ರಲ್ಲಿ 29 ಗೋಲುಗಳನ್ನು ಗಳಿಸಿದ್ದಾರೆ.