ETV Bharat / sports

ಐಎಸ್​ಎಲ್​​: ಉದ್ಘಾಟನಾ ಪಂದ್ಯದಲ್ಲಿ ಕೇರಳದ ವಿರುದ್ಧ ಎಟಿಕೆಗೆ ಗೆಲುವು - ಎಟಿಕೆ ಮೋಹನ್ ಬಗಾನ್ ತಂಡ ಕೇರಳ ಬ್ಲಾಸ್ಟರ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಂಡಿಯನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ತಂಡ ಶುಭಾರಂಭ ಮಾಡಿದೆ. ಪಂದ್ಯದಲ್ಲಿ 1-0 ಅಂತರದಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯದ ನಗೆ ಬೀರಿದೆ.

ATK Mohun Bagan start off with 1-0 win over Kerala Blasters
ಉದ್ಘಾಟನಾ ಪಂದ್ಯದಲ್ಲಿ ಕೇರಳ ವಿರುದ್ಧ ಎಟಿಕೆ್ಗೆ ಗೆಲುವು
author img

By

Published : Nov 21, 2020, 10:19 AM IST

ಗೋವಾ: ಕೊರೊನಾ ಆತಂಕದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್​​ ​ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ತಂಡ ಕೇರಳ ಬ್ಲಾಸ್ಟರ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಎಟಿಕೆ ತಂಡದ ಸ್ಟಾರ್ ಆಟಗಾರ ಹಾಗೂ ತಂಡದ ಪರವಾಗಿ ಅತಿ ಹೆಚ್ಚು ಗೋಲ್ ಬಾರಿಸಿರುವ ರಾಯ್ ಕೃಷ್ಣ ಪಂದ್ಯದ 67ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ 1-0ರ ಗೆಲುವು ತಂದು ಕೊಟ್ಟಿದ್ದಾರೆ.

ಒಂದು ಗೋಲು ಗಳಿಸಿದ ಬಳಿಕ ಅದೇ ಸ್ಥಿತಿಯನ್ನು ಕಾಪಾಡಿಕೊಂಡ ಎಟಿಕೆ, ಕೇರಳ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಎರಡು ತಂಡಗಳು ಸಹ ಮೊದಲಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ಆದರೆ, ದ್ವಿತಿಯಾರ್ಧದಲ್ಲಿ ಎಟಿಕೆ ತಂಡ ಈ ಸೀಸನ್​ನ ಮೊದಲ ಗೋಲು ದಾಖಲಿಸಿತು.

ಇಂದು ಟೂರ್ನಿಯ ಎರಡನೇ ಪಂದ್ಯ ಇಲ್ಲಿನ ತಿಲಕ್ ಮೈದಾನ್​ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎನ್​​​​​​ಇಯು (ನಾರ್ಥ್ ಈಸ್ಟ್ ಯುನೈಟೆಡ್) ಹಾಗೂ ಮುಂಬೈ ಸಿಟಿ ಮುಖಾಮುಖಿಯಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.