ಲಂಡನ್: ಜನವರಿಯ ವರ್ಗಾವಣೆ ಸಂದರ್ಭದಲ್ಲಿ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡುವುದು ತಂಡದ ಆದ್ಯತೆಯಾಗಿದೆ ಎಂದು ಇಂಗ್ಲೆಂಡ್ ಫುಟ್ಬಾಲ್ ಕ್ಲಬ್ ಆರ್ಸೆನಲ್ ವ್ಯವಸ್ಥಾಪಕ ಮೈಕೆಲ್ ಆರ್ಟೆಟಾ ಹೇಳಿದ್ದಾರೆ.
ನಾವು ದೊಡ್ಡ ತಂಡವನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ. ಈ ಬೇಸಿಗೆಯಲ್ಲಿ ಬಹಳಷ್ಟು ಸಂಗತಿಗಳು ಬದಲಾವಣೆಯಾಗಲಿವೆ ಎಂದು ಆರ್ಸೆನಲ್ ಬಾಸ್ ಆರ್ಟೆಟಾ ತಮ್ಮ ತಂಡದ ಪ್ರವಾಸಕ್ಕೆ ಮುಂಚಿತವಾಗಿ ಹೇಳಿದ್ದಾರೆ
ಕೆಲವು ಆಟಗಾರರು ಬೇರೆ ಕಡೆಗೆ ವರ್ಗಾವಣೆಯಾಗಬಹುದು ಅಥವಾ ರಜೆ ಮೇಲೆ ಹೋಗಬಹುದು, ಇದು ಈ ಸಮಯದಲ್ಲಿ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.
ನಾವು ಕೆಲವು ಸ್ಥಾನಗಳಲ್ಲಿರುವ ಆಟಗಾರರ ಸಂಖ್ಯೆಯನ್ನು ಅಷ್ಟಕ್ಕೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ನಮಗೆ ಎಲ್ಲಿ ಇನ್ನೂ ಹೆಚ್ಚಿನ ಅಗತ್ಯವಿದಯೋ ಅಲ್ಲಿ ಪರ್ಯಾಯವಿದೆಯಾ ಎಂಬ ಬಗ್ಗೆ ಪರಿಶೀಲಿಸಲಿದ್ದೇವೆ ಎನ್ನುವ ಮೂಲಕ ಹೊಸ ಆಟಗಾರರ ಆಗಮನದ ಸುಳಿವು ನೀಡಿದ್ದಾರೆ.