ಕೋಲ್ಕತ್ತಾ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಪ್ರಶಸ್ತಿಗೆ ಹಿರಿಯ ಫುಟ್ಬಾಲ್ ಆಟಗಾರ ಐಎಂ ವಿಜಯನ್ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ತಂಡ ಕಂಡ ಅತ್ಯಂತ ಕೌಶಲ್ಯಭರಿತ ಫುಟ್ಬಾಲ್ ಆಟಗಾರ, ಮಾಜಿ ನಾಯಕನಾಗಿರುವ 51 ವರ್ಷದ ವಿಜಯನ್, 2003ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು. 3 ಬಾರಿ ಅಖಿಲ ಭಾರತ ಫುಟ್ಬಾಲ್ ಆಟಗಾರ ಪ್ರಶಸ್ತಿಯನ್ನ ಮೂರು ಬಾರಿ ಪಡೆದಿದ್ದಾರೆ.
ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ನಂತರ ಪದ್ಮಶ್ರೀ ದೇಶದ ನಾಲ್ಕನೇ ಅತ್ಯಂತ ಗೌರವಯುತ ಪ್ರಶಸ್ತಿಯಾಗಿದೆ.
ವಿಜಯನ್ 1992 ರಿಂದ 2003 ಅವಧಿಯಲ್ಲಿ ಭಾರತದ ಪರ 79 ಪಂದ್ಯಗಳನ್ನಾಡಿದ್ದು, 40 ಗೋಲು ಸಿಡಿಸಿದ್ದಾರೆ. ತ್ರಿಶೂರ್ ಮೂಲಕ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರೊಂದಿಗೆ ಜೊತೆಯಾಗಿ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರಮುಖ ಗೋಲುಗಳನ್ನು ದಾಖಲಿಸಲು ನೆರವಾಗಿದ್ದರು.
ವಿಜಯನ್ 199ರ ದಕ್ಷಿಣ ಏಷ್ಯಾದ ಫುಟ್ಬಾಲ್ ಫೆಡರೇಷನ್ ಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಮತ್ತು ಆ ಟೂರ್ನಿಯಲ್ಲಿ ಫುಟ್ಬಾಲ್ ಇತಿಹಾಸದಲ್ಲೇ ಅತಿವೇಗದ ಗೋಲು ಸಿಡಿಸಿದ್ದರು. ಅವರು ಭೂತಾನ್ ವಿರುದ್ಧ ಕೇವಲ 12 ಸೆಕೆಂಡ್ಗಳಲ್ಲಿ ಗೋಲು ಸಿಡಿಸಿದ್ದರು. 2003ರಲ್ಲಿ ನಡೆದಿದ್ದ ಆಫ್ರೋ - ಏಷ್ಯನ್ ಗೇಮ್ಸ್ನಲ್ಲಿ ಅತಿ ಹೆಚ್ಚು ಗೋಲು ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು. ವಿಜಯನ್ 2003ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದರು.