ಹರಾರೆ: ಜಿಂಬಾಬ್ವೆ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಪಾಕ್ ಎರಡನೇ ಪಂದ್ಯದಲ್ಲಿ 19ರನ್ಗಳ ಸೋಲು ಕಂಡಿದೆ. ಈ ಮೂಲಕ ಜಿಂಬಾಬ್ವೆ ತಂಡ ಐತಿಹಾಸಿಕ ಸಾಧನೆ ನಿರ್ಮಿಸಿದೆ.
ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 118ರನ್ ದಾಖಲು ಮಾಡಿತು. ತಂಡದ ಪರ ಆರಂಭಿಕ ಅಟಗಾರ ಕಮುಂಕನ್ವೆ 34ರನ್ಗಳಿಕೆ ಮಾಡಿದರು.
-
From 78/3 to 99-all out 👀
— ICC (@ICC) April 23, 2021 " class="align-text-top noRightClick twitterSection" data="
Pakistan implode as Zimbabwe register a stunning 19-run victory to level the T20I series 🔥#ZIMvPAK ➡️ https://t.co/PZnufXvmBt pic.twitter.com/oqMgyAxpLS
">From 78/3 to 99-all out 👀
— ICC (@ICC) April 23, 2021
Pakistan implode as Zimbabwe register a stunning 19-run victory to level the T20I series 🔥#ZIMvPAK ➡️ https://t.co/PZnufXvmBt pic.twitter.com/oqMgyAxpLSFrom 78/3 to 99-all out 👀
— ICC (@ICC) April 23, 2021
Pakistan implode as Zimbabwe register a stunning 19-run victory to level the T20I series 🔥#ZIMvPAK ➡️ https://t.co/PZnufXvmBt pic.twitter.com/oqMgyAxpLS
119ರನ್ಗಳ ಗುರಿ ಬೆನ್ನತ್ತಿದ ಪಾಕ್ ತಂಡ ಆರಂಭಿಕ ಆಘಾತ ಅನುಭವಿಸಿತು. ಮೊಹಮ್ಮದ್ ರಿಜ್ವಾನ್(13)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಆದರೆ, ಕ್ಯಾಪ್ಟನ್ ಬಾಬರ್ ಅಜಮ್(41)ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನತ್ತ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ರು. ಆದರೆ ಇವರ ವಿಕೆಟ್ ಬೀಳುತ್ತಿದ್ದಂತೆ ಪಾಕ್ನ ಯಾವೊಬ್ಬ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 78ರನ್ಗಳಿಕೆ ಮಾಡಿದ್ದ ವೇಳೆ ಕೇವಲ 3ವಿಕೆಟ್ ಕಳೆದುಕೊಂಡಿದ್ದ ಪಾಕ್ 99ರನ್ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಮಧ್ಯಮ ಕ್ರಮಾಂಕದಲ್ಲಿ ಡ್ಯಾನಿಷ್ ಅಜೀಜ್(24)ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಅವರಿಗೆ ಯಾರೊಬ್ಬರು ಸಾಥ್ ನೀಡಲಿಲ್ಲ. ಹೀಗಾಗಿ ತಂಡ ಕೊನೆಯದಾಗಿ 19.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 99ರನ್ಗಳಿಕೆ ಮಾಡಿತು. 19ರನ್ಗಳ ಸೋಲು ಕಂಡಿದೆ. ಜಿಂಬಾಬ್ವೆ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಲ್ಯೂಕ್ ಜೊಂಗ್ವೆ 4ವಿಕೆಟ್ ಪಡೆದು ಮಿಂಚಿದ್ರೆ, ರಿಯಾನ್ ಬುರ್ಲೆ 2 ವಿಕೆಟ್ ಹಾಗೂ ಮುಜುರಬನಿ, ರಿಚರ್ಡ್ ತಲಾ 1ವಿಕೆಟ್ ಪಡೆದುಕೊಂಡರು.
ಮೊದಲ ಪಂದ್ಯದಲ್ಲಿ ತಿಣಕಾಟ ನಡೆಸಿ ಗೆಲುವು ಸಾಧಿಸಿದ್ದ ಪಾಕ್ಗೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಿರುಗೇಟು ನೀಡಿದೆ. ಹೀಗಾಗಿ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಕೊನೆಯ ಪಂದ್ಯ ರೋಚಕತೆ ಪಡೆದುಕೊಂಡಿದೆ. ಜತೆಗೆ ಪಾಕ್ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಟಿ-20 ಗೆಲುವು ದಾಖಲೆ ಮಾಡಿರುವ ಸಾಧನೆಗೆ ಜಿಂಬಾಬ್ವೆ ಪಾತ್ರವಾಗಿದೆ.