ETV Bharat / sports

Zero to Hero: 'ಬಹುಪಾಲು ಆಸ್ಟ್ರೇಲಿಯಾ ಜನರು ನನ್ನನ್ನು ದ್ವೇಷಿಸುತ್ತಾರೆ' ಎಂದಿದ್ದ ಮಾರ್ಷ್​ ಇಂದು ಆ ದೇಶಕ್ಕೆ ಹೀರೋ - ಆಸ್ಟ್ರೇಲಿಯಾ vs ನ್ಯೂಜಿಲೆಂಡ್

ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶ ಸರಣಿಗಳಲ್ಲಿ ಮಾರ್ಷ್​ 3ನೇ ಕ್ರಮಾಂಕದಲ್ಲಿ ಆಕರ್ಷಿತ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಅವರ ಪ್ರದರ್ಶನ ಎಷ್ಟರ ಮಟ್ಟಿಗಿತ್ತೆಂದರೆ ಶೇನ್​ ವಾರ್ನ್​ ಅಂತಹ ದಿಗ್ಗಜನೇ ಸ್ಟಾರ್ ಬ್ಯಾಟರ್​ ಸ್ಮಿತ್​ಗಿಂತ ಆ ಸ್ಥಾನಕ್ಕೆ ಮಾರ್ಷ್​ ಸೂಕ್ತ ಎಂದು ಬಹಿರಂಗವಾಗಿ ಹೇಳಿದರು.

Mitchell marsh
ಮಿಚೆಲ್ ಮಾರ್ಷ್​
author img

By

Published : Nov 15, 2021, 4:33 AM IST

Updated : Nov 15, 2021, 8:30 AM IST

ದುಬೈ: ಕ್ರಿಕೆಟ್ ಆಡುವ ಕುಟುಬದಲ್ಲಿ ಹುಟ್ಟಿ, ಚಿಕ್ಕಂದಿನಿಂದಲೇ ಕ್ರಿಕೆಟ್​ ನೋಡಿ, ಆಡಿ ಬೆಳೆದು, ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ(Australia cricket) ದೊಡ್ಡ ಹೆಸರು ಗಳಿಸಿದ್ದ ಕುಟುಂಬದಿಂದ ಬಂದಿದ್ದ ಮಿಚಲ್​ ಮಾರ್ಷ್(Mitchell marsh)​ ತಮ್ಮ ಪ್ರಸಿದ್ಧತೆಗೆ, ಪ್ರತಿಭೆಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದರು. ತಮ್ಮನ್ನು ಆಸ್ಟ್ರೇಲಿಯಾದ ಬಹುತೇಕ ಅಭಿಮಾನಿಗಳು ದ್ವೇಷಿಸುತ್ತಾರೆ ಎಂದು 2019ರ ಆ್ಯಷಸ್​ ಸರಣಿಯ ವೇಳೆ ತಾವೇ ಹೇಳಿಕೊಂಡಿದ್ದರು.

"ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಜನರು ಕ್ರಿಕೆಟ್​ ಆಟವನ್ನು ಪ್ರೀತಿಸುತ್ತಾರೆ. ಅವರು ಈ ಆಟಕ್ಕೆ ಸಾಕಷ್ಟು ಉತ್ಸಾಹ ತೋರುತ್ತಾರೆ. ಆದರೆ ನಾನು ಅವರ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲನಾಗಿದ್ದೇನೆ. ನಾನೊಬ್ಬ ಅಪರಿಮಿತ ಸಾಮರ್ಥ್ಯವುಳ್ಳ ಅತೃಪ್ತ ಪ್ರತಿಭೆ ಎಂದು ಒಪ್ಪಿಕೊಳ್ಳುತ್ತೇನೆ, ಆದರೆ ಒಂದಲ್ಲಾ ಒಂದು ದಿನ ಅವರಿಗಾಗಿ ಟ್ರೋಫಿ ಗೆದ್ದುಕೊಡುತ್ತೇನೆ" ಎಂದು 2019ರ ಆ್ಯಷಸ್​ ಸರಣಿಯ ವೇಳೆ ಹೇಳಿಕೊಂಡಿದ್ದರು.

2019ರಲ್ಲಿ ಆಸ್ಟ್ರೇಲಿಯಾ ಟೆಸ್ಟ್​ ತಂಡದ(Australia test team) ಉಪನಾಯಕನಾಗಿದ್ದ ಮಿಚ್ ಮಾರ್ಷ್​ ಅದೇ ವರ್ಷ ಕ್ರಿಕೆಟ್​​ ಆಸ್ಟ್ರೇಲಿಯಾ ಘೋಷಿಸಿದ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದರು. ಅವರ ವೃತ್ತಿ ಬದುಕು ಸಾಕಷ್ಟು ಏಳು ಬೀಳುಗಳಿಂದ ಕೂಡಿದ್ದು, ಗಾಯ ಕೂಡ ಅವರ ಸ್ಥಿರತೆಗೆ ತೊಂದರೆಯನ್ನುಂಟು ಮಾಡಿತ್ತು. 2020ರಲ್ಲಿ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದರು. ಆಗ ಅವರ ಟಿ20 ಸರಾಸರಿ 23.45, ಆದರೆ 2021ರಲ್ಲಿ ಫಿನಿಕ್ಸ್​ ಪಕ್ಷಿಯಂತೆ ಎದ್ದು ಬಂದ ಅವರು, 21 ಪಂದ್ಯಗಳಿಂದ 36.88ರ ಸರಾಸರಿಯಲ್ಲಿ 627 ರನ್​ಗಳಿಸಿ ಆಸ್ಟ್ರೇಲಿಯಾ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು.

ಮಾರ್ಷ್​ ತಮ್ಮ ವೃತ್ತಿ ಜೀವನದಲ್ಲಿ ಬಹುಪಾಲು ಕೆಳಕ್ರಮಾಂಕದಲ್ಲೇ ಆಡಿದರು. ಕೆಲವು ಪಂದ್ಯಗಳಲ್ಲಿ ಸ್ಪಿನ್ನರ್​ ಆಶ್ಟನ್​ ಅಗರ್​ ಅವರಿಗಿಂತ ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದರೆಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶ ಸರಣಿಗಳಲ್ಲಿ ಅವರು 3ನೇ ಕ್ರಮಾಂಕದಲ್ಲಿ ನೀಡಿದ ಆಕರ್ಷಕ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಅವರ ಪ್ರದರ್ಶನ ಎಷ್ಟರ ಮಟ್ಟಿಗಿತ್ತೆಂದರೆ ಶೇನ್​ ವಾರ್ನ್​ ಅಂತಹ ದಿಗ್ಗಜನೇ ಸ್ಟಾರ್ ಬ್ಯಾಟರ್​ ಸ್ಮಿತ್​ಗಿಂತ ಆ ಸ್ಥಾನಕ್ಕೆ ಮಾರ್ಷ್​ ಸೂಕ್ತ ಎಂದು ಬಹಿರಂಗವಾಗಿ ಹೇಳಿದರು.

ನಂತರ ತಂಡದ ಸಹ ಆಟಗಾರ ಮ್ಯಾಕ್ಸ್​ವೆಲ್ ಕೂಡ "ಈ ಟೂರ್ನಮೆಂಟ್​ನಲ್ಲಿ ಮಾರ್ಷ್​ ಉತ್ತಮ ಪ್ರದರ್ಶನ ಹೊಂದಲಿದ್ದಾರೆ, ಅವರಂತೆ ಚೆಂಡನ್ನು ಉತ್ತಮವಾಗಿ ದಂಡಿಸುವ ಬೇರೊಬ್ಬ ಉತ್ತಮ ಬ್ಯಾಟರ್​ ನಾನು ನೋಡಿಲ್ಲ. ನಾವೆಲ್ಲಾ ಅವರು ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗಿ ಅಲ್ಲಿ ಸೇರಿ ಅವರು ಚೆಂಡನ್ನು ದಂಡಿಸುವುದನ್ನ ನೋಡುತ್ತೇವೆ, ಅದ ತುಂಬಾ ಅದ್ಭುತವಾಗಿರುತ್ತದೆ " ಎಂದಿದ್ದ ಅವರು, ಒಂದು ವೇಳೆ ಮಾರ್ಷ್​ ಉತ್ತಮ ಟೂರ್ನಿಯನ್ನು ಹೊಂದದಿದ್ದರೆ ನಾನು ಖಂಡಿತ ಆಶ್ಚರ್ಯಕ್ಕೊಳಗಾಗುತ್ತೇನೆ ಎಂದು ಸ್ಟಾರ್ ಆಲ್​ರೌಂಡರ್​ ಟೂರ್ನಿಗೆ ಮೊದಲೇ ಹೇಳಿದ್ದರು. ಇದೀಗ ಅವರ ಅಭಿಪ್ರಾಯವನ್ನು ಮಾರ್ಷ್​ ಅಕ್ಷರಶಃ ಸತ್ಯ ಮಾಡಿ ತೋರಿಸಿದ್ದಾರೆ. ಮ್ಯಾಕ್ಸಿ ಹೇಳಿದಂತೆ ಮಾರ್ಷ್​ ಫೈನಲ್ ಪಂದ್ಯದಲ್ಲಿ ಸಿಡಿಸಿದ ಒಂದೊಂದು ಸಿಕ್ಸರ್​ಗಳು ಅದ್ಬುತವಾಗಿದ್ದವು ಎನ್ನುವುದು ಕೂಡ ಸತ್ಯ.

ನನ್ನ ಪ್ರದರ್ಶನ ಅತ್ಯುತ್ತಮವಾಗಿಲ್ಲ ಅದಕ್ಕೆ ನನ್ನನ್ನು ನನ್ನ ದೇಶದ ಜನರು ಪ್ರೀತಿಸುವುದಿಲ್ಲ ಎಂದಿದ್ದ ಆಲ್​ರೌಂಡರ್​ ಕಿವೀಸ್​ ವಿರುದ್ಧ ಅಜೇಯ 77 ರನ್​ ಸಿಡಿಸುವ ಮೂಲಕ ಅದೇ ದೇಶದ ಕ್ರಿಕೆಟ್​ ಅಭಿಮಾನಿಗಳಿಂದ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. 14 ವರ್ಷಗಳಿಂದ ಕನಸಾಗಿದ್ದ ಟಿ20 ವಿಶ್ವಕಪ್ (T20I world cup)​ ದೇಶಕ್ಕೆ ಸಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜೊತೆಗೆ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾದ ತಾಕತ್ತು ಅಷ್ಟು ಬೇಗ ಕ್ಷೀಣಿಸುವುದಿಲ್ಲ, ಬಿದ್ದರೂ ಹೇಗೆ ಹೇಳಬೇಕೆಂದು ತಮ್ಮ ತಂಡಕ್ಕೆ ತಿಳಿದಿದೆ ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ.

ಟಿ20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ವೆಸ್ಟ್​ ಇಂಡೀಸ್ ವಿರುದ್ಧ 4-1 ಮತ್ತು ಬಾಂಗ್ಲಾದೇಶ ವಿರುದ್ಧ 4-1ರಲ್ಲಿ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಹಾಗಾಗಿ ಯಾರೊಬ್ಬರು ಆಸ್ಟ್ರೇಲಿಯಾ ಸ್ಪಿನ್​ ಸ್ನೇಹಿ ಯುಎಇಯಲ್ಲಿ ವಿಶ್ವಕಪ್​ ಗೆಲ್ಲುವ ತಂಡ ಎಂದು ಭಾವಿಸಿರಲಿಲ್ಲ. ಆದರೆ ಕಾಂಗರೂ ಪಡೆ form is temporary class is permanent'​ ಎಂದು ತೋರಿಸಿಕೊಟ್ಟಿದೆ.

ಇದನ್ನು ಓದಿ:11 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ , 8ನೇ ಟ್ರೋಪಿ ಗೆದ್ದ ಆಸ್ಟ್ರೇಲಿಯಾ

Last Updated : Nov 15, 2021, 8:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.