ಮುಂಬೈ : ಭಾರತ ಸ್ಪಿನ್ನರ್ಗಳಾದ ಯಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆಳೆಯುವುದರಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಪಾತ್ರ ಮಹತ್ವವಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಬ್ಬರು ಧೋನಿ ಭಾರತ ತಂಡದಲ್ಲಿ ಆಡುವ ವೇಳೆ ಅದ್ವಿತೀಯ ಯಶಸ್ಸು ಸಾಧಿಸಿ ಭಾರತಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.
ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನ ಚರ್ಚೆಯಲ್ಲಿ ಭಾಗವಹಿಸಿದ್ದ ಚಹಲ್, ಧೋನಿ ಹೇಗೆ ತಮ್ಮನ್ನು ಬೆಂಬಲಿಸಿ, ಆತ್ಮವಿಶ್ವಾಸ ತುಂಬುತ್ತಿದ್ದರು ಎನ್ನುವುದನ್ನ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಒಂದು ಘಟನೆಯ ಮೂಲಕ ತಿಳಿಸಿದ್ದಾರೆ.
2108ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯದಲ್ಲಿ 64 ರನ್ ಹೊಡೆಸಿಕೊಂಡಿದ್ದೆ. ಹೆನ್ರಿಚ್ ಕ್ಲಾಸೆನ್ ನನ್ನ ಬೌಲಿಂಗ್ನಲ್ಲಿ ಮೈದಾನದ ತುಂಬೆಲ್ಲಾ ದಂಡಿಸಿದ್ದರು. ಆಗ ಧೋನಿ ಭಾಯ್ ನನಗೆ ಅರೌಂಡ್‌ದ ವಿಕೆಟ್ ಬೌಲಿಂಗ್ ಮಾಡಲು ಹೇಳಿದರು.
ನಾನು ಅದೇ ರೀತಿ ಬೌಲಿಂಗ್ ಮಾಡಿದೆ, ಆದರೂ ಆತ ಮಿಡ್ ವಿಕೆಟ್ನಲ್ಲಿ ದೊಡ್ಡ ಸಿಕ್ಸರ್ ಬಾರಿಸಿದರು. ಮತ್ತೆ ಧೋನಿ ನನ್ನ ಬಳಿ ಬಂದರು. ಮಹಿ ಭಾಯ್, ಈಗ ನಾನೇನು ಮಾಡಲಿ? ಎಂದು ಕೇಳಿದೆ. ಅದಕ್ಕೆ ಅವರು ಏನೂ ಇಲ್ಲ, ನಾನು ಸುಮ್ಮನೇ ಬಂದೆ ಎಂದು ತಿಳಿಸಿದರು.
ನಂತರ ಅವರು, ಈ ದಿನ ನಿನ್ನದಲ್ಲ, ನೀನು ಎಲ್ಲಾ ಪ್ರಯತ್ನ ಮಾಡಿದ್ದೀಯಾ. ಆದರೆ, ಏನೂ ಮಾಡಲಾಗಿಲ್ಲ. ಇದರ ಬಗ್ಗೆ ತುಂಬಾ ಆಲೋಚಿಸಬೇಡ, ನಿನ್ನ ಓವರ್ ಮುಗಿಸು ಮತ್ತು ಆರಾಮವಾಗಿರು ಎಂದು ಧೋನಿ ಭಾಯ್ ಹೇಳಿದರೆಂದು ಚಹಲ್ ನೆನಪಿಸಿಕೊಂಡರು.
ಮಾತು ಮುಂದುವರಿಸಿ, ಆ ಸಂದರ್ಭದಲ್ಲಿ ಅಷ್ಟು ರನ್ ಬಿಟ್ಟುಕೊಟ್ಟಿದ್ದಕ್ಕೆ ನಿಮ್ಮನ್ನು ಯಾರಾದರೂ ಬೈಯ್ದಿದ್ದರೆ, ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತಿತ್ತು. ಆದರೆ, ಅವರು (ಧೋನಿ) ಇದೊಂದು ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿಲ್ಲ ಅಷ್ಟೇ.. ಆದರೆ, ಏಕದಿನ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಮಾಡಿದ್ದೀಯ ಎಂದರು. ಕ್ರಿಕೆಟ್ನಲ್ಲಿ ಕೆಲವೊಮ್ಮೆ ನೀವು ಉತ್ತಮವಾಗಿ ಬೌಲಿಂಗ್ ಮಾಡಬಹುದು ಮತ್ತು ಕೆಲವೊಮ್ಮೆ ಆಗುವುದಿಲ್ಲ ಎನ್ನುವುದನ್ನು ನಾನು ಅಂದು ಅರ್ಥಮಾಡಿಕೊಂಡೆ ಎಂದು ಚಹಲ್ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನದ ಹೊರೆತಾಗಿಯೂ ಪ್ರಸ್ತುತ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಚಹಲ್ ಫೆಬ್ರವರಿ 6ರಿಂದ ವಿಂಡೀಸ್ ವಿರುದ್ಧ ನಡೆಯಲಿರುವ ಸೀಮಿತ ಓವರ್ಗಳ ಸರಣಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ