2007ರ ಸೆಪ್ಟೆಂಬರ್ 19.. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್ ನ ಎಲ್ಲಾ ಆರು ಬಾಲ್ಗಳನ್ನು ಬೌಂಡರಿ ಗೆರೆ ದಾಟಿಸಿ ಯುವರಾಜ್ ಸಿಂಗ್ 'ಸಿಕ್ಸರ್ ಕಿಂಗ್' ಆದ ದಿನವಿದು.
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ 6 ಬಾಲಿಗೆ 6 ಸಿಕ್ಸ್ ಸಿಡಿಸಿ ಇಂದಿಗೆ 14 ವರ್ಷ ಸಂದಿವೆ. ಈ ಅದ್ಭುತ ಹಾಗೂ ಮೈನವಿರೇಳಿಸುವ ಘಳಿಗೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಮ್ಮ ಅಧಿಕೃತ ಟ್ವೀಟರ್ನಲ್ಲಿ ಸ್ಮರಿಸಿವೆ.
-
Look out in the crowd!
— ICC (@ICC) September 19, 2021 " class="align-text-top noRightClick twitterSection" data="
On this day in 2007, @YUVSTRONG12 made #T20WorldCup history, belting six sixes in an over 💥 pic.twitter.com/Bgo9FxFBq6
">Look out in the crowd!
— ICC (@ICC) September 19, 2021
On this day in 2007, @YUVSTRONG12 made #T20WorldCup history, belting six sixes in an over 💥 pic.twitter.com/Bgo9FxFBq6Look out in the crowd!
— ICC (@ICC) September 19, 2021
On this day in 2007, @YUVSTRONG12 made #T20WorldCup history, belting six sixes in an over 💥 pic.twitter.com/Bgo9FxFBq6
ಇದನ್ನೂ ಓದಿ: 2007ರ ಟಿ-20 ವಿಶ್ವಕಪ್ನಲ್ಲಿ ನಾನೇ ನಾಯಕನಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆ! ಆದ್ರೆ ಧೋನಿ ಆದ್ರು
ದಕ್ಷಿಣ ಆಫ್ರಿಕಾದಲ್ಲಿ ಭಾರತ - ಇಂಗ್ಲೆಂಡ್ ನಡುವೆ ನಡೆದಿದ್ದ ಟಿ20 ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಒಂದೇ ಓವರ್ನಲ್ಲಿ ಆರು ಸಿಕ್ಸ್ ಹೊಡೆದು ಬೌಲರ್ ಸ್ಟುವರ್ಟ್ ಬ್ರಾಡ್ಗೆ ಯುವರಾಜ್ ಸಿಂಗ್ ಮುಖಭಂಗವಾಗುವಂತೆ ಮಾಡಿದ್ದರು.
-
#OnThisDay in 2007, @YUVSTRONG12 went berserk and hammered 6⃣ sixes in an over to score the fastest ever T20I fifty. 🔥 👏#TeamIndia pic.twitter.com/vt9Lzj1ELv
— BCCI (@BCCI) September 19, 2021 " class="align-text-top noRightClick twitterSection" data="
">#OnThisDay in 2007, @YUVSTRONG12 went berserk and hammered 6⃣ sixes in an over to score the fastest ever T20I fifty. 🔥 👏#TeamIndia pic.twitter.com/vt9Lzj1ELv
— BCCI (@BCCI) September 19, 2021#OnThisDay in 2007, @YUVSTRONG12 went berserk and hammered 6⃣ sixes in an over to score the fastest ever T20I fifty. 🔥 👏#TeamIndia pic.twitter.com/vt9Lzj1ELv
— BCCI (@BCCI) September 19, 2021
ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಹಾಗೂ ಯುವಿ - ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದುಕೊಂಡು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ ಸೋಲುಂಡಿತ್ತು.