ಹೈದರಾಬಾದ್ : ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸ್ನೇಹಿತರ ದಿನವಾದ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.
-
To a lifetime of friendship ❤️🤗 #HappyFriendshipDay pic.twitter.com/apGx5sL2iN
— Yuvraj Singh (@YUVSTRONG12) August 1, 2021 " class="align-text-top noRightClick twitterSection" data="
">To a lifetime of friendship ❤️🤗 #HappyFriendshipDay pic.twitter.com/apGx5sL2iN
— Yuvraj Singh (@YUVSTRONG12) August 1, 2021To a lifetime of friendship ❤️🤗 #HappyFriendshipDay pic.twitter.com/apGx5sL2iN
— Yuvraj Singh (@YUVSTRONG12) August 1, 2021
ಸ್ನೇಹಿತರ ದಿನದ ಹಿನ್ನೆಲೆ ಯುವಿ, ಜೀವಮಾನದ ಸ್ನೇಹ, #ಸ್ನೇಹಿತರ ದಿನಾಚರಣೆಯ ಶುಭಾಶಯಗಳು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಯುವರಾಜ್, ತಮ್ಮ ಪೋಸ್ಟ್ನಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್ ಹಾಗೂ ಕ್ರಿಸ್ ಗೇಲ್ ಸೇರಿದಂತೆ ಅವರ ಸ್ನೇಹಿತರೊಂದಿಗೆ ಕಳೆದ ಕ್ಷಣಗಳನ್ನೊಳಗೊಂಡ ಚಿತ್ರಗಳು ಮತ್ತು ವಿಡಿಯೋಗಳಿವೆ.
2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸಂಭ್ರಮದ ಫೋಟೋ ಕೂಡ ಇದ್ದು, ಇನ್ನೊಂದು ಚಿತ್ರದಲ್ಲಿ ಯುವರಾಜ್ ಹಾಗೂ ಅವರ ಪತ್ನಿ, ನಟಿ ಹ್ಯಾಜೆಲ್ ಕೀಚ್ ಇದ್ದಾರೆ. ಮನ್ನಾ ಡೇ ಮತ್ತು ಕಿಶೋರ್ ಕುಮಾರ್ ಅವರ 1975ರ ಶೋಲೆ ಚಿತ್ರದ ಸೂಪರ್ಹಿಟ್ 'ಯೆ ದೋಸ್ತಿ....' ಹಾಡು ಈ ವಿಡಿಯೋದ ಹಿನ್ನೆಲೆಯಲ್ಲಿದೆ.
ಆದರೆ ವಿಡಿಯೋದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಫೋಟೋ ಹಾಗೂ ವಿಡಿಯೋ ತುಣುಕುಗಳಿಲ್ಲ. ಇದು ಇಬ್ಬರೂ ಕ್ರಿಕೆಟಿಗರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಧೋನಿ ಹಾಗೂ ಕೊಹ್ಲಿ ನಾಯಕತ್ವದಲ್ಲಿ ಯುವರಾಜ್ ಆಡಿದ ದಿನಗಳನ್ನು ನೆನೆದು ಅಭಿಮಾನಿಗಳು ರಿಟ್ವೀಟ್ ಹಾಗೂ ಕಾಮೆಂಟ್ ಮಾಡಿದ್ದಾರೆ.