ಹೈದರಾಬಾದ್ : ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೋಸ್ಕರ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ರೋಹಿತ್ ಶರ್ಮಾ ನೇತೃತ್ವದ 18 ಮಂದಿ ಆಟಗಾರರಲ್ಲಿ ಕೆಲ ಹೊಸ ಪ್ರತಿಭೆಗೆ ಮಣೆ ಹಾಕಲಾಗಿದೆ.
ಭಾರತೀಯ ಕ್ರಿಕೆಟ್ ಮಂಡಳಿಯಿಂದ ಘೋಷಣೆಯಾಗಿರುವ ತಂಡದಲ್ಲಿ ಹರಿಣಗಳ ವಿರುದ್ಧದ ಸರಣಿಗೆ ನಾಲ್ವರು ಪ್ಲೇಯರ್ಸ್ ಹೆಚ್ಚು ಅರ್ಹರು ಎಂದು ಟೀಂ ಇಂಡಿಯಾ ಮಾಜಿ ಪ್ಲೇಯರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ 2007,2011ರ ವಿಶ್ವಕಪ್ ಹೀರೋ, ಚೈನಾಮ್ಯಾನ್ ಖ್ಯಾತಿ ಸ್ಪಿನ್ನರ್ ಕುಲ್ದೀಪ್ ಯಾದವ್,ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ದೀಪಕ್ ಹುಡಾ ಮತ್ತು ಋತುರಾಜ್ ಗಾಯ್ಕವಾಡ್ಗೆ ಮಣೆ ಹಾಕಿದ್ದಾರೆ. ಈ ನಾಲ್ವರು ಪ್ಲೇಯರ್ಸ್ ಮುಂಬರುವ ಸರಣಿಯಲ್ಲಿ ಹೆಚ್ಚು ಅರ್ಹರು ಎಂದು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಘೋಷಣೆಯಾಗಿರುವ ತಂಡದ ಬಗ್ಗೆ ತಮ್ಮ ವಿಚಾರ ಹಂಚಿಕೊಂಡಿರುವ ಯುವರಾಜ್ ಸಿಂಗ್, ತಂಡದಲ್ಲಿ ಈ ನಾಲ್ವರು ಹೆಸರು ನೋಡಲು ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.
ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿರುವ ಈ ಪ್ಲೇಯರ್ ಇದೀಗ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಬರೋಡಾ ಆಲ್ರೌಂಡರ್ ದೀಪಕ್ ಹೂಡಾ, ಕಳೆದ ವರ್ಷದ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದ ವಾಷಿಂಗ್ಟನ್ ಸುಂದರ್ ಕೂಡ ಇದೀಗ ತಂಡಕ್ಕೆ ಮರಳಿದ್ದು, ಇವರ ಜೊತೆಗೆ ಸಿಎಸ್ಕೆ ಆರಂಭಿಕ ಬ್ಯಾಟರ್ ಋತುರಾಜ್ ಗಾಯ್ಕವಾಡ್ ಕೂಡ ತಂಡದಲ್ಲಿದ್ದಾರೆ.
ಫೆಬ್ರವರಿ 6ರಿಂದ ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿ ಆರಂಭಗೊಳ್ಳಲಿದೆ. ಇದರ ಬಳಿಕ ಕೋಲ್ಕತ್ತಾದಲ್ಲಿ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.
-
Nice to see @imkuldeep18 @Sundarwashi5 @Deepakhooda54 and ruturajs name in the squad much deserved ! @BCCI
— Yuvraj Singh (@YUVSTRONG12) January 27, 2022 " class="align-text-top noRightClick twitterSection" data="
">Nice to see @imkuldeep18 @Sundarwashi5 @Deepakhooda54 and ruturajs name in the squad much deserved ! @BCCI
— Yuvraj Singh (@YUVSTRONG12) January 27, 2022Nice to see @imkuldeep18 @Sundarwashi5 @Deepakhooda54 and ruturajs name in the squad much deserved ! @BCCI
— Yuvraj Singh (@YUVSTRONG12) January 27, 2022
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡ ಇಂತಿದೆ : ಟಿ-20 ತಂಡ : ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್.
ಏಕದಿನ ತಂಡ : ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿ.ಕೀ), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್ , ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ