ನವದೆಹಲಿ: ಭಾರತ ತಂಡವು ಟಿ-20 ವರ್ಡ್ ಕಪ್‌ನ ಸೆಮಿಫೈನಲ್‌ಗೆ ತಲುಪಲು ಸಾಕಷ್ಟು ಉತ್ತಮವಾಗಿದೆ. ಆದರೆ, ತಂಡವು ತನ್ನ ಸಂಪೂರ್ಣ ಸಾಮರ್ಥ್ಯದಿಂದ ಆಡಲು ಹಾರ್ದಿಕ್ ಪಾಂಡ್ಯ ಬೌಲಿಂಗ್ ಪ್ರಾರಂಭಿಸಬೇಕಾಗಿದೆ ಮತ್ತು ಭುವನೇಶ್ವರ್ ಕುಮಾರ್ ವೇಗವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಭಾರತೀಯ ತಂಡದ ಬೌಲಿಂಗ್ ದಾಳಿಯ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದರು ಮತ್ತು ದುಬೈನಲ್ಲಿ ನಡೆದ ಸೂಪರ್ 12ರ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ ತಂಡ ಪುನರಾಗಮನ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ತಂಡದಲ್ಲಿ ಪಾಂಡ್ಯ ಅವರ ಪಾತ್ರದ ಬಗ್ಗೆ ಕೇಳಿದಾಗ, ಹಾರ್ದಿಕ್ ಪಾಂಡ್ಯ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಬೌಲಿಂಗ್ ಮಾಡುವ ಮೂಲಕ ಮತ್ತಷ್ಟು ಬಲ ನೀಡಬೇಕು. ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ, ವಿಭಿನ್ನ ಆಯ್ಕೆಗಳನ್ನು ನೋಡಬೇಕಾಗಬಹುದು. ಆದರೆ, ಅವರು ಅಪ್ಪಟ ಆಲ್‌ರೌಂಡರ್ ಆಗಿ ತಂಡದಲ್ಲಿರಬೇಕು ಎಂದರು.
ಅವರು ಬೌಲಿಂಗ್ ಮಾಡಬೇಕು, ಅವರು ಉತ್ತಮ ಕೌಶಲ್ಯಗಳನ್ನು ಹೊಂದಿದ್ದಾರೆ. ಅವರು ಚೆನ್ನಾಗಿ ಬೌಲ್ ಮಾಡುತ್ತಾರೆ. ಆದ್ದರಿಂದ ಭಾರತೀಯ ತಂಡಕ್ಕೆ ಹೆಚ್ಚುವರಿ ಸ್ಪಾರ್ಕ್ ಅನ್ನು ಅವರು ಸೇರಿಸುತ್ತಾರೆ ಎಂದು ವಿವರಿಸಿದರು.
ಭುವನೇಶ್ವರ್ ಬಗ್ಗೆ ಮಾತನಾಡಿದ ಅವರು, ಭುವನೇಶ್ವರ್ ಅವರ ಶ್ರೇಷ್ಠ ಸಾಮರ್ಥ್ಯ ಎಂದರೆ ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವುದು. ಪ್ರಪಂಚದಾದ್ಯಂತ ಅನೇಕ ವೇಗದ ಬೌಲರ್‌ಗಳು ಚೆಂಡನ್ನು ಎರಡೂ ರೀತಿಯಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ. ಹಾಗೆ ಪರಿಣಾಮಕಾರಿಯಾಗಲು ಭುವನೇಶ್ವರ್ ಗಂಟೆಗೆ 140 ಕಿಮೀ ವೇಗದಲ್ಲಿ ಬೌಲ್ ಮಾಡಬೇಕು. ಅವರು ತ್ವರಿತವಾಗಿ ಬೌಲಿಂಗ್ ಮಾಡಬೇಕಾಗಿದೆ ಮತ್ತು ಅವರಿಗೆ ಬದಲಾವಣೆಯ ಅಗತ್ಯವಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಮೊಹಮ್ಮದ್ ಶಮಿ ಅವರಂತಹವರು ಟಿ-20ಯಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾನು ಅವರನ್ನು ಐಪಿಎಲ್‌ನಲ್ಲಿ ವೀಕ್ಷಿಸಿದ್ದೇನೆ ಎಂದ ಅವರು, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ಇಬ್ಬರು ಮುಂಚೂಣಿಯ ಸ್ಪಿನ್ನರ್‌ಗಳು ಎಂದು ಹೊಗಳಿದರು.