ಲಂಡನ್: ರನ್ ತೆಗೆದುಕೊಳ್ಳುವ ಭರದಲ್ಲಿ ಓಡುವಾಗ ಪಿಚ್ನಲ್ಲೇ ಎದುರಾಳಿ ಬ್ಯಾಟ್ಸ್ಮನ್ ಎಡವಿಬಿದ್ದರು. ಈ ವೇಳೆ ಅವರನ್ನು ರನ್ ಔಟ್ ಮಾಡುವ ಅವಕಾಶವಿತ್ತು. ಆದ್ರೆ ಔಟ್ ಮಾಡದೆ ಜೋ ರೂಟ್ ನೇತೃತ್ವದ ಯಾರ್ಕ್ಶೈರ್ ತಂಡ ಕ್ರೀಡಾ ಸ್ಪೂರ್ತಿ ಮೆರೆಯಿತು.
ಶನಿವಾರ ಯಾರ್ಕ್ ಶೈರ್ ಮತ್ತು ಲಂಕಾಶೈರ್ ನಡುವಿನ ವೆಟಾಲಿಟಿ ಟಿ20 ಬ್ಲಾಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಲಂಕಾಶೈರ್ ತಂಡಕ್ಕೆ 18 ಎಸೆತಗಳಲ್ಲಿ ಗೆಲ್ಲಲು 14 ರನ್ಗಳ ಅಗತ್ಯವಿತ್ತು. ಕೈಯಲ್ಲಿ ಇನ್ನೂ 5 ವಿಕೆಟ್ ಇತ್ತು. ಈ ಸಂದರ್ಭದಲ್ಲಿ ಸ್ಟ್ರೈಕರ್ನಲ್ಲಿದ್ದ ಬ್ಯಾಟ್ಸ್ಮನ್ ಚೆಂಡನ್ನು ಮಿಡ್ ಆನ್ಗೆ ಬಾರಿಸಿ ಸಿಂಗಲ್ ತೆಗೆದುಕೊಳ್ಳಲು ಮುಂದಾದರು.
-
What would you have done?
— Vitality Blast (@VitalityBlast) July 17, 2021 " class="align-text-top noRightClick twitterSection" data="
Croft goes down injured mid run and @YorkshireCCC decide not to run him out#Blast21 pic.twitter.com/v1JHVGLn1T
">What would you have done?
— Vitality Blast (@VitalityBlast) July 17, 2021
Croft goes down injured mid run and @YorkshireCCC decide not to run him out#Blast21 pic.twitter.com/v1JHVGLn1TWhat would you have done?
— Vitality Blast (@VitalityBlast) July 17, 2021
Croft goes down injured mid run and @YorkshireCCC decide not to run him out#Blast21 pic.twitter.com/v1JHVGLn1T
ನಾನ್ ಸ್ಟ್ರೈಕರ್ನಲ್ಲಿದ್ದ ಸ್ಟೀವನ್ ಕ್ರಾಫ್ಟ್ ಓಡುವಾಗ ಎಡವಿ ಬಿದ್ದು ಮೇಲೇಳಲಾಗದೆ ಅಲ್ಲಿಯೇ ಕಾಲು ನೋವಿನಿಂದ ನರಳಾಡಿದರು. ಈ ಸಂದರ್ಭದಲ್ಲಿ ಚೆಂಡು ಫೀಲ್ಡರ್ ಕೈಯಲ್ಲಿತ್ತು. ಆದರೂ ಯಾರ್ಕ್ಶೈರ್ ತಂಡದ ವಿಕೆಟ್ ಕೀಪರ್ ಕ್ರಾಫ್ಟ್ ಅವರನ್ನು ಔಟ್ ಮಾಡದೇ ಚೆಂಡನ್ನು ದೂರ ಎಸೆದು ಬಿಟ್ಟರು. ಅಷ್ಟೇ ಅಲ್ಲ, ಅಂಪೈರ್ಗೆ ಆಟ ನಿಲ್ಲಿಸಲು ಹೇಳಿ, ಬಿದ್ದಿದ್ದ ಬ್ಯಾಟ್ಸ್ಮನ್ ಬಳಿಗೆ ಆಗಮಿಸಿದರು.
ಈ ಘಟನೆಯ ವಿಡಿಯೋವನ್ನು ಲೀಗ್ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಯಾರ್ಕ್ಶೈರ್ ತಂಡದ ಕ್ರೀಡಾ ಸ್ಪೂರ್ತಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.
ವೈದ್ಯರ ವೀಕ್ಷಣೆಯ ನಂತರ ಕ್ರಾಫ್ಟ್ ಅಜೇಯ 26 ರನ್ಗಳಿಸಿ ಲಂಕಾಶೈರ್ಗೆ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರಲ್ಲದೆ, ತಮ್ಮ ತಂಡವನ್ನು ಕ್ವಾರ್ಟರ್ ಫೈನಲ್ಗೆ ಕೊಂಡೊಯ್ದರು.
ಪಂದ್ಯದ ನಂತರ ಮಾತನಾಡಿದ ಯಾರ್ಕ್ಶೈರ್ ತಂಡದ ನಾಯಕ ಜೋ ರೂಟ್, ಒತ್ತಡದ ಸಂದರ್ಭದಲ್ಲಿ ನಾವು ಆ ನಿರ್ಧಾರ ತೆಗೆದುಕೊಂಡೆವು. ಆದರೆ ಇದರ ಬಗ್ಗೆ ಹಲವರಲ್ಲಿ ಬೇರೆ ಬೇರೆ ಅಭಿಪ್ರಾಯವಿರಬಹುದು. ಆದರೆ ಆ ಸಂದರ್ಭದಲ್ಲಿ ಕ್ರಾಫ್ಟ್ರನ್ನು ನಾವು ನೋಡಿದಾಗ ಅದು ಗಂಭೀರವೆನಿಸಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಾಲ್ವರು ಭಾರತೀಯರು ಸೇರಿದಂತೆ ಆಲ್ಟೈಮ್ Odi ತಂಡ ಪ್ರಕಟಿಸಿದ ಅಖ್ತರ್