ETV Bharat / sports

Yoga Day: ಸೆಹ್ವಾಗ್, ಗಂಭೀರ್, ಸಚಿನ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರಿಂದ ಯೋಗಾಭ್ಯಾಸ - Former Indian cricketers Yoga Day

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ್ದಾರೆ.

Virender Sehwag, Pragyan Ojha celebrate International Yoga Day

author img

By

Published : Jun 21, 2023, 6:22 PM IST

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್ ಮತ್ತು ಪ್ರಗ್ಯಾನ್ ಓಜಾ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹ ಹಾಗೂ ವಿಶಿಷ್ಟವಾಗಿ ಆಚರಿಸಿದ್ದಾರೆ. ಕ್ರಿಕೆಟಿಗ ಹಾಗು ರಾಜಕಾರಣಿ ಗೌತಮ್ ಗಂಭೀರ್ ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವ ಎರಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶೀರ್ಶಾಸನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದರೆ, ಪ್ರಗ್ಯಾನ್ ಓಜಾ ಅವರು ವೃಕ್ಷಾಸನ (ಮರದ ಭಂಗಿ) ಮಾಡುತ್ತಿರುವ ಫೋಟೋವನ್ನು ತಮ್ಮ ಇನ್ಸ್​ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾದರು. "ಯೋಗ ದೇಹ ಮತ್ತು ಮನಸ್ಸಿನ ನಡುವಿನ ಟೀಮ್ ವರ್ಕ್ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ನೆಚ್ಚಿನ ಯೋಗಾಸನ ಯಾವುದು ತಿಳಿಸಿ" ಎಂದು ಸಚಿನ್ ತಮ್ಮ ವ್ಯಾಯಾಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ನಿಮಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು" ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶೀರ್ಶಾಸನದ ವಿಡಿಯೋ ಜೊತೆಗೆ ಶೀರ್ಷಿಕೆ ಬರೆದಿದ್ದಾರೆ.

ವಿಶಿಷ್ಟ ರೀತಿಯಲ್ಲಿ ಯೋಗ ದಿನ ಆಚರಿಸಿದ ಪ್ರಗ್ಯಾನ್ ಓಜಾ, "ಯೋಗಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ. ಯೋಗ ಮಾಡುವುದರಿಂದ ಒತ್ತಡವನ್ನು ದೂರ ಮಾಡಬಹುದು. ಶಾಂತಿ, ಸಹನೆ, ನೆಮ್ಮದಿಗಾಗಿ ಯೋಗ ತುಂಬಾ ಉಪಯುಕ್ತ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಯೋಗದ ಶಕ್ತಿಯನ್ನು ಬಳಸಿಕೊಳ್ಳುವುದು" ಎಂದು ಶೀರ್ಷಿಕೆ ಬರೆದಿದ್ದಾರೆ. "ಯೋಗವು ದೇಹವನ್ನು ಮಾತ್ರವಲ್ಲ, ಮನಸ್ಸು ಮತ್ತು ಆತ್ಮವನ್ನು ಸಮೃದ್ಧಗೊಳಿಸುತ್ತದೆ. ಅಂತಾರಾಷ್ಟ್ರೀಯ ಯೋಗದಿನ ಶುಭಾಶಯಗಳು" ಎಂದು ಗೌತಮ್ ಗಂಭೀರ್ ಪ್ರಾಣಾಯಾಮ ಮಾಡುತ್ತಿರುವ ತಮ್ಮ ಫೋಟೋ ಪೋಸ್ಟ್ ಮಾಡಿದ್ದಾರೆ.

  • Chakrasana,also called Full-Wheel Pose is a backbending posture that opens up the chest, tones the thighs, abdomen and arms, and engages the whole body. As a heart-opening stretch, this pose helps release sadness and depression.
    Wish you all a very happy #InternationalDayofYoga pic.twitter.com/RP9k6Ry3kz

    — Venkatesh Prasad (@venkateshprasad) June 21, 2023 " class="align-text-top noRightClick twitterSection" data=" ">

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ ವಿಶಿಷ್ಟ ರೀತಿಯಲ್ಲಿ ಯೋಗ ದಿನಾಚರಿಸಿದರು. ಚಕ್ರಾಸನ ಭಂಗಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡುವ ಮೂಲಕ ಈ ಭಂಗಿಯ ಪ್ರಯೋಜನಗಳನ್ನು ತಿಳಿಸಿದ್ದಾರೆ. "ಇದನ್ನು ಚಕ್ರಾಸನ ಅಥವಾ ಪೂರ್ಣ-ಚಕ್ರ ಭಂಗಿ ಎಂದೂ ಕರೆಯುತ್ತಾರೆ. ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನ. ಇದು ದೇಹದ ನಮ್ಯತೆ ಹೆಚ್ಚಿಸಲು, ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಕಾಪಾಡಿಕೊಳ್ಳಲು ಮಾಡಬಹುದಾದ ಉತ್ತಮ ವ್ಯಾಯಾಮ ಎಂದು ಹೇಳಲಾಗಿದೆ. ಸ್ನಾಯು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್​ ಮಾಡಿಕೊಂಡಿದ್ದಾರೆ.

Virender Sehwag, Pragyan Ojha celebrate International Yoga Day
ಭಾರತದ ಮಾಜಿ ಕ್ರಿಕೆಟಿಗರ ಯೋಗಾಭ್ಯಾಸ

ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ವೃದ್ಧಿಸಿಕೊಳ್ಳಲು ಯೋಗ ತುಂಬಾ ಸಹಕಾರಿ. ಹಾಗಾಗಿ ಅದರ ಅರಿವು ಮೂಡಿಸುವುದು ಈದಿನದ ಪ್ರಮುಖ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪರಿಕಲ್ಪನೆಯನ್ನು ಪರಿಚಯಿಸಿದರು. ಅಂದಿನಿಂದ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ನಮ್ಯತೆ, ಶಕ್ತಿ, ಸಮತೋಲನ ಹಾಗೂ ಫಿಟ್‌ನೆಸ್ ಅನ್ನು ವರ್ಧಿಸುವ ದಿವ್ಯ ಔಷಧವಾಗಿದ್ದರಿಂದ ಇಂದು ವಿಶ್ವಾದ್ಯಂತ ಭಾರಿ ಜನಪ್ರಿಯತೆಯನ್ನು ಗಳಿಸಿದೆ. 'ವಸುಧೈವ ಕುಟುಂಬಕಂ' ಅನ್ನೋದು ಈ ವರ್ಷದ ಯೋಗ ದಿನದ ಥೀಮ್ ಆಗಿದೆ.

ಇದನ್ನೂ ಓದಿ: Yoga day: ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯೌಷಧ: ಬಾಲಿವುಡ್‌ ನಟಿಯರಿಂದ ಯೋಗಾಸನ- ಫೋಟೋಗಳನ್ನು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.