ಪಶ್ಚಿಮ ಮತ್ತು ದಕ್ಷಿಣ ವಲಯ ನಡುವಿನ ದುಲೀಪ್ ಟ್ರೋಫಿ ಫೈನಲ್‌ನ ಐದನೇ ದಿನದ ಬೆಳಗಿನ ಸೆಷನ್ನಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್ ವಿವಾದ ಉಂಟಾಗಿದೆ. ವಿವಾದ ಇನ್ನಷ್ಟು ಬೆಳೆಯದಂತೆ ಪಶ್ಚಿಮ ವಲಯ ತಂಡದ ನಾಯಕ ಅಜಿಂಕ್ಯ ರಹಾನೆ, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮೈದಾನದಿಂದ ಹೊರ ಕಳುಹಿಸಿದ ಘಟನೆ ಕೂಡ ನಡೆಯಿತು.
50ನೇ ಓವರ್ ವೇಳೆ ದಕ್ಷಿಣ ವಲಯದ ಬ್ಯಾಟರ್ ಟಿ ರವಿತೇಜ ಮತ್ತು ಪಶ್ಚಿಮ ವಲಯದ ಯಶಸ್ವಿ ಜೈಸ್ವಾಲ್ ಮಧ್ಯೆ ಮಾತು ಬೆಳೆದಿದೆ. ಇಬ್ಬರಿಗೂ ಫೀಲ್ಡ್ ಅಂಪೈರ್ಗಳು ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಜೈಸ್ವಾಲ್ ಮತ್ತೆ ಕೆಣಕ್ಕಿದ್ದಾರೆ. ಇದರಿಂದ ರವಿತೇಜ ಈ ಬಗ್ಗೆ ಅಂಪೈರ್ಗೆ ದೂರಿದ್ದಾರೆ. ಮಧ್ಯಪ್ರವೇಶಿಸಿದ ನಾಯಕ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರನ್ನು ಸಮಾಧಾನ ಮಾಡಿದರು.
- — cricket fan (@cricketfanvideo) September 25, 2022 " class="align-text-top noRightClick twitterSection" data="
— cricket fan (@cricketfanvideo) September 25, 2022
">— cricket fan (@cricketfanvideo) September 25, 2022
ಒಂದು ಹಂತದಲ್ಲಿ ಅಜಿಂಕ್ಯಾ ರಹಾನೆ ಮುಂದೆಯೇ ಜೈಸ್ವಾಲ್ ನಿಂದಿಸಲು ಶುರು ಮಾಡಿದರು. ರಹಾನೆ ಆತನನ್ನು ಸಮಾಧಾನ ಮಾಡಲು ಕರೆದೊಯ್ದರು. ಸ್ವಲ್ಪ ಸಮಯದ ಬಳಿಕ ಅಜಿಂಕ್ಯಾ ರಹಾನೆ, ಯಶಸ್ವಿ ಜೈಸ್ವಾಲ್ರನ್ನು ಮೈದಾನದಿಂದಲೇ ಹೊರ ಕಳುಹಿಸಿದರು.
ನಾಯಕನ ಈ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್ ಮೈದಾನ ತೊರೆಯುವಾಗಲೂ ಗೊಣಗುತ್ತಾ ಹೊರ ನಡೆದರು. ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಜೈಸ್ವಾಲ್ರನ್ನು ಮತ್ತೆ ಮೈದಾನಕ್ಕೆ ಕರೆಯಿಸಿಕೊಳ್ಳಲಾಯಿತು.
- — cricket fan (@cricketfanvideo) September 25, 2022 " class="align-text-top noRightClick twitterSection" data="
— cricket fan (@cricketfanvideo) September 25, 2022
">— cricket fan (@cricketfanvideo) September 25, 2022
ಪಶ್ಚಿಮ ವಲಯದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕವನ್ನು ಸಿಡಿಸಿದ್ದರು. 323 ಎಸೆತಗಳಲ್ಲಿ 263 ರನ್ ಗಳಿಸಿದ್ದರಿಂದ ತಂಡ 4 ವಿಕೆಟ್ಗೆ 585 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದರಿಂದ ದಕ್ಷಿಣ ವಲಯ ತಂಡ ಟ್ರೋಫಿ ಗೆಲ್ಲಲು 529 ರನ್‌ಗಳ ಗುರಿಯನ್ನು ಮೀರಬೇಕಿದೆ.
ಜೈಸ್ವಾಲ್ ದ್ವಿಶತಕ ಸಾಧನೆ ಮಾಡಿದರೆ, ಸರ್ಫರಾಜ್ ಖಾನ್ ಅಜೇಯ 178 ರನ್ ಗಳಿಸಿದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ವಿಫಲವಾಗಿರುವ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ಗಳಲ್ಲಿ 8 ಮತ್ತು 15 ಸ್ಕೋರ್ ಮಾಡಿ ಇಲ್ಲಿಯೂ ವೈಫಲ್ಯ ಅನುಭವಿಸಿದರು.
ಓದಿ: INDvs AUS 3rd T20: ಗೆದ್ದ ತಂಡಕ್ಕೆ ಸರಣಿ ಗೆಲುವಿನ ಸಿಹಿ.. ಹರ್ಷಲ್, ಚಹಲ್ ಮೇಲೆ ಒತ್ತಡ