ETV Bharat / sports

Cricket Records: 'RR' ಜೋಡಿಯ​ ದಾಖಲೆ ಸರಿಗಟ್ಟುವಲ್ಲಿ ಗಿಲ್ 'ಯಶಸ್ವಿ'!

author img

By

Published : Aug 13, 2023, 3:27 PM IST

Yashasvi Jaiswal & Shubman Gill: ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ವಿಕೆಟ್​ಗೆ 165 ರನ್​ ಪೇರಿಸಿದ ಯಶಸ್ವಿ ಜೈಸ್ವಾಲ್ ಮತ್ತು​ ಶುಭ್‌ಮನ್‌ ಗಿಲ್​ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್‌.ರಾಹುಲ್​ ದಾಖಲೆ ಸರಿಗಟ್ಟಿದರು.

yashasvi jaiswal and shubman gill
ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್

ಫ್ಲೋರಿಡಾ (ಅಮೆರಿಕ): ವೆಸ್ಟ್‌ ಇಂಡೀಸ್‌ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಮೊದಲ ವಿಕೆಟ್​ಗೆ 165 ರನ್​ ಜೊತೆಯಾಟ ನೀಡಿದ್ದು ಪಂದ್ಯವನ್ನು ಭಾರತ 9 ವಿಕೆಟ್‌ ಗಳಿಂದ ಗೆದ್ದುಕೊಂಡಿದೆ. ಆದರೆ ಮೊದಲ ವಿಕೆಟ್​ನ ಜೊತೆಯಾಟಕ್ಕೆ ಇನ್ನೂ 1 ರನ್​ ಸೇರಿದ್ದರೆ ಭಾರತದ ಪರ ಅತಿ ಹೆಚ್ಚು ರನ್​ ಗಳಿಸಿದ ಆರಂಭಿಕ ಜೋಡಿ ಎಂಬ ದಾಖಲೆಯ ಪುಟ ಸೇರುತ್ತಿತ್ತು.

ಸದ್ಯ ಅತಿ ಹೆಚ್ಚು ಜೊತೆಯಾಟದ ಆರಂಭಿಕ ಜೋಡಿಗಳ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನವನ್ನು ರೋಹಿತ್​ ಶರ್ಮಾ, ಕೆ.ಎಲ್.ರಾಹುಲ್​ ಅವರೊಂದಿಗೆ ಇವರು ಹಂಚಿಕೊಂಡಿದ್ದಾರೆ. ರಾಹುಲ್ ಮತ್ತು ರೋಹಿತ್ ಶರ್ಮಾ 2017ರಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 165 ರನ್‌ಗಳ ಜೊತೆಯಾಡಿದ್ದರು. ಧವನ್​ ಮತ್ತು ಶರ್ಮಾ ಐರ್ಲೆಂಡ್​ ಮೇಲೆ 160 ರನ್,​ನ್ಯೂಜಿಲೆಂಡ್​ ಮೇಲೆ 158 ರನ್​ ಗಳಿಸಿತ್ತು. ರಾಹುಲ್​ ಮತ್ತು ಶರ್ಮಾ ಅಫ್ಘಾನಿಸ್ಥಾನದ ವಿರುದ್ಧ 140 ರನ್​ ಗಳಿಸಿದ್ದರು. ಇದು ಭಾರತದ ಆರಂಭಿಕ ಜೋಡಿಯ ಐದು ಪ್ರಮುಖ ಜೊತೆಯಾಟವಾಗಿದೆ.

ಕಳೆದ ವರ್ಷ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಎರಡನೇ ವಿಕೆಟ್​ಗೆ 176 ರನ್‌ ದಾಖಲಿಸಿದ್ದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಗರಿಷ್ಠ ಜೊತೆಯಾಟ. 2019ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಉಸ್ಮಾನ್ ಘನಿ ಮತ್ತು ಹಜರತುಲ್ಲಾ ಝಜೈ 236 ರನ್ ಗಳಿಸಿದ್ದರು. ಇದು ಅಂತಾರಾಷ್ಟ್ರೀಯ ಟಿ20 ಅಧಿಕ ಆರಂಭಿಕ ಮತ್ತು ಒಟ್ಟಾರೆ ಜೊತೆಯಾಟವೆಂದು ಪರಿಗಣಿಸಲಾಗಿದೆ.

'ಯಶಸ್ವಿ' ಅರ್ಧಶತಕ: 21 ವರ್ಷ 227 ದಿನಗಳ ವಯಸ್ಸಿನ ಜೈಸ್ವಾಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅರ್ಧಶತಕ ಗಳಿಸಿದ ಭಾರತದ ಕಿರಿಯ ಆರಂಭಿಕ ಆಟಗಾರರಾಗಿದ್ದಾರೆ. ರೋಹಿತ್​ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ವರ್ಷ ಮತ್ತು 143 ದಿನಗಳ ವಯಸ್ಸಿನಲ್ಲಿ ಅರ್ಧ ಶತಕ ಗಳಿಸಿ ದಾಖಲೆ ಮಾಡಿದ್ದರು. ತಿಲಕ್​ ವರ್ಮಾ, ಶುಭ್‌ಮನ್​ ಗಿಲ್​ ಅವರಂತೆಯೇ ರಿಷಬ್​ ಪಂತ್​ ಸಹ ಕಿರಿಯ ವಯಸ್ಸಿನಲ್ಲಿ ಟಿ20 ಅರ್ಧಶತಕ ದಾಖಲಿಸಿದ್ದಾರೆ.

ಇದನ್ನೂ ಓದಿ: IND vs WI 5th T20: ಇಂದು ಭಾರತ - ವಿಂಡೀಸ್​ ಫೈನಲ್​ ಕದನ, ಗೆದ್ದವರಿಗೆ ಸಿರೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.