ಒವೆಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪ್ಯಾಟ್ ಕಮಿನ್ಸ್ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಭಾರತದ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟದ ನೆರವಿನಿಂದ ಭಾರತ ಮೂರನೇ ದಿನ ಸ್ವಲ್ಪ ಚೇತರಿಕೆ ಕಂಡುಕೊಂಡಿದ್ದು ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡಿತು.
ಆದರೆ ಈ ನಡುವೆ, ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ನೋಬಾಲ್ಗಾಗಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಇದುವರೆಗೆ 8 ನೋಬಾಲ್ಗಳನ್ನು ಹಾಕಿದರೆ ಅದರಲ್ಲಿ 6 ಕಮಿನ್ಸ್ ಅವರದ್ದೇ ಇದೆ. ಪ್ಯಾಟ್ ಅವರ ನೋಬಾಲ್ ಭಾರತಕ್ಕೆ ಎರಡು ಜೀವದಾನ ನೀಡಿದೆ. ನಿನ್ನೆ ಅಜಿಂಕ್ಯ ರಹಾನೆ ವಿಕೆಟ್ ತಪ್ಪಿದರೆ, ಇಂದು ಶಾರ್ದೂಲ್ ಠಾಕೂರ್ ಅವರ ವಿಕೆಟ್ ಉಳಿದಿದೆ.
-
Final prep in Sydney before flying out to England in a couple of days. All the boys buzzing for the Uk trip. Huge few months coming up 💪🏼 🏏
— Pat Cummins (@patcummins30) May 23, 2023 " class="align-text-top noRightClick twitterSection" data="
P.s. yes I know this is a no ball 🤦🏼♂️ @newbalance pic.twitter.com/rSF9WqOxJU
">Final prep in Sydney before flying out to England in a couple of days. All the boys buzzing for the Uk trip. Huge few months coming up 💪🏼 🏏
— Pat Cummins (@patcummins30) May 23, 2023
P.s. yes I know this is a no ball 🤦🏼♂️ @newbalance pic.twitter.com/rSF9WqOxJUFinal prep in Sydney before flying out to England in a couple of days. All the boys buzzing for the Uk trip. Huge few months coming up 💪🏼 🏏
— Pat Cummins (@patcummins30) May 23, 2023
P.s. yes I know this is a no ball 🤦🏼♂️ @newbalance pic.twitter.com/rSF9WqOxJU
ಟ್ರೋಲ್ ಏಕೆ?: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಗಿದ ನಾಲ್ಕು ದಿನದಲ್ಲಿ ಆ್ಯಶಸ್ ಸರಣಿಗೆ ಆಡಲಿದೆ. ಇದಕ್ಕಾಗಿ ಕಾಂಗರೂ ಪಡೆ ಇನ್ನು ಕೆಲವು ತಿಂಗಳು ಇಂಗ್ಲೆಂಡ್ನಲ್ಲೇ ಇರಲಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಆ್ಯಶಸ್ ಸರಣಿಗಾಗಿ ಆಸಿಸ್ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗೆ ದೊಡ್ಡ ಪ್ರವಾಸವನ್ನೇ ಕೈಗೊಂಡಿದೆ. ಈ ಪ್ರವಾಸಕ್ಕೂ ಮೊದಲು ಪ್ಯಾಟ್ ಕಮಿನ್ಸ್ ತಮ್ಮ ಟ್ವಿಟರ್ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ "ಒಂದೆರಡು ದಿನಗಳಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ಮೊದಲು ಸಿಡ್ನಿಯಲ್ಲಿ ಅಂತಿಮ ತಯಾರಿ. ಎಲ್ಲ ಹುಡುಗರು ಯುಕೆ ಪ್ರವಾಸಕ್ಕಾಗಿ ತಯಾರಾಗುತ್ತಿದ್ದಾರೆ" ಎಂದು ಬರೆದುಕೊಂಡಿದ್ದರು. ಅದರಲ್ಲಿ ಅವರು ಸಿಡ್ನಿ ಪಿಚ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಶೂ ಒಂದರ ಜಾಹೀರಾತು ಮಾಡಿದ್ದಾರೆ. ಆದರೆ ಅವರು ಮಾಡಿದ್ದು ನೋಬಾಲ್ ಆಗಿತ್ತು. ಅವರು ವಿಡಿಯೋ ಕ್ಯಾಪ್ಶನ್ನಲ್ಲಿ "ಇದು ನೋಬಾಲ್ ಎಂದು ತಿಳಿದಿದೆ" ಎಂದೂ ಬರೆದುಕೊಂಡಿದ್ದರು.
ಆದರೆ ಈಗ ಅವರು ಸತತ ನೋಬಾಲ್ ಗಳನ್ನು ಮಾಡುತ್ತಿರುವುದರಿಂದ ಟ್ವಿಟರ್ನಲ್ಲಿ ನೋಬಾಲ್ ಎಂಬ ಟ್ರೆಂಡಿಂಗ್ ಆಗಿದೆ. ಅಲ್ಲದೇ ಅವರ ವಿಡಿಯೋವನ್ನು ಶೇರ್ ಮಾಡಿ ನೋಬಾಲ್ ಹಾಕುವುದನ್ನು ಕಮಿನ್ಸ್ ಅಭ್ಯಾಸ ಮಾಡುತ್ತಿದ್ದರು ಎಂದು ಕಾಲೆಳೆಯುತ್ತಿದ್ದಾರೆ. ಇನ್ನೂ ಕೆಲವರು ಭಾರತದ ಸಂಕಷ್ಟದ ಪರಿಸ್ಥಿತಿ ಹಾಗೂ ಕಮಿನ್ಸ್ ನೋಬಾಲ್ ಎರಡನ್ನೂ ಲಗಾನ್ ಸಿನಿಮಾಕ್ಕೆ ಹೋಲಿಸುತ್ತಿದ್ದಾರೆ.
-
Cummins to Umpire : How was that
— Mr Perfect 🤟🏻 (@starmanjeet007) June 9, 2023 " class="align-text-top noRightClick twitterSection" data="
Umpire Given LBW OUT
Wait Wait Wait Twist Is here
Umpire : It’s No Ball
Smith : What
Umpire : His Foot Was Over the Line 🤣🤣 #ShardulThakur #WTC23Final @CricketAus @ImRo45 @jatinsapru @harbhajan_singh #Rahane pic.twitter.com/LDqh2CyU97
">Cummins to Umpire : How was that
— Mr Perfect 🤟🏻 (@starmanjeet007) June 9, 2023
Umpire Given LBW OUT
Wait Wait Wait Twist Is here
Umpire : It’s No Ball
Smith : What
Umpire : His Foot Was Over the Line 🤣🤣 #ShardulThakur #WTC23Final @CricketAus @ImRo45 @jatinsapru @harbhajan_singh #Rahane pic.twitter.com/LDqh2CyU97Cummins to Umpire : How was that
— Mr Perfect 🤟🏻 (@starmanjeet007) June 9, 2023
Umpire Given LBW OUT
Wait Wait Wait Twist Is here
Umpire : It’s No Ball
Smith : What
Umpire : His Foot Was Over the Line 🤣🤣 #ShardulThakur #WTC23Final @CricketAus @ImRo45 @jatinsapru @harbhajan_singh #Rahane pic.twitter.com/LDqh2CyU97
ಲಗಾನ್ ಸಿನಿಮಾದಲ್ಲಿ ಗೆಲುವಿಗೆ ಕೆಲವೇ ರನ್ ಬೇಕಿದ್ದಾಗ ಅಮೀರ್ ಖಾನ್ ವಿಕೆಟ್ ಹೋಗುತ್ತದೆ ಎಂದಾದಾಗ ಅಂಪೈರ್ ನೋಬಾಲ್ ಎಂದು ನೀಡಿದ್ದನ್ನು ಮತ್ತು ಅದರಲ್ಲಿ ಅಮೀರ್ ಖಾನ್ ಅವರ ನಟನೆಯ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ನಿನ್ನೆ ಅಜಿಂಕ್ಯ ರಹಾನೆ ಮತ್ತು ಇಂದು ಶಾರ್ದೂಲ್ ಠಾಕೂರ್ ಅವರ ವಿಕೆಟ್ ಅವರ ನೋಬಾಲ್ನಿಂದಾಗಿ ಉಳಿದುಕೊಂಡಿದೆ. ಅಲ್ಲದೇ ಇದು ಎರಡೂ ವಿಕೆಟ್ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದೆ.
ರಿವ್ಯೂ ಅದೃಷ್ಠ: ನಿನ್ನೆ ಅಜಿಂಕ್ಯಾ ರಹಾನೆ ಮತ್ತು ಇವತ್ತು ಶಾರ್ದೂಲ್ ಠಾಕೂರ್ ಮೂರನೇ ಅಂಪೈರ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಔಟ್ ಆಗಿ ಪೆವಿಲಿಯನ್ ಹಾದಿಹಿಡಿಯ ಬೇಕಿತ್ತು. ಎರಡೂ ಬಾರಿ ಭಾರತ ರಿವ್ಯೂ ತೆಗೆದುಕೊಂಡಿದ್ದರಿಂದ ಇಬ್ಬರು ಬ್ಯಾಟರ್ಗಳು ಉತ್ತಮ ರನ್ ಕೊಡುಗೆ ನೀಡಲು ಸಾಧ್ಯವಾಯಿತು.
ಇದನ್ನೂ ಓದಿ: WTC Final: ಭಾರತಕ್ಕೆ ರಹಾನೆ- ಶಾರ್ದೂಲ್ ಬಲ, 296 ರನ್‌ಗಳಿಗೆ ಆಲೌಟ್; ಆಸ್ಟ್ರೇಲಿಯಾಕ್ಕೆ 173 ರನ್‌ಗಳ ಮುನ್ನಡೆ