ETV Bharat / sports

WTC ಫೈನಲ್​ ವೇಳೆ ಬುಮ್ರಾ ಎಡವಟ್ಟು.. ತಕ್ಷಣವೇ ಡ್ರೆಸ್ಸಿಂಗ್​​ ರೂಂಗೆ ಓಡಿದ ವೇಗಿ! - ಭಾರತ-ನ್ಯೂಜಿಲ್ಯಾಂಡ್​ ತಂಡ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯದ ಕೊನೆಯ ದಿನವಾದ ಇಂದು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎಡವಟ್ಟು ಮಾಡಿಕೊಂಡಿದ್ದು, ತಮಾಷೆಗೊಳಗಾಗಿದ್ದಾರೆ.

Jasprit Bumrah
Jasprit Bumrah
author img

By

Published : Jun 22, 2021, 9:51 PM IST

ಸೌತಾಂಪ್ಟನ್​​: ಭಾರತ-ನ್ಯೂಜಿಲ್ಯಾಂಡ್​ ತಂಡಗಳ ಮಧ್ಯೆ ಟೆಸ್ಟ್​ ವಿಶ್ವ ಚಾಂಪಿಯನ್​ ಫೈನಲ್​ ಪಂದ್ಯ ನಡೆಯುತ್ತಿದ್ದು, ಇಂದು ಪಂದ್ಯದ ಕೊನೆಯ ದಿನವಾಗಿದೆ. ಇದರ ಮಧ್ಯೆ ಜಸ್ಪ್ರೀತ್ ಬುಮ್ರಾ ಮಾಡಿರುವ ಎಡವಟ್ಟುವೊಂದು ಇದೀಗ ತಮಾಷೆಗೆ ಕಾರಣವಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಫೈನಲ್​ಗೋಸ್ಕರ ಟೀಂ ಇಂಡಿಯಾ ಪ್ಲೇಯರ್ಸ್​ಗೆ ವಿಶೇಷ ಜರ್ಸಿ ನೀಡಲಾಗಿದೆ. ಆದರೆ, ಮೈದಾನಕ್ಕಿಳಿಯುವ ವೇಳೆ ಬುಮ್ರಾ ಹಳೆಯ ಜರ್ಸಿ ಹಾಕಿಕೊಂಡು ತಮಾಷೆಗೆ ಕಾರಣವಾಗಿದ್ದಾರೆ. ಮಳೆಯ ಕಾರಣ ಕೊನೆಯ ದಿನವಾದ ಇಂದು ಕೂಡ ಪಂದ್ಯ ಸ್ವಲ್ಪ ತಡವಾಗಿ ಆರಂಭಗೊಳ್ತು. ಈ ವೇಳೆ ವೇಗಿ ಬುಮ್ರಾ ಹಳೆಯ ಜರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದಿದ್ದು, ಒಂದು ಓವರ್​ ಕೂಡ ಎಸೆದಿದ್ದಾರೆ. ಇದಾದ ಬಳಿಕ ತಕ್ಷಣವೇ ಡ್ರೆಸ್ಸಿಂಗ್​ ರೂಂಗೆ ತೆರಳಿದ ಅವರು ಹೊಸ ಜರ್ಸಿ ಹಾಕಿಕೊಂಡು ಬಂದಿದ್ದಾರೆ.

ಇದನ್ನೂ ಓದಿರಿ: WTC Final: ಶಮಿ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ: 249 ಕ್ಕೆ ಆಲೌಟ್, 32 ರನ್​ಗಳ ಮುನ್ನಡೆ

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ 26 ಓವರ್​ ಎಸೆದಿರುವ ಬುಮ್ರಾ 9 ಮೆಡನ್​ ಓವರ್​ ಹಾಕಿದ್ದಾರೆ. ಆದರೆ, ಯಾವುದೇ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 217ರನ್​ಗಳಿಕೆ ಮಾಡಿದ್ರೆ, ನ್ಯೂಜಿಲ್ಯಾಂಡ್​​ 249 ರನ್​ಗಳಿಸಿ ಆಲೌಟ್​ ಆಗಿದೆ. ಸದ್ಯ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ ಆರಂಭ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.