ETV Bharat / sports

WTC Final: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌; 2ನೇ ದಿನದಾಟಕ್ಕೂ ಮಳೆ ಅಡ್ಡಿ..? - ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ 2ನೇ ದಿನವಾದ ಇಂದು ಕೂಡ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಇಂಗ್ಲೆಂಡ್‌ನ ಸೌಥಾಂಪ್ಟನ್‌ನ ರೋಸ್‌ ಬೌಲ್‌ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಫೈನಲ್‌ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. ಆದರೆ ಪಂದ್ಯದ ಮೊದಲ ದಿನವಾದ ಶುಕ್ರವಾರ ಮಳೆಯಿಂದಾಗಿ ಪಂದ್ಯ ಆರಂಭವಾಗಲೇ ಇಲ್ಲ.

WTC Final, India vs New Zealand, Southampton Weather: Will Rain Play Spoilsport Again?
ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌; 2ನೇ ದಿನವೂ ಮಳೆಯಾಟ..!
author img

By

Published : Jun 19, 2021, 1:15 PM IST

Updated : Jun 19, 2021, 1:34 PM IST

ಸೌಥಾಂಪ್ಟನ್ (ಇಂಗ್ಲೆಂಡ್): ಸೌಥಾಂಪ್ಟನ್‌ನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಎರಡನೇ ದಿನವಾದ ಇಂದು ಕೂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮಳೆಯಿಂದಾಗಿ 5 ದಿನಗಳ ಪಂದ್ಯಕ್ಕೆ ಹೆಚ್ಚುವರಿಯಾಗಿ ಒಂದು ದಿನವನ್ನು ಕಾಯ್ದಿರಿಸಲಾಗಿತ್ತು. ಇದೀಗ ಆ ದಿನವೂ ಮಳೆಗೆ ಬಲಿಯಾಗುವ ಅನುಮಾನ ಮೂಡಿದೆ.

ಸೌಥಾಂಪ್ಟನ್‌ನ ಹವಾಮಾನ ವೆಬ್‌ಸೈಟ್‌ ಪ್ರಕಾರ, ಸ್ಥಳೀಯ ಕಾಲಮಾನದಂತೆ ಮಧ್ಯಾಹ್ನ 2 ಗಂಟೆ ಬಳಿಕ ಭಾಗಶಃ ಬಿಸಿಲಿನ ವಾತಾವರಣ ಕಂಡು ಬರಲಿದೆ. ಆದರೆ ಮುಂದಿನ 3 ದಿನಗಳ ರಾತ್ರಿ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ವೆಬ್​ಸೈಟ್​ ಹೇಳಿದೆ. ಒಂದು ವೇಳೆ ಇಂದು ಬಿಸಿಲಿನ ವಾತಾವರಣ ಕಂಡು ಬಂದರೆ ಬೆಳಗ್ಗೆ 10 ಗಂಟೆಗೆ (2.30pm ಐಎಸ್‌ಟಿ) ಟಾಸ್‌ ಹಾಕಲಾಗುತ್ತದೆ. ಆದರೆ ಮಳೆ ಹೀಗೆಯೇ ಮುಂದುವರಿದರೆ ಅಂಪೈರ್‌ಗಳು 2ನೇ ದಿನದ ಆಟವನ್ನೂ ನಿಲ್ಲಿಸುವುದರಲ್ಲಿ ಅಶ್ಚರ್ಯವಿಲ್ಲ.

ಇಂಗ್ಲೆಂಡ್‌ನ ಸೌಥಾಂಪ್ಟನ್‌ನ ರೋಸ್‌ ಬೌಲ್‌ ಮೈದಾನದಲ್ಲಿ ಆರಂಭವಾಗಬೇಕಿದ್ದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಮೊದಲ ದಿನವಾದ ನಿನ್ನೆ ಕೂಡ ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೆ ದಿನದಾಟವನ್ನು ರದ್ದು ಮಾಡಲಾಗಿತ್ತು.

ಐಸಿಸಿ ಏಕದಿನ ವಿಶ್ವಕಪ್‌ಗೆ ಸಮಾನವಾಗಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆಯೋಜಿಸಲಾಗಿದೆ. ಕಳೆದೆರಡು ವರ್ಷಗಳಲ್ಲಿ ಅಗ್ರ ಎರಡು ಸ್ಥಾನಗಳನ್ನು ಹೊಂದಿರುವ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಫೈನಲ್‌ಗೆ ಪ್ರವೇಶಿಸಿದ್ದವು. ಕೋವಿಡ್‌ ಜೀವ ಸುರಕ್ಷಾ ವಲಯದಲ್ಲಿ ಚೊಚ್ಚಲ ಡಬ್ಲುಟಿಸಿ ಫೈನಲ್‌ ಪಂದ್ಯ ನಡೆಯುತ್ತಿದೆ.

Last Updated : Jun 19, 2021, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.