ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 170 ರನ್ಗಳಿಗೆ ಆಲೌಟ್ ಆಗಿದ್ದು, ಕಿವೀಸ್ ತಂಡಕ್ಕೆ ಗೆಲ್ಲಲು ಕೇವಲ 139 ರನ್ಗಳ ಟಾರ್ಗೆಟ್ ನೀಡಿದೆ.
64ಕ್ಕೆ2 ಇದ್ದ ಭಾರತ ಕೊನೆಯ ದಿನವಾದ ಇಂದು 73 ಓವರ್ಗಳಲ್ಲಿ ಕೇವಲ 170ಕ್ಕೆ ಸರ್ವಫತನಗೊಂಡಿತು. 5ನೇ ದಿನ 8 ರನ್ಗಳಿಸಿದ್ದ ಕೊಹ್ಲಿ ಇಂದು ಕೇವಲ 13ರನ್ ಮತ್ತು ಪೂಜಾರ 15 ರನ್ಗಳಿಸಿ ಕೈಲ್ ಜೆಮೀಸನ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಉಪನಾಯಕ ಅಜಿಂಕ್ಯ ರಹಾನೆ 15 ರನ್ಗಳಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ವಾಟ್ಲಿಂಗ್ ಕ್ಯಾಚ್ ನೀಡಿದರೆ ಔಟಾದರು. 109ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಜಡೇಜಾ, ಪಂತ್ ಜೊತೆ ಸೇರಿ 6ನೇ ವಿಕೆಟ್ಗೆ 33 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಆದರೆ 16 ರನ್ಗಳಿಸಿದ್ದ ಜಡೇಜಾ ನೀಲ್ ವ್ಯಾಗ್ನರ್ ಬೌಲಿಂಗ್ನಲ್ಲಿ ಕೀಪರ್ ವಾಟ್ಲಿಂಗ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
-
ALL OUT ☝️
— ICC (@ICC) June 23, 2021 " class="align-text-top noRightClick twitterSection" data="
The 🎯 is set for the @BLACKCAPS! #WTC21 Final | #INDvNZ | https://t.co/AKyfpKI3ag pic.twitter.com/gRWvTjXoAu
">ALL OUT ☝️
— ICC (@ICC) June 23, 2021
The 🎯 is set for the @BLACKCAPS! #WTC21 Final | #INDvNZ | https://t.co/AKyfpKI3ag pic.twitter.com/gRWvTjXoAuALL OUT ☝️
— ICC (@ICC) June 23, 2021
The 🎯 is set for the @BLACKCAPS! #WTC21 Final | #INDvNZ | https://t.co/AKyfpKI3ag pic.twitter.com/gRWvTjXoAu
ಜಡೇಜಾ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ದಿಡೀರ್ ಕುಸಿತ ಅನುಭವಿಸಿದ ಕೇವಲ 170 ರನ್ಗಳಿಗೆ ಸರ್ವಫತನಗೊಂಡಿತು. ರಿಷಭ್ ಪಂತ್ 88 ಎಸೆತಗಳಲ್ಲಿ 4 ಬೌಂಡರಿ ಸಹಿತ 41 ರನ್ಗಳಿಸಿ ಬೇಡದ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಕೈಚೆಲ್ಲಿದರು. ಅಶ್ವಿನ್ 7, ಶಮಿ 13 ಮತ್ತು ಬುಮ್ರಾ ಸೊನ್ನೆಗೆ ವಿಕೆಟ್ ಒಪ್ಪಿಸಿದರು.
ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 48ಕ್ಕೆ 4, ಟ್ರೆಂಟ್ ಬೌಲ್ಟ್ 39ಕ್ಕೆ3, ಕೈಲ್ ಜೆಮೀಸನ್ 30ಕ್ಕೆ2 ಮತ್ತು ನೀಲ್ ವ್ಯಾಗ್ನರ್ 44ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ:ವಿರಾಟ್ ಕೊಹ್ಲಿ ಬ್ಯಾಟಿಂಗ್ 2014ರ ಪ್ರವಾಸ ನೆನಪಿಸುತ್ತಿದೆ: ನಾಸಿರ್ ಹುಸೇನ್