ಸೌಥಾಂಪ್ಟನ್: ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC) ಫೈನಲ್ ಹಣಾಹಣಿಯ 5ನೇ ದಿನವಾದ ಮಂಗಳವಾರ ಅಭಿಮಾನಿಗಳು ನ್ಯೂಜಿಲೆಂಡ್ ತಂಡದ ಕೆಲವು ಆಟಗಾರರನ್ನು ನಿಂದಿಸಿದ ಘಟನೆ ನಡೆದಿದೆ.
ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಲವು ಅಭಿಮಾನಿಗಳು ಆಟಗಾರರನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಅಲ್ಲಿ ಪಂದ್ಯ ವಿಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಐಸಿಸಿ ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತುಕೊಂಡ ರೋಸ್ ಬೌಲ್ ಅಂಗಣದ ರಕ್ಷಣಾ ಸಿಬ್ಬಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಗಡೆ ಕಳುಹಿಸಿದ್ದರು.
-
Just to be clear, I have no idea nor interest in who these fans are, their ethicity, who they support, or where they lay their heads. I heard them through the broadcast. Whoever they are, their behaviour was not acceptable, they were identified and they were removed. That's all. https://t.co/D4D4VCPvmD
— Dominic da Souza (@teddypaton) June 22, 2021 " class="align-text-top noRightClick twitterSection" data="
">Just to be clear, I have no idea nor interest in who these fans are, their ethicity, who they support, or where they lay their heads. I heard them through the broadcast. Whoever they are, their behaviour was not acceptable, they were identified and they were removed. That's all. https://t.co/D4D4VCPvmD
— Dominic da Souza (@teddypaton) June 22, 2021Just to be clear, I have no idea nor interest in who these fans are, their ethicity, who they support, or where they lay their heads. I heard them through the broadcast. Whoever they are, their behaviour was not acceptable, they were identified and they were removed. That's all. https://t.co/D4D4VCPvmD
— Dominic da Souza (@teddypaton) June 22, 2021
ಐಸಿಸಿ ಅಧಿಕಾರಿಗಳು ಈ ವಿಷಯವನ್ನು ಕೂಡಲೇ ಸ್ಟೇಡಿಯಂನ ರಕ್ಷಣಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ರಕ್ಷಣಾ ಸಿಬ್ಬಂದಿ ತಕ್ಷಣ ಗ್ಯಾಲರಿಯಲ್ಲಿದ್ದ ಆ ಇಬ್ಬರು ವ್ಯಕ್ತಿಗಳನ್ನು ಅಂಗಳದಿಂದ ಹೊರ ಕಳುಹಿಸಿದ್ದಾರೆ.
"ನಿಂದನೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿ ಅಂಗಣದಿಂದ ಹೊರಗೆ ಕಳುಹಿಸಲಾಗಿದೆ. ಕ್ರಿಕೆಟ್‌ನಲ್ಲಿ ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ" ಎಂದು ಐಸಿಸಿ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.