ಸೌತಾಂಪ್ಟನ್ : ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಲಾಲಾರಸವನ್ನು ಬಳಸದೇ ಚೆಂಡನ್ನು ಸ್ವಿಂಗ್ ಮಾಡಬಹುದು ಎಂದು ಟೀಂ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ಕಾರಣದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಲಾಲಾರಸವನ್ನು ಚೆಂಡಿಗೆ ಹಚ್ಚುವುದನ್ನು ನಿಷೇಧಿಸಿತ್ತು.
ಆದರೆ, ಇದರಿಂದ ಚೆಂಡು ಸ್ವಿಂಗ್ ಮಾಡುವುದಕ್ಕಾಗುವುದಿಲ್ಲ ಎಂದು ಕೆಲವರು ವಾದಿಸಿದ್ದರು. ಇದರಿಂದ ಬೌಲರ್ಗಳಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿತ್ತು. ಆದರೆ, ಭಾರತದ ವೇಗಿ ಇಶಾಂತ್ ಚೆಂಡನ್ನು ಸ್ವಿಂಗ್ ಮಾಡಲು ಲಾಲಾರಸದ ಅವಶ್ಯಕತೆಯಿಲ್ಲ ಎಂದಿದ್ದಾರೆ. ಸ್ವಿಂಗ್ ಮಾಡುವುದು ಕಷ್ಟ ಎಂದು ನಾನು ಭಾವಿಸುವುದಿಲ್ಲ, ಲಾಲಾರಸವಿಲ್ಲದೆ ಚೆಂಡು ಸ್ವಿಂಗ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ.
ಆದರೆ, ಚೆಂಡನ್ನು ಕಾಪಾಡಿಕೊಳ್ಳಲು ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಇಂತಹ ವಾತಾವರಣದಲ್ಲಿ ಚೆಂಡನ್ನು ಕಾಪಾಡಿಕೊಂಡರೆ, ಬೌಲರ್ಗಳಿಗೆ ವಿಕೆಟ್ ಪಡೆಯಲು ತುಂಬಾ ಸುಲಭವಾಗುತ್ತದೆ ಎಂದು ಇಶಾಂತ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇಂಗ್ಲಿಷ್ ಪರಿಸ್ಥಿತಿಯ ಬಗ್ಗೆ ಮಾತನಾಡಿ"ಇಲ್ಲಿ ಯಶಸ್ವಿಯಾಗಬೇಕಾದರೆ ನಿಮಗೆ ವಿಭಿನ್ನ ತರಬೇತಿಯ ಅಗತ್ಯವಿರುತ್ತದೆ ಮತ್ತು ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ಸ್ವಲ್ಪ ಸಮಯದ ನಂತರ ನೀವು ರಿವರ್ಸ್ ಸ್ವಿಂಗ್ ಪಡೆಯುತ್ತೀರಿ. ಆದರೆ, ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಮಾಡುವಾಗ ಫುಲ್ಲರ್ ಆಗುವ ಸಾಧ್ಯತೆಯಿಂದ ಮೊದಲು ನೀವು ಲೆಂತ್ಸ್ಗಳಿಗೆ ಹೊಂದಿಕೊಳ್ಳಬೇಕು" ಎಂದು ಇಶಾಂತ್ ಹೇಳಿದ್ದಾರೆ.
ಇದನ್ನು ಓದಿ: ಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್: ದಾದಾ ಅಧಿಕೃತ ಘೋಷಣೆ