ಭಾರತ ತಂಡದ ಅನುಭವಿ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ ಮೇಲೆ ಆಸ್ಟ್ರೇಲಿಯನ್ ಆಟಗಾರರಿಗೆ ಭಯವಿದೆ. ಇಂಗ್ಲೆಂಡ್ನ ವೇಗದ ಪಿಚ್ನಲ್ಲೂ ಅವಳಿ ಸ್ಪಿನ್ನರ್ಗಳು ಕಮಾಲ್ ಮಾಡುತ್ತಾರೆ ಎಂದು ಆಸ್ಟ್ರೇಲಿಯಾ ತಂಡದ ಉಪನಾಯಕ ಈ ಹಿಂದೆಯೇ ಹೇಳಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾರತದ ಆಡುವ ಬಳಗದಲ್ಲಿ ಇಬ್ಬರೂ ಸ್ಪಿನ್ನರ್ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರವೀಂದ್ರ ಜಡೇಜಾ ಬೌಲಿಂಗ್ ಜೊತೆಗೆ ಈಗ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಬ್ಯಾಟಿಂಗ್ನಿಂದ ಹೆಚ್ಚು ಸದ್ದು ಮಾಡಿದ್ದರು. ಹೀಗಾಗಿ ರಿಕ್ಕಿ ಪಾಂಟಿಂಗ್ ಅವರು ಜಡೇಜಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
-
Spin to win 💫
— ICC (@ICC) June 5, 2023 " class="align-text-top noRightClick twitterSection" data="
On the ICC Review, Ricky Ponting talked about India backing their ace spinners for the #WTC23 final.https://t.co/lc1izXWMsL
">Spin to win 💫
— ICC (@ICC) June 5, 2023
On the ICC Review, Ricky Ponting talked about India backing their ace spinners for the #WTC23 final.https://t.co/lc1izXWMsLSpin to win 💫
— ICC (@ICC) June 5, 2023
On the ICC Review, Ricky Ponting talked about India backing their ace spinners for the #WTC23 final.https://t.co/lc1izXWMsL
ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಿತ್ತು. ಈ ಪಂದ್ಯದ ಫಲಿತಾಂಶದ ಆಧಾರದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ತಂಡಗಳು ಯಾವುದು ಎಂದು ನಿರ್ಧಾರ ಆಗುವುದಿತ್ತು. ಭಾರತ ಈ ಸರಣಿಯಲ್ಲಿ 2-1 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಇದರಲ್ಲಿ ಅವಳಿ ಸ್ಪಿನ್ನರ್ಗಳು ಭರ್ಜರಿ ಬೌಲಿಂಗ್ ಮಾಡಿದ್ದರು. ಜಡೇಜಾ ಎರಡು ಬಾರಿ ಸರಣಿಯಲ್ಲಿ 5 ವಿಕೆಟ್ ಗೊಂಚಲು ಪಡೆದರೆ, ಅಶ್ವಿನ್ ಒಂದು ಬಾರಿ ಪಂಚ್ ಕಜ್ಜಾಯ ಸವಿದಿದ್ದರು. ಇದು ಭಾರತದ ಗೆಲುವಿಗೆ ಮತ್ತೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಕ್ಕೆ ಸಹಕಾರಿಯಾಗಿತ್ತು.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಪಾಂಟಿಂಗ್ ಅವರು ಜಡೇಜಾ ಅವರನ್ನು ಬೌಲರ್‌ಗಿಂತ ಬ್ಯಾಟರ್ ಆಗಿ ನೋಡಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ರಿಕ್ಕಿ, ಅಶ್ವಿನ್ ಅವರನ್ನು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಪಿನ್ ಬೌಲರ್ ಆಗಿ ಸೇರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ. ಭಾರತ ಆಡುವ 11ರ ಬಳಗದ ಬಗ್ಗೆ ಕೇಳಲಾದ ಪ್ರಶ್ನೆಗೆ ಪಾಂಟಿಂಗ್, ಅಶ್ವಿನ್ ಮತ್ತು ಜಡೇಜಾ ಜೋಡಿಯ ಬಗ್ಗೆ ಒತ್ತಿ ಹೇಳಿದ್ದಾರೆ. ಜಡೇಜಾ ಬ್ಯಾಟಿಂಗ್‌ನಲ್ಲಿ 6ನೇ ಸ್ಥಾನದಲ್ಲಿ ಬರಬೇಕು ಎಂದು ಕಿವಿಮಾತು ನುಡಿದಿದ್ದಾರೆ. "ಜಡೇಜಾರ ಬ್ಯಾಟಿಂಗ್ ಎಷ್ಟು ಸುಧಾರಿಸಿದೆ ಎಂದರೆ ಅವರನ್ನು ಬೌಲರ್ ಎಂದಲ್ಲ ಬ್ಯಾಟರ್ ಎಂದು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು" ಎಂದು ಅಭಿಪ್ರಾಯಿಸಿದ್ದಾರೆ.
ಜಡೇಜಾ ಈ ವರ್ಷ ಐಪಿಎಲ್ನಲ್ಲೂ ತಮ್ಮ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ಗೆ ಧೋನಿಯೊಂದಿಗೆ ಸೇರಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಬಾಲ್ಗೆ ಹತ್ತು ರನ್ ಬೇಕಾಗಿದ್ದಾಗ ಅನುಭವಿ ಬೌಲರ್ ಮೋಹಿತ್ ಶರ್ಮಾಗೆ ಸಿಕ್ಸ್ ಮತ್ತು ಫೋರ್ ಬಾರಿಸಿ 5ನೇ ಬಾರಿಗೆ ಚೆನ್ನೈಗೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ.
"ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ತವರು ಸರಣಿಯಲ್ಲಿ ಅಶ್ವಿನ್ ಒಟ್ಟು 25 ವಿಕೆಟ್‌ಗಳೊಂದಿಗೆ ತಮ್ಮ ಪ್ರಾಬಲ್ಯ ತೋರಿಸಿದರು. ಜಡೇಜಾ ಮತ್ತು ಅಶ್ವಿನ್ ಸ್ಪಿನ್ ಪಿಚ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರೂ ಅಶ್ವಿನ್ 13 ಟೆಸ್ಟ್‌ಗಳಲ್ಲಿ 61 ವಿಕೆಟ್‌ಗಳನ್ನು ಕಬಳಿಸಿ, ಪ್ರಸ್ತುತ ಡಬ್ಲ್ಯುಟಿಸಿಯಲ್ಲಿ ಮೂರನೇ ಅತ್ಯಧಿಕ ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಈ ಮೂಲಕ ವಿವಿಧ ಪರಿಸ್ಥಿತಿಯ ಪಿಚ್ನಲ್ಲಿಯೂ ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಜಡೇಜಾ ಅವರಿಗಿಂತ ಅಶ್ವಿನ್ ಹೆಚ್ಚು ಕೌಶಲ್ಯ ಮತ್ತು ಉತ್ತಮ ಟೆಸ್ಟ್ ಬೌಲರ್ ಎಂಬುದರಲ್ಲಿ ಸಂದೇಹವಿಲ್ಲ" ಎಂದು ಪಾಂಟಿಂಗ್ ಹೇಳುತ್ತಾರೆ.
ಅಶ್ವಿನ್ ಮತ್ತು ಜಡೇಜಾ ಜೊತೆಗೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಬಗ್ಗೆಯೂ ಪಾಂಟಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ. ಐದನೇ ದಿನದವರೆಗೆ ಪಂದ್ಯ ಹೋದಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯವಾಗಲಿದೆ. ಭಾರತ ಬ್ಯಾಟಿಂಗ್ನಲ್ಲಿದ್ದರೆ ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ನಾಥನ್ ಲಯಾನ್ ಕಣಕ್ಕಿಳಿಯಲಿದ್ದಾರೆ" ಎಂದು ಹೇಳಿದ್ದಾರೆ. 35 ವರ್ಷದ ಲಿಯಾನ್ 19 ಟೆಸ್ಟ್‌ಗಳಲ್ಲಿ 83 ವಿಕೆಟ್‌ಗಳೊಂದಿಗೆ ಪ್ರಸ್ತುತ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೀರೀಸ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನೂ ಹೌದು.
ಇದನ್ನೂ ಓದಿ: ಪಂದ್ಯ ಡ್ರಾ, ರದ್ದಾದರೆ ಟೆಸ್ಟ್ ಚಾಂಪಿಯನ್ ಟ್ರೋಫಿ ಯಾರಿಗೆ? ಡಬ್ಲ್ಯೂಟಿಸಿಯಲ್ಲಿ ಈ ನಿಯಮ ರದ್ದು