ಓವೆಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲಲು ಭಾರತಕ್ಕೆ ಕಾಂಗರೂ ಪಡೆ 444 ರನ್ನ ಗುರಿಯನ್ನು ನೀಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ 270 ರನ್ಗೆ 8 ವಿಕೆಟ್ ಕಳೆದುಕೊಂಡ ನಂತರ ಆಸಿಸ್ ಡಿಕ್ಲೇರ್ ಘೋಷಿಸಿದೆ. ಇಂದಿನ ಒಂದು ಸೆಷನ್ ಮತ್ತು ನಾಳೆ ಸಂಪೂರ್ಣ ದಿನ ಭಾರತದ ಕೈಯಲ್ಲಿದ್ದು, ಡ್ರಾ ಅಥವಾ ಗೆಲುವಿನ ಲೆಕ್ಕಾಚಾರದಲ್ಲಿ ಬ್ಯಾಟ್ ಬೀಸಬೇಕಿದೆ.
ಭೋನಜ ವಿರಾಮಕ್ಕೆದ ವೇಳೆಗೆ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತ್ತು. ಲಬುಶೇನ್ ಮತ್ತು ಗ್ರೀನ್ ಅವರ ವಿಕೆಟ್ ಪತನದ ನಂತರ ಅಲೆಕ್ಸ್ ಕ್ಯಾರಿ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಮಾಡುತ್ತಿದ್ದರು. ಭೋಜನ ವಿರಾಮದ ನಂತರ ಕ್ಯಾರಿ ಮತ್ತು ಸ್ಟಾರ್ಕ್ ಉತ್ತಮ ಜೊತೆಯಾಟ ಮಾಡಿದರು.
-
India have a stiff target to chase down to win the #WTC23 title 😮
— ICC (@ICC) June 10, 2023 " class="align-text-top noRightClick twitterSection" data="
Follow the #WTC23 Final 👉 https://t.co/wJHUyVnX0r pic.twitter.com/yLYEqqTu6w
">India have a stiff target to chase down to win the #WTC23 title 😮
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/yLYEqqTu6wIndia have a stiff target to chase down to win the #WTC23 title 😮
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/yLYEqqTu6w
57 ಬಾಲ್ ಎದುರಿಸದ ಸ್ಟಾರ್ಕ್ 7 ಬೌಂಡರಿಗಳಿಂದ 41 ರನ್ ಕಲೆಹಾಕಿ ವಿಕೆಟ್ ಕೊಟ್ಟರು. ನಂತರ ಬಂದ ನಾಯಕ ಕಮಿನ್ಸ್ ಐದು ರನ್ಗೆ ವಿಕೆಟ್ ಕೊಟ್ಟರು. ಇದರ ಬೆನ್ನಲ್ಲೆ 443 ರನ್ ಮುನ್ನಡೆ ಇಟ್ಟುಕೊಂಡ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಿಸಿತು.
ಭಾರತದ ಪರ ಜಡೇಜ ಮೂರು, ಉಮೇಶ್ ಯಾದವ್ ಮತ್ತು ಶಮಿ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಒಂದು ವಿಕೆಟ್ ಪಡೆದಿದ್ದಾರೆ.
ಭೋನಜ ವಿರಾಮಕ್ಕೆ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ದಿನದತ್ತ ಸಾಗುತ್ತಿದ್ದು, ಪಂದ್ಯ ಹೆಚ್ಚು ಕುತೂಹಲಕಾರಿಯಾಗಿ ಸಾಗುತ್ತಿದೆ. ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ಭಾರತ 2 ವಿಕೆಟ್ಗಳನ್ನು ಕಬಳಿಸಿದ್ದು 78 ರನ್ ಬಿಟ್ಟುಕೊಟ್ಟಿದೆ. ಕ್ರೀಸ್ನಲ್ಲಿ 41 ರನ್ ಗಳಿಸಿ ಅಲೆಕ್ಸ್ ಕ್ಯಾರಿ ಮತ್ತು 11 ರನ್ ಗಳಿಸ ಮಿಚೆಲ್ ಸ್ಟಾರ್ಕ್ ಆಡುತ್ತಿದ್ದಾರೆ.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 201 ರನ್ ಕಲೆಹಾಕಿದ್ದು, ಒಟ್ಟು 374 ರನ್ನ ಮುನ್ನಡೆಯನ್ನು ಪಡೆದುಕೊಂಡಿದೆ. ಎರಡನೇ ಸೆಷನ್ ಸಂಪೂರ್ಣ ಆಸಿಸ್ಗೆ ಬಿಟ್ಟುಕೊಡದೇ ವಿಕೆಟ್ ಆದಷ್ಟು ಬೇಗ ವಿಕೆಟ್ ತೆಗೆಯುವ ಜವಾಬ್ದಾರಿ ಬೌಲರ್ಗಳ ಮೇಲಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಆಸಿಸ್ 123ಕ್ಕೆ 4 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಕ್ರೀಸ್ನಲ್ಲಿ 41 ರನ್ ಗಳಿಸಿ ಮಾರ್ನಸ್ ಲಬುಶೇನ್ ಮತ್ತು 7 ರನ್ ಗಳಿಸಿ ಗ್ರೀನ್ ಇದ್ದರು. ಇಂದು ಮುಂಜಾನೆ ಸೆಷನ್ ಆರಂಭವಾಗುತ್ತಿದ್ದಂತೆ ಉಮೇಶ್ ಯಾದವ್ ಅರ್ಧಶತಕದ ಹತ್ತಿರ ಇದ್ದ ಮಾರ್ನಸ್ ಲಬುಶೇನ್ (41) ಅವರ ವಿಕೆಟ್ ಪಡೆದರು. ನಂತರ ಅಲೆಕ್ಸ್ ಕ್ಯಾರಿ ಗ್ರೀನ್ ಜೊತೆಗೂಡಿದರು.
ಕ್ಯಾರಿ ಮತ್ತು ಗ್ರೀನ್ ಒಂದನೇ ಸೆಷನ್ನ್ನು ಉತ್ತಮವಾಗಿ ಬಳಸಿಕೊಂಡರು. ಆದರೆ ರವೀಂದ್ರ ಜಡೇಜ ಮತ್ತೆ ತಮ್ಮ ಸ್ಪಿನ್ ಕೈಚಳಕದ ಮೂಲಕ ವಿಕೆಟ್ ಕಾಯ್ದುಕೊಳ್ಳುತ್ತಿದ್ದ ಗ್ರೀನ್ ವಿಕೆಟ್ ಪಡೆದುಕೊಂಡರು. 95 ಬಾಲ್ ಆಡಿದ ಗ್ರೀನ್ ನಾಲ್ಕು ಬೌಂಡರಿ ಗಳಿಸಿ 25 ರನ್ಕಲೆಹಾಕಿ ವಿಕೆಟ್ ಒಪ್ಪಿಸಿದರು. ಗ್ರೀನ್ ವಿಕೆಟ್ನಂತರ ಕ್ಯಾರಿ ರನ್ ಗಳಿಕೆಯ ಗತಿಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಬೃಹತ್ ಗುರಿ ನೀಡುವ ಯೋಜನೆಯಲ್ಲಿ ಮುಂದುವರೆಯುತ್ತಿದ್ದಾರೆ.
ಇದನ್ನೂ ಓದಿ: ICC WTC Final: ನಾಲ್ಕನೇ ದಿನ ನಡೆಯುತ್ತಾ ಜಡೇಜಾ ಜಾದು.. 200 ಒಳಗೆ ಆಸಿಸ್ ಕಟ್ಟಿಹಾಕಿದಲ್ಲಿ ಭಾರತಕ್ಕೆ ಗೆಲುವು ಸನಿಹ