ಮುಂಬೈ (ಮಹಾರಾಷ್ಟ್ರ): ನ್ಯಾಟ್ ಸೀವರ್ ಬ್ರಂಟ್ ಅಜೇಯ ಅರ್ಧಶತಕ ಮತ್ತು ಇಸ್ಸಿ ವಾಂಗ್ ಹ್ಯಾಟ್ರಿಕ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಾರಿಯರು ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ತಲುಪಿದರು. ಈಗಾಗಲೇ ಅಂತಿಮ ಸುತ್ತು ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಪ್ರಶಸ್ತಿಗಾಗಿ ಸೆಣಸಾಡಲಿದೆ.
-
𝐈𝐍𝐓𝐎 𝐓𝐇𝐄 𝐅𝐈𝐍𝐀𝐋! 🔥🔥
— Women's Premier League (WPL) (@wplt20) March 24, 2023 " class="align-text-top noRightClick twitterSection" data="
Mark your calendars folks 🗓️@mipaltan will face the @DelhiCapitals in the summit clash of the #TATAWPL 😎 pic.twitter.com/gxsXQQ6Ihf
">𝐈𝐍𝐓𝐎 𝐓𝐇𝐄 𝐅𝐈𝐍𝐀𝐋! 🔥🔥
— Women's Premier League (WPL) (@wplt20) March 24, 2023
Mark your calendars folks 🗓️@mipaltan will face the @DelhiCapitals in the summit clash of the #TATAWPL 😎 pic.twitter.com/gxsXQQ6Ihf𝐈𝐍𝐓𝐎 𝐓𝐇𝐄 𝐅𝐈𝐍𝐀𝐋! 🔥🔥
— Women's Premier League (WPL) (@wplt20) March 24, 2023
Mark your calendars folks 🗓️@mipaltan will face the @DelhiCapitals in the summit clash of the #TATAWPL 😎 pic.twitter.com/gxsXQQ6Ihf
ಶುಕ್ರವಾರ ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳೆಯರು, ಯುಪಿ ವಾರಿಯರ್ಸ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ಗಳಲ್ಲಿ 4 ವಿಕೆಟ್ಗೆ 182 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಯುಪಿ ತೆವಳುತ್ತಾ ಸಾಗಿ 18 ನೇ ಓವರ್ಗೆ ಎಲ್ಲ ವಿಕೆಟ್ ಕಳೆದುಕೊಂಡು 110 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು.
ಸವಾಲು ಪಡೆಯದೆ ಹೊರಬಿದ್ದ ಯುಪಿ: ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಸವಾಲನ್ನು ಮೀರುವಲ್ಲಿ ಯುಪಿ ವಾರಿಯರ್ಸ್ ವಿಫಲವಾಯಿತು. ಒತ್ತಡಕ್ಕೆ ಒಳಗಾದ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಶ್ವೇತಾ ಶೆರಾವತ್ 1 ರನ್ ಗಳಿಸಿ ಔಟಾದರು. ಅಲಿಸ್ಸಿ ಹೀಲಿ 11, ಮೆಕ್ಗ್ರಾಥ್ 7, ಗ್ರೇಸ್ ಹ್ಯಾರೀಸ್ 14, ದೀಪ್ತಿ ಶರ್ಮಾ 16 ರನ್ಗೆ ಸುಸ್ತಾದರು. ಇನ್ನುಳಿದ ಬ್ಯಾಟರ್ಗಳು ಎರಡಂಕಿ ದಾಟಲೂ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ತಂಡದ ಆಟಗಾರ್ತಿಯರು ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ, ಕಿರಣ್ ನವಗಿರೆ ಉತ್ತಮ ಬ್ಯಾಟ್ ಬೀಸಿದರು. 3 ಸಿಕ್ಸರ್, 4 ಬೌಂಡರಿ ಸಮೇತ 43 ರನ್ ಗಳಿಸಿ ಮುಂಬೈ ದಾಳಿಯನ್ನು ಎದುರಿಸಿದರು. ತಂಡದ 5 ನೇ ವಿಕೆಟ್ ಆಗಿ ಕಿರಣ್ ಔಟಾಗುವ ಮೂಲಕ ತಂಡ ಗೆಲುವಿನ ಆಸೆಯನ್ನೇ ಕೈಬಿಟ್ಟಿತು.
ಜೀವದಾನ ಬಳಸಿಕೊಂಡ ಬ್ರಂಟ್: ಇನ್ನು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಪಡೆಯದಿದ್ದರೂ, ಸೀವರ್ ಬ್ರಂಟ್ ಅದ್ಭುತ ಇನಿಂಗ್ಸ್ನಿಂದ ದೊಡ್ಡ ಮೊತ್ತ ಕಲೆಹಾಕಿತು. ಯಾಸ್ಟಿಕ್ ಭಾಟಿಯಾ 21, ಹೈಲಿ ಮ್ಯಾಥ್ಯೂಸ್ 26, ನಾಯಕಿ ಹರ್ಮನ್ಪ್ರೀತ್ ಕೌರ್ 14, ಮೆಲಿ ಕೆರ್ರಿ 29, ಪೂಜಾ ವಸ್ತ್ರಕಾರ್ ಅಜೇಯ 11 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು.
-
.@natsciver continued to contribute with her all-round brilliance for @mipaltan 💪
— Women's Premier League (WPL) (@wplt20) March 24, 2023 " class="align-text-top noRightClick twitterSection" data="
Her unbeaten 72* & wicket of Grace Harris helped her win the Player of the Match award 👏👏#MI will now face #DC in the #TATAWPL Final after a 72-run win against #UPW 🙌#Eliminator pic.twitter.com/vLP7q94997
">.@natsciver continued to contribute with her all-round brilliance for @mipaltan 💪
— Women's Premier League (WPL) (@wplt20) March 24, 2023
Her unbeaten 72* & wicket of Grace Harris helped her win the Player of the Match award 👏👏#MI will now face #DC in the #TATAWPL Final after a 72-run win against #UPW 🙌#Eliminator pic.twitter.com/vLP7q94997.@natsciver continued to contribute with her all-round brilliance for @mipaltan 💪
— Women's Premier League (WPL) (@wplt20) March 24, 2023
Her unbeaten 72* & wicket of Grace Harris helped her win the Player of the Match award 👏👏#MI will now face #DC in the #TATAWPL Final after a 72-run win against #UPW 🙌#Eliminator pic.twitter.com/vLP7q94997
6 ರನ್ ಗಳಿಸಿದ್ದಾಗ ಬ್ರಂಟ್ಗೆ ಜೀವದಾನ ಲಭಿಸಿತು. ಇದನ್ನೇ ಬಳಸಿಕೊಂಡ ಆಟಗಾರ್ತಿ ಭರ್ಜರಿ ಇನಿಂಗ್ಸ್ ಕಟ್ಟಿದರು. ಯುಪಿ ಬೌಲರ್ಗಳ ಮೇಲೆ ದಾಳಿ ಮಾಡಿದ ಬ್ರಂಟ್ 38 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಬಾರಿಸಿದರು. ಕೇವಲ 26 ಎಸೆತಗಳಲ್ಲಿ ಅವರು ಅರ್ಧಶತಕ ಗಳಿಸಿದರು.
ಇಸ್ಸಿ ವಾಂಗ್ ಹ್ಯಾಟ್ರಿಕ್: ಮುಂಬೈ ವೇಗಿ ಇಸ್ಸಿ ವಾಂಗ್ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಿರುದ್ಧ ಇತಿಹಾಸ ಬರೆದರು. ಹ್ಯಾಟ್ರಿಕ್ ವಿಕೆಟ್ ಗಳಿಸುವ ಮೂಲಕ ಮೊದಲ ಮಹಿಳಾ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಮುಂಬೈ ಇಂಡಿಯನ್ಸ್ ಎರಡನೇ ತಂಡವಾಗಿ ಫೈನಲ್ ತಲುಪುವ ಮೂಲಕ ನೇರ ಪ್ರವೇಶ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾರ್ಚ್ 26 ರಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
ಓದಿ: ಟೀಕೆಗಳಿಗೆ ಉತ್ತರ ಕೊಡಲು ವಾರ್ನರ್ಗೆ ಐಪಿಎಲ್ ಉತ್ತಮ ವೇದಿಕೆ.. ವ್ಯಾಟ್ಸನ್