ಮುಂಬೈ (ಮಹಾರಾಷ್ಟ್ರ): ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ ಮಿನಿ ಹರಾಜಿನ ಆರಂಭಿಕ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಅನ್ನಾಬೆಲ್ ಸದರ್‌ಲ್ಯಾಂಡ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 2 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತು. ಇನ್ನೋರ್ವ ಆಸ್ಟ್ರೇಲಿಯನ್ ಕ್ರಿಕೆಟರ್ ಫೋಬೆ ಲಿಚ್‌ಫೀಲ್ಡ್ ಮೊದಲ ಸೆಟ್ನಲ್ಲಿ 1 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ಪಾಲಾದರು.
22 ವರ್ಷದ ಬಲಗೈ ಬ್ಯಾಟರ್ ಮತ್ತು ಮಧ್ಯಮ ವೇಗದ ಬೌಲರ್ ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಮೂಲ ಬೆಲೆ 40ಲಕ್ಷ ರೂ. ಆಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಪೈಪೋಟಿ ನಡೆದು 2 ಕೋಟಿವರೆಗೆ ಬಿಡ್ಡಿಂಗ್ಗಳು ನಡೆದವು. ನಂತರ ಡಿಸಿ ಆಟಗಾರ್ತಿಯನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
-
Bowler ho ya Batter, here she comes to haunt them all🔥
— Delhi Capitals (@DelhiCapitals) December 9, 2023 " class="align-text-top noRightClick twitterSection" data="
𝗔𝗻𝗻𝗮𝗯𝗲𝗹 𝗦𝘂𝘁𝗵𝗲𝗿𝗹𝗮𝗻𝗱 👉 DC 💙#YehHaiNayiDilli #WPLAuction pic.twitter.com/BnMz9XdmSc
">Bowler ho ya Batter, here she comes to haunt them all🔥
— Delhi Capitals (@DelhiCapitals) December 9, 2023
𝗔𝗻𝗻𝗮𝗯𝗲𝗹 𝗦𝘂𝘁𝗵𝗲𝗿𝗹𝗮𝗻𝗱 👉 DC 💙#YehHaiNayiDilli #WPLAuction pic.twitter.com/BnMz9XdmScBowler ho ya Batter, here she comes to haunt them all🔥
— Delhi Capitals (@DelhiCapitals) December 9, 2023
𝗔𝗻𝗻𝗮𝗯𝗲𝗹 𝗦𝘂𝘁𝗵𝗲𝗿𝗹𝗮𝗻𝗱 👉 DC 💙#YehHaiNayiDilli #WPLAuction pic.twitter.com/BnMz9XdmSc
ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ತರಬೇತುದಾರ ಜೊನಾಥನ್ ಬ್ಯಾಟಿ, "ಅನ್ನಾಬೆಲ್ ಬಹು ಕೌಶಲ್ಯದ ಆಟಗಾರ್ತಿ ಮತ್ತು ನಂ.3 ರಿಂದ 7ರ ವರೆಗಿನ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಮತ್ತು ಆಟದ ಯಾವುದೇ ಹಂತದಲ್ಲಿ ಬೌಲ್ ಮಾಡಬಹುದು" ಎಂದು ಹೇಳಿದ್ದಾರೆ. ಹೀಗಾಗಿ ಡೆಲ್ಲಿ ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಖರೀದಿಗೆ ಮೊದಲೇ ಲೆಕ್ಕಾಚಾರ ಹಾಕಿಕೊಂಡಿತ್ತು ಎನ್ನಬಹುದು.
ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಅವರನ್ನು ಗುಜರಾತ್ ಜೈಂಟ್ಸ್‌ಗೆ 1 ಕೋಟಿ ರೂ.ಗೆ ಬಿಡ್ ಮಾಡಿತು. ಅವರ ಮೂಲ ಬೆಲೆ 30 ಲಕ್ಷ ರೂ. ಗುಜರಾತ್ ಮತ್ತು ಯುಪಿ ನಡುವೆ ಫೋಬೆಗಾಗಿ ಬಿಡ್ಡಿಂಗ್ ಪೈಪೋಟಿ ನಡೆಯಲಿತು. ಆದರೆ ಹೆಚ್ಚು ಮೊತ್ತ ಇರುವ ಗುಜರಾತ್ 1 ಕೋಟಿ ಕೊಟ್ಟು ಬಿಡ್ನಲ್ಲಿ ಫೋಬೆಯನ್ನು ಖರೀದಿಸಿತು.
-
Our first pick, ready to light up the 𝐟𝐢𝐞𝐥𝐝 and our spirits! 🔥#GiantArmy, get ready for a '𝐏𝐡𝐨𝐞𝐛𝐞-nominal' performance. 🤩#TATAWPLAuction #Cricket #BringItOn #Adani pic.twitter.com/zJDEyuzjB4
— Gujarat Giants (@Giant_Cricket) December 9, 2023 " class="align-text-top noRightClick twitterSection" data="
">Our first pick, ready to light up the 𝐟𝐢𝐞𝐥𝐝 and our spirits! 🔥#GiantArmy, get ready for a '𝐏𝐡𝐨𝐞𝐛𝐞-nominal' performance. 🤩#TATAWPLAuction #Cricket #BringItOn #Adani pic.twitter.com/zJDEyuzjB4
— Gujarat Giants (@Giant_Cricket) December 9, 2023Our first pick, ready to light up the 𝐟𝐢𝐞𝐥𝐝 and our spirits! 🔥#GiantArmy, get ready for a '𝐏𝐡𝐨𝐞𝐛𝐞-nominal' performance. 🤩#TATAWPLAuction #Cricket #BringItOn #Adani pic.twitter.com/zJDEyuzjB4
— Gujarat Giants (@Giant_Cricket) December 9, 2023
ಗುಜರಾತ್ ಜೈಂಟ್ಸ್ ಮೆಂಟರ್ ಮಿಥಾಲಿ ರಾಜ್," ಫೋಬೆ ಆಸ್ಟ್ರೇಲಿಯಾದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಎಡಗೈ ಬ್ಯಾಟರ್ನ ಅವಶ್ಯಕತೆ ಇತ್ತು. ಮಧ್ಯಮ ಕ್ರಮಾಂಕದಲ್ಲಿ ನಮಗೆ ಮತ್ತೊಬ್ಬ ಎಡಗೈ ಆಟಗಾರರಿದ್ದಾರೆ. ಆದ್ದರಿಂದ ಇದು ಉತ್ತಮ ಸಮತೋಲನ ತರುತ್ತದೆ" ಎಂದಿದ್ದಾರೆ.
ಬಿಡ್ನಲ್ಲಿ ಆದ ಆಟರ್ತಿಯರು:
ಫೋಬೆ ಲಿಚ್ಫೀಲ್ಡ್, ಬಿಡ್ ಮೊತ್ತ - 1 ಕೋಟಿ, ತಂಡ: ಗುಜರಾತ್ ಜೈಂಟ್ಸ್
ಡ್ಯಾನಿ ವ್ಯಾಟ್, ಬಿಡ್ ಮೊತ್ತ - 30 ಲಕ್ಷ, ತಂಡ: ಯುಪಿ ವಾರಿಯರ್ಸ್
ಮೇಘನಾ ಸಿಂಗ್,ಬಿಡ್ ಮೊತ್ತ - 30 ಲಕ್ಷ, ತಂಡ: ಗುಜರಾತ್ ಜೈಂಟ್ಸ್
ಅನ್ನಾಬೆಲ್ ಸದರ್‌ಲ್ಯಾಂಡ್, ಬಿಡ್ ಮೊತ್ತ - 2 ಕೋಟಿ, ತಂಡ: ಡೆಲ್ಲಿ ಕ್ಯಾಪಿಟಲ್ಸ್
ಜಾರ್ಜಿಯಾ ವೇರ್ಹ್ಯಾಮ್ ಬಿಡ್ ಮೊತ್ತ - 40 ಲಕ್ಷ , ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇದನ್ನೂ ಓದಿ: ನಾಳೆ ಮಹಿಳಾ ಐಪಿಎಲ್ ಹರಾಜು: 30 ಸ್ಥಾನಕ್ಕೆ 165 ಆಟಗಾರ್ತಿಯರ ಸ್ಪರ್ಧೆ