ETV Bharat / sports

ಮಹಿಳಾ ಐಪಿಎಲ್‌ನಲ್ಲಿಂದು 2 ಪಂದ್ಯ: ಆರ್​ಸಿಬಿ vs ಡೆಲ್ಲಿ ಕುತೂಹಲ; ನಿಮ್ಮ ಬೆಂಬಲ ಯಾರಿಗೆ?

author img

By

Published : Mar 5, 2023, 9:38 AM IST

Updated : Mar 5, 2023, 12:29 PM IST

ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವನಿತೆಯರು ಸವಾಲೊಡ್ಡಲಿದ್ದಾರೆ.

Etv Bharat
Etv Bharat

ಮುಂಬೈ : ಮಹಿಳಾ ಐಪಿಎಲ್​ 2023 ಟೂರ್ನಿಯಲ್ಲಿ ಇಂದು ಎರಡು ಮಹತ್ವದ ಪಂದ್ಯಗಳು ನಡೆಯಲಿವೆ. ಇಂದು ಮಧ್ಯಾಹ್ನ ನಡೆಯುವ ಹಣಾಹಣಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ​ ತಂಡಗಳು ಮುಖಾಮುಖಿಯಾದರೆ, ಸಂಜೆ ಗುಜರಾತ್​ ಜೈಂಟ್ಸ್​ ಹಾಗೂ ಯುಪಿ ವಾರಿಯರ್ಜ್ ತಂಡಗಳ ನಡುವೆ ಪಂದ್ಯವಿದೆ.

ಮುಂಬೈನ ಬ್ರಬೋರ್ನ್​ ಮೈದಾನಲ್ಲಿ ನಡೆಯುವ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಎದುರಾಗಲಿವೆ. ಆರ್​ಸಿಬಿ ತಂಡಕ್ಕೆ ಭಾರತದ ಸ್ಟಾರ್​ ಕ್ರಿಕೆಟರ್​ ಸ್ಮೃತಿ ಮಂಧಾನ ನಾಯಕಿಯಾಗಿದ್ದು, ಡೆಲ್ಲಿ ತಂಡವನ್ನು ಆಸ್ಟ್ರೇಲಿಯಾದ ಯಶಸ್ವಿ ನಾಯಕಿ ಮೆಗ್​ ಲ್ಯಾನಿಂಗ್​ ಮುನ್ನಡೆಸುತ್ತಿದ್ದಾರೆ. ಹರಾಜಿನಲ್ಲಿ ಅತಿ ಹೆಚ್ಚು ಅಂದರೆ 3.4 ಕೋಟಿ ರೂ. ಮೊತ್ತಕ್ಕೆ ಆರ್​ಸಿಬಿ ಸೇರಿರುವ ಸ್ಮೃತಿ ನಾಯಕತ್ವ ಹಾಗೂ ಆಟದ ಮೇಲೆ ಅಭಿಮಾನಿಗಳಿಗೆ ಬಹಳಷ್ಟು ನಿರೀಕ್ಷೆ ಇದೆ.

ಜೊತೆಗೆ ಬೆಂಗಳೂರು ತಂಡವು ಬಲಾಢ್ಯ ಆಟಗಾರ್ತಿಯರನ್ನು ಒಳಗೊಂಡಿದೆ. ನಾಯಕಿ ಮಂಧಾನ ಜೊತೆಗೆ ಆಸೀಸ್​ ಸ್ಟಾರ್​ ಎಲಿಸಾ ಪೆರ್ರಿ, ಇಂಗ್ಲೆಂಡ್​ ನಾಯಕಿ ಹೀದರ್​ ನೈಟ್​, ಕಿವೀಸ್​ನ ಆಕ್ರಮಣಕಾರಿ ಆಟಗಾರ್ತಿ ಸೋಫಿಯಾ ಡಿವೈನ್​, ಹರಿಣಗಳ ನಾಡಿನ ಡೇನ್ ವ್ಯಾನ್ ನೀಕರ್ಕ್, ಭಾರತ ತಂಡದ ವಿಕೆಟ್​ ಕೀಪರ್​ ಬ್ಯಾಟರ್​​ ರಿಚಾ ಘೋಷ್​, ಆಸೀಸ್​ ವೇಗಿ ಮೆಗನ್​ ಸ್ಚತ್​ ಹಾಗೂ​ ರೇಣುಕಾ ಠಾಕೂರ್​ ಸೇರಿದಂತೆ ಸ್ಟಾರ್​ ಆಟಗಾರ್ತಿಯರ ದಂಡೇ ಇದೆ.

ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಬಲಿಷ್ಠ ಆಟಗಾರ್ತಿಯರನ್ನು ಹೊಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್​ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಕಾಂಗರೂ ಪಡೆಯ ನಾಯಕಿ ಮೆಗ್​ ಲ್ಯಾನಿಂಗ್​ ಜೊತೆಗೆ ಭಾರತ ತಂಡದ ಸ್ಟಾರ್​ಗಳಾದ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್​, ತಾನಿಯಾ ಭಾಟಿಯಾ ಡೆಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾ ಆಲ್​ರೌಂಡರ್​ ಮರಿಝನ್​ ಕಪ್ಪ್, ಆಂಗ್ಲರ ಆಲ್​ರೌಂಡರ್​ ಅಲಿಸ್​ ಕ್ಯಾಪ್ಸಿ, ಆಸೀಸ್​ನ ಲಾರಾ ಹ್ಯಾರಿಸ್ ಹಾಗೂ ಜೆಸ್​​ ಜೊನಾಸ್ಸೆನ್​​ ​ತಂಡದ ಬೆನ್ನೆಲುಬಾಗಿದ್ದಾರೆ. ಎರಡೂ ತಂಡಗಳಿಗೂ ಮಹಿಳಾ ಐಪಿಎಲ್​ನಲ್ಲಿ ಮೊದಲ ಪಂದ್ಯವಾಗಿದ್ದು, ಕಠಿಣ ತಾಲೀಮು ನಡೆಸಿವೆ. ಸ್ಟಾರ್ ಆಟಗಾರ್ತಿಯರ ಆಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಪಂದ್ಯವು ಮಧ್ಯಾಹ್ನ 3.30 ಗಂಟೆಗೆ ಆರಂಭವಾಗಲಿದೆ.

Just one more sleep before these colours light up the #TATAWPL stage 🤩

Good night, Dilliwaalon 😌#YehHaiNayiDilli #CapitalsUniverse pic.twitter.com/9a0Kc7Vc7Z

— Delhi Capitals (@DelhiCapitals) March 4, 2023 ">

ಸಂಭಾವ್ಯ 11ರ ಬಳಗ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು : ಸ್ಮೃತಿ ಮಂಧಾನ (ನಾಯಕಿ), ಸೋಫಿಯಾ ಡಿವೈನ್, ಎಲ್ಲಿಸಾ ಪೆರ್ರಿ, ಡೇನ್ ವ್ಯಾನ್ ನೀಕರ್ಕ್ / ಹೀದರ್ ನೈಟ್, ದಿಶಾ ಕಸತ್, ರಿಚಾ ಘೋಷ್ (ವಿ.ಕೀ), ಕನಿಕಾ ಅಹುಜಾ, ಮೇಗನ್ ಸ್ಚುಟ್, ಪ್ರೀತಿ ಬೋಸ್ / ಸಹನಾ ಪವಾರ್, ರೇಣುಕಾ ಠಾಕೂರ್, ಕೋಮಲ್ ಜಂಜಾದ್

ಡೆಲ್ಲಿ ಕ್ಯಾಪಿಟಲ್ಸ್: ಶಫಾಲಿ ವರ್ಮಾ, ಜಸಿಯಾ ಅಖ್ತರ್, ಜೆಮಿಮಾ ರೋಡ್ರಿಗಸ್, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಆಲಿಸ್ ಕ್ಯಾಪ್ಸೆ / ಲಾರಾ ಹ್ಯಾರಿಸ್, ತಾನಿಯಾ ಭಾಟಿಯಾ (ವಿ.ಕೀ), ಜೆಸ್ ಜೊನಾಸೆನ್, ರಾಧಾ ಯಾದವ್, ಶಿಖಾ ಪಾಂಡೆ, ಪೂನಮ್ ಯಾದವ್

ಇದನ್ನೂ ಓದಿ: ಮಹಿಳಾ ಐಪಿಎಲ್‌: ಗುಜರಾತ್ ವಿರುದ್ಧ ಮುಂಬೈಗೆ 143 ರನ್‌ಗಳ ಭರ್ಜರಿ ಜಯ; ಹರ್ಮನ್‌ ಮಿಂಚು

ಗುಜರಾತ್​ ಜೈಂಟ್ಸ್​ - ಯುಪಿ ವಾರಿಯರ್ಜ್ ಮುಖಾಮುಖಿ : ಇಂದಿನ ಎರಡನೇ ಪಂದ್ಯವು ನವಿ ಮುಂಬೈನ ಡಿ.ವೈ.ಪಾಟೀಲ್​ ಕ್ರೀಡಾಂಗಣದಲ್ಲಿ ಗುಜರಾತ್​ ಜೈಂಟ್ಸ್​ ಹಾಗೂ ಯುಪಿ ವಾರಿಯರ್ಜ್ ನಡುವೆ ನಡೆಯಲಿದೆ. ಯುಪಿ ತಂಡವನ್ನು ಆಸ್ಟ್ರೇಲಿಯಾ ಬ್ಯಾಟರ್​ ಅಲಿಸ್ಸಾ ಹೀಲಿ ಮುನ್ನಡೆಸುತ್ತಿದ್ದು, ಗುಜರಾತ್​ ತಂಡಕ್ಕೆ ಆಸೀಸ್​ನ ಬೆತ್​ ಮೂನಿ ಕ್ಯಾಪ್ಟನ್​ ಆಗಿದ್ದಾರೆ.

ಇನ್ನುಳಿದಂತೆ ವಾರಿಯರ್ಜ್ ತಂಡದಲ್ಲಿ ಭಾರತದ ಸ್ಪಿನ್ನರ್​ಗಳಾದ ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಆಸೀಸ್​ನ ತಹ್ಲಿಯಾ ಮೆಕ್‌ಗ್ರಾತ್, ಇಂಗ್ಲೆಂಡ್​ನ ಸೋಫಿ ಎಕ್ಲೆಸ್ಟೋನ್, ದಕ್ಷಿಣ ಆಫ್ರಿಕಾದ ಸ್ಟಾರ್​ ವೇಗಿ ಶಾಬ್ನಿಮ್ ಇಸ್ಮಾಯಿಲ್ ಮುಂತಾದವರಿದ್ದರೆ, ಗುಜರಾತ್ ತಂಡಕ್ಕೆ ಆಸೀಸ್​ ಬ್ಯಾಟರ್​ ಕಿಮ್​ ಗಾರ್ತ್​, ಅನ್ನಾಬೆಲ್ ಸದರ್‌ಲ್ಯಾಂಡ್, ಇಂಗ್ಲೆಂಡ್​ನ ಸೋಫಿಯಾ ಡಂಕ್ಲೆ, ಭಾರತ ತಂಡದ ಸ್ನೇಹ ರಾಣಾ ಹಾಗೂ ಹರ್ಲೀನ್ ಡಿಯೋಲ್ ಇತರರು ಬಲ ತುಂಬಲಿದ್ದಾರೆ. ಈ ಪಂದ್ಯವು ಸಂಜೆ 7.30 ಗಂಟೆಗೆ ಆರಂಭವಾಗಲಿದೆ.

ಯುಪಿ ವಾರಿಯರ್ಜ್ : ಅಲಿಸ್ಸಾ ಹೀಲಿ (ನಾಯಕಿ/ವಿ.ಕೀ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಸೊಪ್ಪದಂಡಿ ಯಶಸ್ರಿ, ಸೋಫಿಯಾ ಎಕ್ಲೆಸ್ಟೋನ್, ಶಾಬ್ನಿಮ್ ಇಸ್ಮಾಯಿಲ್, ರಾಜೇಶ್ವರಿ ಗಾಯಕ್ವಾಡ್​, ಗ್ರೇಸ್​ ಹ್ಯಾರಿಸ್​, ಲಾರೆನ್​ ಬೆಲ್​, ಅಂಜಲಿ ಸರ್ವಾನಿ, ಲಕ್ಷ್ಮಿ ಯಾದವ್

ಗುಜರಾತ್ ಜೈಂಟ್ಸ್ : ಕಿಮ್ ಗಾರ್ತ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲೆ, ಬೆತ್ ಮೂನಿ (ನಾಯಕಿ/ವಿ.ಕೀ), ಹರ್ಲೀನ್ ಡಿಯೋಲ್, ಹರ್ಲಿ ಗಾಲಾ, ಅನ್ನಾಬೆಲ್ ಸದರ್‌ಲ್ಯಾಂಡ್, ಸುಷ್ಮಾ ವರ್ಮಾ, ಸ್ನೇಹ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್​, ಅಶ್ವನಿ ಕುಮಾರಿ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ತನುಜಾ ಕನ್ವರ್

Last Updated : Mar 5, 2023, 12:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.