ETV Bharat / sports

ನಾಳೆ ಡಬ್ಲ್ಯೂಪಿಎಲ್​ ಆರಂಭ: ಬಾಲಿವುಡ್​ ತಾರೆಯರಿಂದ ಮನರಂಜನೆ.. ಉಚಿತ ವೀಕ್ಷಣೆಗೆ ಅವಕಾಶ! - ETV Bharath Kannada news

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭ - ಬಾಲಿವುಡ್​ ತಾರೆಯರಿಂದ ಮನರಂಜನಾ ಕಾರ್ಯಕ್ರಮ - ಮಹಿಳೆಯರು ಮತ್ತು ಯುವತಿಯರಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ

WPL 2023 Opening Ceremony
ನಾಳೆ ಡ್ಲ್ಯೂಪಿಎಲ್​ ಆರಂಭ
author img

By

Published : Mar 3, 2023, 8:04 PM IST

Updated : Mar 4, 2023, 8:40 AM IST

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಕಪ್​ಗಾಗಿ 20 ಪಂದ್ಯಗಳನ್ನು ಆಡಲಿವೆ. ಬಹುನಿರೀಕ್ಷಿತ ಟೈಟಲ್​ ಅನ್ನು ಟಾಟಾ ಸಂಸ್ಥೆ ಪ್ರಾಯೋಜಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಅದ್ಧೂರಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ.

ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರು ಸಂಭ್ರಮಾಚರಣೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಗೀತೆ ಹಾಡಲಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು​ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.

ಮಹಿಳೆಯರು ಮತ್ತು ಯವತಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ: ಡಿವೈ ಪಾಟೀಲ್ ಕ್ರೀಡಾಂಗಣವು ನಾಳೆ ಭರ್ತಿಯಾಗುವ ನಿರೀಕ್ಷೆ ಇದೆ. ಟಿಕೆಟ್ ಬುಕಿಂಗ್​ ಈಗಾಗಲೇ ಆರಂಭಿಸಲಾಗಿದೆ. 100 ರೂ.ಗೆ ಟಿಕೆಟ್​ ಮತ್ತು ಮಹಿಳೆಯರಿಗೆ ಮತ್ತು ಯುವತಿಯರಿಗೆ ಉಚಿತ ಟಿಕೆಟ್​ ಇರುವ ಬಗ್ಗೆ ಮಹಿಳಾ ಪ್ರೀಮಿಯರ್ ಲೀಗ್ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. bookmyshow.com ನಲ್ಲಿ ಮಹಿಳೆಯರು ನೋಂದಾಯಿಸಿಕೊಂಡರೆ ಈ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಪಂದ್ಯಗಳ ಟಿಕೆಟ್‌ಗಳ ಆಫ್‌ಲೈನ್ ಮಾರಾಟದ ಬಗ್ಗೆಯೂ ಬಿಸಿಸಿಐ ಮಾಹಿತಿ ಬಿಡುಗಡೆ ಮಾಡಿಲ್ಲ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಸ್ಮೃತಿ ಮಂಧಾನ, ಮುಂಬೈ ಇಂಡಿಯನ್ಸ್​ ಅನ್ನು ಭಾರತ ವನಿತೆಯರ ತಂಡದ ನಾಯಕಿ ಹರ್ಮನ್​ ಪ್ರಿತ್ ಕೌರ್​, ಡೆಲ್ಲಿ ಕ್ಯಾಪಿಟಲ್ಸ್​ ಅನ್ನು ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಸ್​ ಅನ್ನು ಅಲಿಸ್ಸಾ ಹೀಲಿ ಮತ್ತು ಗುಜರಾತ್ ಜೈಂಟ್ಸ್​ ಅನ್ನು ಬೆತ್ ಮೂನಿ ಮುನ್ನಡೆಸಲಿದ್ದಾರೆ. ಡಬ್ಲ್ಯೂಪಿಎಲ್​ ಹರಾಜಿನಲ್ಲಿ ಸ್ಮೃತಿ ಮಂಧಾನ ಅತಿ ಹೆಚ್ಚು ಮೊತ್ತಕ್ಕೆ ಆರ್​ಸಿಬಿ ತಂಡಕ್ಕೆ ಸೇರಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್​ಸಿಬಿ): ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೆನ್ ವ್ಯಾನ್ ನಿಕೆರ್ಕ್, ಪ್ರೀತಿ ಕೆ ಬೊಹ್ಸೆಮ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್​ ಸೇರಿ 18 ಹೆಸರಾಂತ ಆಟಗಾರ್ತಿಯರಿದ್ದಾರೆ.

  • 🗓️ Mark Your Calendars

    Get Ready to support your favourite teams 👏 👏

    The schedule for the inaugural edition of Women's Premier League is here 🔽 #WPL pic.twitter.com/O1HHvRUh0k

    — Women's Premier League (WPL) (@wplt20) February 14, 2023 " class="align-text-top noRightClick twitterSection" data=" ">

ಮುಂಬೈ ಇಂಡಿಯನ್ಸ್ (ಎಂಐ): ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಶೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಝೀ, ಸೋನಂಕಾ ಬಾಲಾ, ಪ್ರಿಯಾಂಕಾ ಬಾಲಾ ಜಿಂತಾಮಣಿ ಕಲಿತಾ, ನೀಲಂ ಬಿಷ್ಟ್ ಇದ್ದಾರೆ.

ಗುಜರಾತ್ ಜೈಂಟ್ಸ್ (ಜಿಟಿ): ಬೆತ್ ಮೂನಿ (ನಾಯಕಿ), ಆಶ್ಲೇ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನಸಿ ಜೋಶಿ, ಡಿ ಹೇಮಲತಾ, ತನುಜಾ ಕನ್ವರ್, ಮೋನಿಕಾ ಪಟೇಲ್, ಸುಷ್ಮಾ ವರ್ಮಾ, ಅಶ್ವಿನಿ ಕುಮಾರಿ ಗಾಲಾ, ಪರುನಿಕಾ ಸಿಸೋಡಿಯಾ, ಶಬ್ನಮ್ ಇದ್ದಾರೆ.

ಯುಪಿ ವಾರಿಯರ್ಸ್(ಯುಪಿ): ಅಲಿಸ್ಸಾ ಹೀಲಿ(ನಾಯಕಿ), ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ತಹ್ಲಿಯಾ ಮೆಕ್‌ಗ್ರಾತ್, ಶಬ್ನಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಪಾರ್ಶ್ವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಎಸ್ ಯಶಶ್ರೀ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಲಾರೆನ್​ ಬೆಲ್, ಲಕ್ಷೀ ಯಾದವ್​, ಸಿಮ್ರಾನ್​ ಶೇಕ್​ ಯುಪಿ ವಾರಿಯರ್ಸ್​ ತಂಡವನ್ನು ಸೇರಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್(ಡಿಸಿ): ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ಮರಿಜಾನ್ನೆ ಕಪ್, ಟೈಟಾಸ್ ಸಾಧು, ಎಲ್ಲಿಸ್ ಕ್ಯಾಪ್ಸಿ, ತಾರಾ ನಾರ್ರಿಸ್, ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಮಿನ್ನು ಮಣಿ, ತಾನ್ಯಾ ಭಾಟಿಯಾ, ಜೆಸ್ ಜೊನಾಸೆನ್, ಸ್ನೇಹಾ ದೀಪ್ತಿ, ಪೂನಮ್​ ಯಾದವ್​, ಅರುಂಧತಿ ರೆಡ್ಡಿ ಮತ್ತು ಅಪರ್ಣಾ ಮೊಂಡಲ್ ಇದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ 2023ರ ಸೀಸನ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ - ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಟಿವಿಯಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಸಿಗಲಿದೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್‌ 'ಶಕ್ತಿ' ಅನಾವರಣ: ವಿಡಿಯೋ

Last Updated : Mar 4, 2023, 8:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.