ಮುಂಬೈ: ಒಂದು ಗೆಲುವು ಸಾಧಿಸಿರುವ ಉಭಯ ತಂಡಗಳ ನಡುವೆ ಇಂದು ಡಬ್ಲ್ಯೂಪಿಎಲ್ನ 5ನೇ ಪಂದ್ಯ ನಡೆಯುತ್ತಿದೆ. ಎರಡು ತಂಡ ಆಸ್ಟ್ರೇಲಿಯನ್ ವನಿತೆಯರು ನಾಯಕತ್ವದಲ್ಲಿದ್ದು, ದೊಡ್ಡ ಪೈಟ್ನ ನಿರೀಕ್ಷೆ ಇದೆ. ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳಿಲ್ಲಿ ಯಾವುದೇ ಬದಲಾವಣೆ ಮಾಡಿಕೋಳ್ಳದೇ ಗೆದ್ದ ಟೀಮ್ ಅನ್ನೇ ಕಣಕ್ಕಿಳಿಸುತ್ತಿವೆ.
-
🚨 Toss Update 🚨@UPWarriorz win the toss and elect to bowl first against @DelhiCapitals.
— Women's Premier League (WPL) (@wplt20) March 7, 2023 " class="align-text-top noRightClick twitterSection" data="
Follow the match 👉 https://t.co/Yp7UtgDSsl#TATAWPL | #DCvUPW pic.twitter.com/Oxj5UeD2Hk
">🚨 Toss Update 🚨@UPWarriorz win the toss and elect to bowl first against @DelhiCapitals.
— Women's Premier League (WPL) (@wplt20) March 7, 2023
Follow the match 👉 https://t.co/Yp7UtgDSsl#TATAWPL | #DCvUPW pic.twitter.com/Oxj5UeD2Hk🚨 Toss Update 🚨@UPWarriorz win the toss and elect to bowl first against @DelhiCapitals.
— Women's Premier League (WPL) (@wplt20) March 7, 2023
Follow the match 👉 https://t.co/Yp7UtgDSsl#TATAWPL | #DCvUPW pic.twitter.com/Oxj5UeD2Hk
ಡೆಲ್ಲಿ ಕ್ಯಾಪಿಟಲ್ಸ್ ಆಡುವ ತಂಡ : ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸಿ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್
ಯುಪಿ ವಾರಿಯರ್ಜ್ ಆಡುವ ತಂಡ : ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ದೇವಿಕಾ ವೈದ್ಯ, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಡಿವೈ ಪಾಟಿಲ್ ಸ್ಟೇಡಿಯಂನಲ್ಲಿ ಗೆಲುವು ಸಾಧಿಸಿರುವ ವಾರಿಯರ್ಸ್: ಯಪಿ ತಂಡ ಗುಜರಾತ್ನ್ನು ಇದೇ ಸ್ಟೇಡಿಯಂನಲ್ಲಿ ಸೋಲಿಸಿದ್ದರಿಂದ ಪಿಚ್ನ ಲಾಭ ಪಡೆದುಕೊಳ್ಳ ಬಹುದಾಗಿದೆ. ಚೇಸಿಂಗ್ ಮಾಡಿ ಗೆಲುವು ಸಾಧಿಸಿದ್ದರಿಂದ ಯುಪಿ ಇಂದು ಟಾಸ್ ಗೆಲುವಿನ ಲಾಭವನ್ನು ಲೆಕ್ಕಾಚಾರ ಮಾಡುವ ಸಾಧ್ಯತೆ ಹೆಚ್ಚಿದೆ. ಗೆದ್ದ ತಂಡ ಎರಡನೇ ಜಯದಿಂದ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಬಹುದಾಗಿದೆ.
ತಾರಾ ನಾರ್ರಿಸ್ ಬೌಲಿಂಗ್ ಬಲ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಪಂಚ ವಿಕೆಟ್ ಸಾಧನೆ ಮಾಡಿದ ತಾರಾ ನಾರ್ರಿಸ್ ಡೆಲ್ಲಿಗೆ ಬೌಲಿಂಗ್ ಬಲವಾಗಿದ್ದಾರೆ. ಆರ್ಸಿಬಿಯ ಎದುರು ಉತ್ತಮ ಬೌಲಿಂಗ್ ಮಾಡಿದ ಅವರು 4 ಓವರ್ನಲ್ಲಿ 29 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್ನಲ್ಲಿ ಶಫಾಲಿ ವರ್ಮಾ, ನಾಯಕಿ ಮೆಗ್ ಲ್ಯಾನಿಂಗ್, ಮರಿಜಾನ್ನೆ ಕಪ್ ಮತ್ತು ಜೆಮಿಮಾ ರಾಡ್ರಿಗಸ್ ಆರ್ಸಿಬಿ ಎದುರು ಘರ್ಜಿಸಿದ್ದರು. ಆರಂಭಿಕ ಜೋಡಿ 162 ರನ್ನ ದಾಖಲೆಯ ಜೊತೆಯಾಟವಾಡಿದ್ದರು.
ಅಂಕಪಟ್ಟಿ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆಯ ಪಂದ್ಯದ ವರೆಗೆ ನಾಲ್ಕು ಮ್ಯಾಚ್ಗಳು ಆಗಿವೆ. ಮೊದಲ ಪಂದ್ಯ ಗೆದ್ದು ಅಂಕ ಪಟ್ಟಿಯ ಅಗ್ರಸ್ಥಾನ ಗಳಿಸಿದ್ದ ಮುಂಬೈ ನಿನ್ನೆ ಆರ್ಸಿಬಿ ಮಣಿಸಿದ ನಂತರ 5.1 ರನ್ ರೇಟ್ನಿಂದ 4 ಅಂಕಗಳೊಂದಿಗೆ ಅದೇ ಸ್ಥಾನವನ್ನು ಇನ್ನಷ್ಟೂ ಭ್ರದಗೊಳಿಸಿಕೊಂಡಿದೆ. ಆರ್ಸಿಬಿ ಎದುರು ಬೃಹತ್ ರನ್ ಗಳಿಸಿದ್ದ ಡೆಲ್ಲಿ 3 ರನ್ ರೇಟ್ನಿಂದ ದ್ವಿತೀಯ ಹಾಗೂ ಗುಜರಾತ್ ಸೋಲಿಸಿದ ಯುಪಿ ವಾರಿಯರ್ಸ್ 0.3 ರನ್ ರೇಟ್ನಿಂದ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಮುಂಬೈ ಎದುರು ಸೋತ ಆರ್ಸಿಬಿ -3.1 ರನ್ ರೇಟ್ನಿಂದ ನಾಲ್ಕನೇ ಸ್ಥಾನದಲ್ಲಿದ್ದರೆ, ಪ್ರಥಮ ಪಂದ್ಯದಲ್ಲಿ 143 ನಿಂದ ಮತ್ತು ಯುಪಿ ಎದುರು ರೋಚಕವಾಗಿ ಸೋಲನುಭವಿಸಿದ ಗುಜರಾತ್ -3.7 ರನ್ ರೇಟ್ನೀಂದ ಕೊನೆಯಲ್ಲಿದೆ.
ಇದನ್ನೂ ಓದಿ: WPL 2023: ಇಂದು ಡೆಲ್ಲಿ ಮತ್ತು ಯುಪಿ ಫೈಟ್, ಡೆಲ್ಲಿ ಎದುರು ಗೆಲುವಿನ ಪಣತೊಟ್ಟ ಗ್ರೇಸ್ ಹ್ಯಾರಿಸ್