ನವಿಮುಂಬೈ: ಶೆಫಾಲಿ ವರ್ಮಾ ಅವರ ಸ್ಫೋಟಕ ಅಜೇಯ ಅರ್ಧಶತಕ ಮತ್ತು ಮಾರಿಯಾನ್ನೆ ಕಾಪ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 10 ವಿಕೆಟ್‌ಗಳ ಬೃಹತ್ ಗೆಲುವು ಸಾಧಿಸಿದೆ. ಡೆಲ್ಲಿಗೆ ಇದು ಮೂರನೇ ಗೆಲುವಾದರೆ, ಗುಜರಾತ್ಗೆ ಮೂರನೇ ಸೋಲಾಯಿತು. ಈ ಮೂಲಕ ಗುಜರಾತ್ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಅಕ್ಷರಶಃ ಡೆಲ್ಲಿ ಆಟಗಾರ್ತಿಯರು ಪ್ರಾಬಲ್ಯ ಸಾಧಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ಗೆ ಮೊದಲ ಓವರ್ನ 2ನೇ ಎಸೆತದಲ್ಲೇ ಪತನದ ಮುನ್ಸೂಚನೆ ಸಿಕ್ಕಿತು. ಆರಂಭಿಕ ಆಟಗಾರ್ತಿ ಮೇಘನಾರನ್ನು ಮಾರಿಯಾನೆ ಕಾಪ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ಇದಾದ ಬಳಿಕ ಸತತ ಮೂರು ವಿಕೆಟ್ ಪಡೆದ ಕಾಪ್ ಡೆಲ್ಲಿಗೆ ಅದ್ಭುತ ಆರಂಭ ನೀಡಿದರು. ಕಾಪ್ ತಮ್ಮ ಕೋಟಾದ 4 ಓವರ್‌ಗಳಲ್ಲಿ 15 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು.
-
For her impeccable five-wicket haul in the first innings, @kappie777 bagged the Player of the Match award as @DelhiCapitals seal a 🔟-wicket win 👏👏
— Women's Premier League (WPL) (@wplt20) March 11, 2023 " class="align-text-top noRightClick twitterSection" data="
Scorecard 👉 https://t.co/ea9cEEkMGR#TATAWPL | #GGvDC pic.twitter.com/kXzmkzl1Qe
">For her impeccable five-wicket haul in the first innings, @kappie777 bagged the Player of the Match award as @DelhiCapitals seal a 🔟-wicket win 👏👏
— Women's Premier League (WPL) (@wplt20) March 11, 2023
Scorecard 👉 https://t.co/ea9cEEkMGR#TATAWPL | #GGvDC pic.twitter.com/kXzmkzl1QeFor her impeccable five-wicket haul in the first innings, @kappie777 bagged the Player of the Match award as @DelhiCapitals seal a 🔟-wicket win 👏👏
— Women's Premier League (WPL) (@wplt20) March 11, 2023
Scorecard 👉 https://t.co/ea9cEEkMGR#TATAWPL | #GGvDC pic.twitter.com/kXzmkzl1Qe
ಸತತ ವಿಕೆಟ್ ಪತನ: ಡೆಲ್ಲಿ ಬೌಲಿಂಗ್ ದಾಳಿ ಹೇಗಿತ್ತೆಂದರೆ, ಅಜಮಾಸು ಪ್ರತಿ 10 ರನ್ಗೆ ಒಂದು ವಿಕೆಟ್ ಕಿತ್ತಿತು. ಟೂರ್ನಿಯ ಅತ್ಯಧಿಕ ಸ್ಕೋರರ್ಗಳಲ್ಲಿ ಒಬ್ಬರಾಗಿರುವ ಹರ್ಲಿನ್ ಡಿಯೋಲ್ 14 ಎಸೆತಗಳಲ್ಲಿ 20 ರನ್, ಗಾರ್ಜಿಯಾ ವಾರೆಹೆಮ್ 22, ಕಿಮ್ ಗರ್ಥ್ 32 ತನುಜಾ ಕನ್ವರ್ 13 ರನ್ ಗಳಿಸಿದರೆ, ಉಳಿದ ಆಟಗಾರ್ತಿಯರು ಒಂದಂಕಿ ಕೂಡ ದಾಟಲಿಲ್ಲ. ಇದರಿಂದ ತಂಡ ಸತತ ಕುಸಿತ ಕಾಣುತ್ತಾ 9 ವಿಕೆಟ್ಗೆ 105 ರನ್ಗಳಿಗೆ ಸರ್ವಪತನ ಕಂಡಿತು. ಕಾಪ್ಗೆ ಉತ್ತಮ ಬೆಂಬಲ ನೀಡಿದ ಅನುಭವಿ ಬೌಲರ್ ಶಿಖಾ ಪಾಂಡೆ 3 ವಿಕೆಟ್ ಕಿತ್ತರು.
7 ಓವರ್‌ಗಳಲ್ಲಿ 6 ವಿಕೆಟ್: ಗುಜರಾತ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ 7 ಓವರ್‌ಗಳಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಈ ವೇಳೆ ತಂಡ ಗಳಿಸಿದ್ದು 3 ರನ್ ಮಾತ್ರ. 50 ರನ್ಗೆ ಆಲೌಟ್ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಕಿಮ್ ಗರ್ಥ್ ಮತ್ತು ಜಾರ್ಜಿಯಾ ವಾರೆಹೆಮ್ ತಂಡಕ್ಕೆ ಅಗತ್ಯವಿರುವ ರನ್‌ಗಳನ್ನು ಗಳಿಸಲು ಪ್ರಯತ್ನಿಸಿದರು. 37 ಎಸೆತಗಳನ್ನು ಎದುರಿಸಿದ ಕಿಮ್ ಗರ್ಥ್ 32 ರನ್ ಮಾಡಿದರೆ, 25 ಬಾಲ್ಗಳಲ್ಲಿ ವಾರೆಹೆಮ್ 22 ರನ್ ಮಾಡಿ ಪ್ರತಿರೋಧ ತೋರಿದರು. ಆದರೆ ಇವರ ಪ್ರಯತ್ನಗಳನ್ನು ಮಾರಿಯಾನ್ ಕಾಪ್ ಮತ್ತು ಶಿಖಾ ಪಾಂಡೆ ಮುಂದುವರಿಸಲು ಬಿಡಲಿಲ್ಲ.
ಬೌಂಡರಿ- ಸಿಕ್ಸರ್ ಸಿಡಿಯಬೇಕಿದ್ದ ಚಿಕ್ಕ ಮೈದಾನದಲ್ಲಿ ಗುಜರಾತ್ ತನ್ನ ಇನಿಂಗ್ಸ್ನ 13 ರಿಂದ 16 ಓವರ್ಗಳ ಮಧ್ಯೆ ಒಂದೇ ಒಂದು ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಇದು ಡೆಲ್ಲಿ ಆಟಗಾರ್ತಿಯರ ಕರಾರುವಾಕ್ ದಾಳಿಗೆ ಸಾಕ್ಷಿಯಾಗಿತ್ತು. ಇದಲ್ಲದೇ, ಗುಜರಾತ್ ಜೈಂಟ್ಸ್ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್ ಕೂಡ ದಾಖಲಾಗಲಿಲ್ಲ.
ಶೆಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್: 106 ರನ್ಗಳ ಅಲ್ಪಮೊತ್ತದ ಗುರಿ ಪಡೆದ ಡೆಲ್ಲಿ ತಂಡದ ಆರಂಭಿಕ ಆಟಗಾರ್ತಿ 'ಜೂನಿಯರ್ ಸೆಹ್ವಾಗ್' ಖ್ಯಾತಿಯ ಶೆಫಾಲಿ ವರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಪ್ರತಿ ಬೌಲರ್ಗಳನ್ನು ಶೆಫಾಲಿ ಬೆಂಡೆತ್ತಿದರು. ಆಶ್ಲೀಗ್ ಗಾರ್ಡ್ನರ್ ಎಸೆದ ನಾಲ್ಕನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿ 23 ರನ್ ಚಚ್ಚಿದರು. ಕೇವಲ 19 ಎಸೆತಗಳಲ್ಲಿ ಶೆಫಾಲಿ ಅರ್ಧಶತಕ ಸಿಡಿಸಿದರು. ಇದು ಮಹಿಳಾ ಐಪಿಎಲ್ನಲ್ಲಿ ಅವರ 2ನೇ ಅರ್ಧಶತಕವಾಗಿದೆ.
ಇದಾದ ಬಳಿಕವೂ ನಿಲ್ಲದ ಆಟಗಾರ್ತಿ 28 ಎಸೆತಗಳಲ್ಲಿ 76 ರನ್ ಮಾಡಿ ಡೆಲ್ಲಿ ಗೆಲುವಿನ ಸಂಭ್ರಮಾಚರಣೆ ದ್ವಿಗುಣಗೊಳಿಸಿದರು. ನಾಯಕಿ ಮೆಗ್ ಲ್ಯಾನಿಂಗ್ 15 ಎಸೆತಗಳಲ್ಲಿ 21 ರನ್ ಮಾಡಿ ಯಶಸ್ವಿ ಚೇಸಿಂಗ್ ನಡೆಸಿದರು. ಈ ಮೂಲಕ ಡೆಲ್ಲಿ ಕೇವಲ 7.1 ಓವರ್‌ಗಳಲ್ಲಿ 107 ರನ್ ಗಳಿಸಿ 10 ವಿಕೆಟ್ಗಳಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತು. ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್ 10 ವಿಕೆಟ್ ಜಯ ಸಾಧಿಸಿತ್ತು.
ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2023: ಬಿಎಫ್ಐಯಿಂದ 'ವೀರಾ' ಅನಾವರಣ