ದುಬೈ: ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ತಂಡಗಳೂ ಮತ್ತೆ ಫೈನಲ್ನಲ್ಲಿ ಎದುರುಬದುರಾದರೆ ಅದೊಂದು ದೊಡ್ಡ ವಿಷಯವಾಗಿರಲಿದೆ. ಜೊತೆಗೆ ಎರಡೂ ಕಡೆಯವರೂ ಹಿಂದಿನ ಪಂದ್ಯದ ವೇಳೆ ಗೆಳೆತನದ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕೆ ಹರ್ಷವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 10 ವಿಕೆಟ್ಗಳ ಸೋಲು ಕಂಡಿತ್ತು. ಆದರೆ, ಎರಡೂ ತಂಡದ ಆಟಗಾರರು ಮೈದಾನದಲ್ಲಿ ತೋರಿದ ವರ್ತನೆ ಕ್ರೀಡಾ ಜಗತ್ತಿಗೆ ಉತ್ತಮ ಸಂದೇಶ ರವಾನಿಸಿತ್ತು.
ಸಾಂಪ್ರದಾಯಿಕ ಎದುರಾಳಿಗಳು ಟೂರ್ನಮೆಂಟ್ ಫೈನಲ್ನಲ್ಲಿ ಮತ್ತೆ ಒಂದಾದರೆ ಹೇಗಿರುತ್ತದೆ ಎಂದು ಕೇಳಿದ್ದಕ್ಕೆ, ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದರೆ ಅದೊಂಡು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾವು ಅವರನ್ನು ಸೋಲಿಸಿರಬಹುದು, ಆದರೆ ಅವರು ಈಗಲೂ ಬಲಿಷ್ಠ ತಂಡವಾಗಿದ್ದು, ಪ್ರತಿಯೊಬ್ಬರು ಅವರನ್ನು ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿಸಿದ್ದಾರೆ ಎಂದು ಮುಷ್ತಾಕ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ಎರಡೂ ತಂಡಗಳು ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾದರೆ ಅವರ ನಡುವಿನ ಬಾಂಧವ್ಯ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ನಮ್ಮ ಆಟಗಾರರು ತಮ್ಮನ್ನು ತಾವೂ ನಡೆಸಿಕೊಂಡ ರೀತಿ, ನಾವೆಲ್ಲರೂ ಮನುಷ್ಯರೂ, ನಾವೆಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಇದು ಕೇವಲ ಆಟವಾಗಿದೆ ಎಂದು ಪ್ರಬಲ ಸಂದೇಶವನ್ನು ಅವರು ರವಾನಿಸಿದ್ದಾರೆ. ಇಲ್ಲಿ ಗೆಳೆತನ ಗೆದ್ದಿದೆ, ದ್ವೇಷ ಸೋತಿದೆ ಎಂದು ಸಕ್ಲೇನ್ ಹೇಳಿದ್ದಾರೆ.
ಇಂಗ್ಲೆಂಡ್ , ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳೂ ಕೂಡ ಟೂರ್ನಿಯಲ್ಲಿ ಕಠಿಣ ಪ್ರತಿಸ್ಪರ್ಧಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಪಾಕಿಸ್ತಾನ ವಿರುದ್ಧದ ಸೋಲಿಗೆ ಕೊಹ್ಲಿ ನೀಡಿದ ಕಾರಣ: ಜಡೇಜಾ ಅಸಮಾಧಾನ