ನವದೆಹಲಿ: ಮುಂಬೈ ಇಂಡಿಯನ್ಸ್ ಮುಂದಿನ ವರ್ಷದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೊಸ ನಾಯಕನನ್ನು ಶುಕ್ರವಾರ ಘೋಷಿಸಿದೆ. ಹೀಗಾಗಿ 2024ರ ಆವೃತ್ತಿಯ ನಂತರ ಎಂಐನ ಯಶಸ್ವಿ ನಾಯಕ ಲೀಗ್ ಕ್ರಿಕೆಟ್ನಿಂದ ದೂರ ಉಳಿಯುತ್ತಾರೆ ಎಂದು ಹೇಳಲಾಗುತ್ತದೆ. ಐಪಿಎಲ್ನಲ್ಲಿ ರೋಹಿತ್ ಶರ್ಮಾ 11 ಆವೃತ್ತಿಗಳಲ್ಲಿ ಮುಂಬೈ ನಾಯಕತ್ವ ವಹಿಸಿದ್ದು ಐದು ಟ್ರೋಫಿಗಳನ್ನು ಗೆದ್ದಿದ್ದಾರೆ.
ರೋಹಿತ್ ಶರ್ಮಾಗೆ 2024ರ ಐಪಿಎಲ್ ಕೊನೆಯದಾಗುವ ಸಾಧ್ಯತೆ ಇದೆ ಎನ್ನಲು ಪ್ರಮುಖ ಕಾರಣವಿದೆ. 2025ರ ಮೆಗಾ ಹರಾಜಿನ ವೇಳೆಗೆ ಎಂಐ ಶರ್ಮಾರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಗೋಚರಿಸುತ್ತಿದೆ. ಮೆಗಾ ಹರಾಜಿಗೂ ಮುನ್ನ ಒಂದು ತಂಡ 3 ಭಾರತೀಯರು ಮತ್ತು 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. 2025ಕ್ಕೆ ಮುಂಬೈ ಇಂಡಿಯನ್ಸ್ ಭಾರತೀಯ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಂತಿದೆ.
- — Mumbai Indians (@mipaltan) December 15, 2023 " class="align-text-top noRightClick twitterSection" data="
— Mumbai Indians (@mipaltan) December 15, 2023
">— Mumbai Indians (@mipaltan) December 15, 2023
ಯಶಸ್ವಿ ನಾಯಕನಿಗೆ ಈ ರೀತಿಯ ವಿದಾಯವೇ?: 2013ರಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ ಮುಂಬೈ ಇಂಡಿಯನ್ಸ್ ಚಾರ್ಮ್ ಬದಲಾಯಿತೆಂದರೆ ತಪ್ಪಾಗದು. ನಾಯಕತ್ವದ ಚೊಚ್ಚಲ ವರ್ಷವೇ ಅವರು ಪ್ರಶಸ್ತಿ ಗೆದ್ದುಕೊಟ್ಟರು. ನಂತರ ಒಂದೊಂದು ವರ್ಷಗಳ ಅಂತರದಲ್ಲಿ ತಂಡ ಪ್ರಶಸ್ತಿಗಳನ್ನು ಜಯಿಸಿತು. ಆದರೆ ಮುಂಬೈ ಇಂಡಿಯನ್ಸ್ ನಾಯಕತ್ವದ ಬದಲಾವಣೆಗೆ ವೇಳೆ ರೋಹಿತ್ ಬಗ್ಗೆ ಉತ್ತಮ ನಾಯಕ ಎಂದಿದ್ದು ಬಿಟ್ಟರೆ ಮತ್ತೇನೂ ಹೇಳಲೇ ಇಲ್ಲ.
ನಂತರ ತನ್ನ ಎಕ್ಸ್ ಖಾತೆಯಲ್ಲಿ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿ ವಿದಾಯ ತಿಳಿಸಿದೆ. ಐದು ಪ್ರಶಸ್ತಿ ತಂದುಕೊಟ್ಟ ನಾಯಕನ ಬಗ್ಗೆ ಪ್ರಕಟಣೆಯಲ್ಲಿ ಕೋಚಿಂಗ್‌ನ ಜಾಗತಿಕ ಮುಖ್ಯಸ್ಥ ಮಹೇಲಾ ಜಯವರ್ಧನೆ ಅವರು ರೋಹಿತ್ ಅವರ ಕೊಡುಗೆಗಾಗಿ ಧನ್ಯವಾದ ಎಂದು ಸರಳವಾಗಿ ಸಂಬೋಧಿಸಿದ್ದಾರೆ ಅಷ್ಟೇ.
ರಾಷ್ಟ್ರೀಯ ತಂಡದ ನಾಯಕತ್ವದ ಪ್ರಶ್ನೆ?: ಏಕದಿನ ವಿಶ್ವಕಪ್ನ ಸೋಲಿನ ಬಗ್ಗೆ 48 ಗಂಟೆಗಳ ಹಿಂದೆ ರೋಹಿತ್ ಶರ್ಮಾ ಒಂದು ಮನದಾಳದ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ 2024ರ ವಿಶ್ವಕಪ್ ಆಡುವ ಇಂಗಿತ ತಿಳಿಸಿದ್ದರು. ಏಕದಿನ ವಿಶ್ವಕಪ್ನಲ್ಲಿ ಅವರ ನಾಯಕತ್ವವನ್ನು ಇಂದಿಗೂ ಎಲ್ಲರೂ ಹೊಗಳುತ್ತಾರೆ. ಆದರೆ ಮುಂಬೈ ಇಂಡಿಯನ್ಸ್ ಒಮ್ಮೆಗೇ ರೋಹಿತ್ ಅವರನ್ನು ಹುದ್ದೆಯಿಂದ ಇಳಿಸಿದ್ದು ಅಭಿಮಾನಿಗಳಿಗೆ ಅಚ್ಚರಿಯ ನಡೆಯಾಗಿದೆ.
2024ರ ವಿಶ್ವಕಪ್ ನಂತರ ಅಂತರರಾಷ್ಟ್ರೀಯ ಟಿ20ಯ ನಾಯಕತ್ವವೂ ಹಾರ್ದಿಕ್ ಪಾಂಡ್ಯ ಅವರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಟಿ20 ತಂಡವನ್ನು ಮುನ್ನಡೆಸಿದ್ದರು. 2024ರ ಟಿ20 ವಿಶ್ವಕಪ್ ನಂತರ ಶರ್ಮಾ ಎಲ್ಲಾ ನಾಯಕತ್ವಕ್ಕೂ ನಿವೃತ್ತಿ ಘೋಷಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ಐಪಿಎಲ್: ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕ