ETV Bharat / sports

ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್! ಸದ್ಯದ ಲೆಕ್ಕ ಹೀಗಿದೆ.. - ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ, ಭಾರತ ತಂಡವು ಬಾಂಗ್ಲಾದೇಶವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಅಗ್ರಸ್ಥಾನಿ ಬಲಿಷ್ಟ ಆಸ್ಟ್ರೇಲಿಯಾ​ ತಂಡವನ್ನು ಮುಂಬರುವ ಸರಣಿಗಳಲ್ಲಿ ಭಾರತ ಎದುರಿಸಲಿದೆ.

World Test Championship final between India vs Australia

author img

By

Published : Dec 27, 2022, 5:08 PM IST

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಮೀರ್‍ಪುರ್​​ನಲ್ಲಿ ಇತ್ತೀಚೆಗೆ ನಡೆದ ದ್ವಿತೀಯ ಕ್ರಿಕೆಟ್‌ ಟೆಸ್ಟ್​ನಲ್ಲಿ ಭಾರತೀಯ ಕ್ರಿಕೆಟ್​ ತಂಡ 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಸನಿಹವಾಗಿದೆ. 2021ರಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕನಸು ಭಗ್ನವಾಗಿತ್ತು.

ಇತ್ತೀಚೆಗೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಮತ್ತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಕಟ್ಟಿಕೊಳ್ಳುವ ಸಮೀಪದಲ್ಲಿದೆ. ಆದರೆ, ಕೆಲವು ತಂಡಗಳ ಸೋಲು ಪರೋಕ್ಷವಾಗಿ ಇನ್ನುಳಿದ ಕೆಲವು ತಂಡಗಳಿಗೆ ವರದಾನವಾಗುವ ಸಂಭವವೂ ಇದೆ. ಹಾಗೆಯೇ ಇದು ಮುಳುವೂ ಕೂಡಾ ಆಗಬಹುದು. ಇದನ್ನು ಗಮನಿಸಿದರೆ, ಭಾರತ ತಂಡಕ್ಕೆ ಚಾಂಪಿಯನ್‌ಶಿಪ್​ ಅಷ್ಟು ಸುಲಭದ ಸವಾಲಲ್ಲ ಅನ್ನೋದು ಸದ್ಯದ ಲೆಕ್ಕಾಚಾರ.

ಲೇಟೆಸ್ಟ್‌ ಪಾಯಿಂಟ್‌ ಪಟ್ಟಿ ನೋಡುವುದಾದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಣಾಹಣಿ ನಿಗದಿಯಾದಂತಿದೆ. ಇದರ ನಡುವೆ ಪೈಪೋಟಿ ಸ್ಥಾನದಲ್ಲಿರುವ ಬಲಿಷ್ಟ ದಕ್ಷಿಣ ಆಫ್ರಿಕಾ (ಆಸ್ಟ್ರೇಲಿಯಾ ವಿರುದ್ಧ) ಮತ್ತು ಶ್ರೀಲಂಕಾ (ನ್ಯೂಜಿಲೆಂಡ್ ವಿರುದ್ಧ) ತಂಡಗಳು ಸದ್ಯ ನಡೆಯುತ್ತಿರುವ ಟೆಸ್ಟ್​ ಸರಣಿಗಳಲ್ಲಿ ತಮಗೆ ನೀಡಿದ ಸವಾಲುಗಳನ್ನು ಹಿಮ್ಮೆಟ್ಟಿಸಿದರೆ ಈ ಸ್ಥಾನಗಳು ಅದಲು-ಬದಲಾಗುವ ಸಾಧ್ಯತೆಯೂ ಇದೆ. ಇದರ ಹೊರತಾಗಿಯೂ ಒಂದು ವೇಳೆ ಭಾರತೀಯ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಕಷ್ಟಸಾಧ್ಯ ಎನ್ನಲಾಗುತ್ತಿದೆ. ಹಾಗಾಗಿ ಭಾರತ ಮುಂದಿನ ಹಾದಿಯನ್ನು ಸುಲಭಗೊಳಿಸಿಕೊಳ್ಳಬೇಕು.

ಫೈನಲ್‌ಗೆ ಸುಲಭ ಪ್ರವೇಶ: ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಅಗ್ರ 9 ಟೆಸ್ಟ್ ಆಡುವ ತಂಡಗಳ ನಡುವೆ ಎರಡು ವರ್ಷಗಳ ಲೀಗ್‌ನಂತೆ ಆಡಿಸಲಾಗುತ್ತದೆ. ನಂತರ 2 ತಂಡಗಳ ನಡುವೆ ನಾಕೌಟ್ ಫೈನಲ್‌ ನಡೆಯುತ್ತದೆ. ಇದೀಗ ಆ ಅವಕಾಶ ಕೂಡಿ ಬಂದಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಫೈನಲ್‌ಗೆ ಸುಲಭವಾಗಿ ಪ್ರವೇಶ ಪಡೆಯಲಿದೆ. ಆದರೆ, ಇದು ಅಷ್ಟು ಸುಲಭದ ಕೆಲಸವೂ ಅಲ್ಲ ಎಂಬ ಮಾತೂ ಸಹ ಕೇಳಿಬರುತ್ತಿದೆ.

ತನ್ನ ಸ್ಥಾನ ಭದ್ರಪಡಿಸಿರುವ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ತಂಡ ಶೇ.76.92 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ ಶೇ.58.93 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಶೇ. 54.55 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಶೇ. 53.33 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಶೇ. 44.44 ಅಂಕ ಹೊಂದಿರುವ ಇಂಗ್ಲೆಂಡ್‌ಗೆ​ ಸ್ಥಾನ ದಕ್ಕಿದೆ. ಒಂದು ತಂಡದ ಗೆಲುವಿಗೆ 12 ಅಂಕಗಳನ್ನು ನೀಡಲಾಗುತ್ತದೆ. ಟೈ ಆದರೆ ಆರು ಅಂಕಗಳನ್ನೂ ಮತ್ತು ಡ್ರಾ ಆದರೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಆಸ್ಟ್ರೇಲಿಯಾ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇನ್ನೂ ಆರು ಪಂದ್ಯಗಳನ್ನು ಆಡಬೇಕಿದೆ.

ಪ್ರಸ್ತುತ ಮೆಲ್ಬೋರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ ತೊಡಗಿದೆ. ಈಗಾಗಲೇ 1-0 ಒಂದು ಹೆಜ್ಜೆ ಮುಂದೆ ಸಹ ಹೋಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಮುಗಿದ ಬಳಿಕವೇ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ನಾಲ್ಕು ಟೆಸ್ಟ್‌ಗಳನ್ನು ಆಡಲಿದೆ. ಸದ್ಯ ಭಾರತ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಆಸ್ಟ್ರೇಲಿಯಾದೊಂದಿಗಿನ ಟೆಸ್ಟ್ ಸರಣಿ ಇನ್ನೂ ಬಾಕಿ ಇದೆ. ಸದ್ಯ ಅಂಕಗಳನ್ನು ಗಮವಿಸುವುದಾದರೆ ಆಸ್ಟ್ರೇಲಿಯಾ ಫೈನಲ್ ತಲುಪುವುದು ಬಹುತೇಕ ಖಚಿತ. ದಕ್ಷಿಣ ಆಫ್ರಿಕಾ ವಿರುದ್ಧ ಇದೀಗ ನಡೆಯುತ್ತಿರುವ ಟೆಸ್ಟ್​ನಲ್ಲಿ ಒಂದು ವೇಳೆ ಕಳಪೆ ಪ್ರದರ್ಶನ ತೋರಿದರೆ, ಇದರ ಜೊತೆಗೆ ಭಾರತದ ವಿರುದ್ಧ 1-3 ರಿಂದ ಸೋತರೂ ಸಹ ಲಭ್ಯವಿರುವ ಅಂಕಗಳಲ್ಲಿ ಯಾವುದೇ ಪರಿಣಾಮ ಬೀರದು.

ಭಾರತಕ್ಕೆ ಅವಕಾಶಗಳು..: ತವರಿನಲ್ಲಿ ಭಾರತವು ಆಸ್ಟ್ರೇಲಿಯಾವನ್ನು 3-1 ಗೋಲುಗಳಿಂದ ಸೋಲಿಸಿದರೆ, ಲಭ್ಯವಿರುವ ಅಂಕಗಳಲ್ಲಿ ಶೇ. 62.5 ಅಂಕಗಳೊಂದಿಗೆ ಲೀಗ್ ಹಂತವನ್ನು ತಲುಪಲಿದೆ. ಆದರೆ, ಒಂದು ವೇಳೆ ಸರಣಿ ಡ್ರಾ ಆದರೆ ಭಾರತದ ಸ್ಕೋರ್ ಶೇ.56.94 ಕುಸಿಯಲಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಭಾರತ ತಂಡವು ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಶೇಕಡಾವಾರು ಅಂಕಗಳನ್ನು ಗಮನಿಸಿದಾಗ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾರತಕ್ಕಿಂತ ಕೆಳಗಿವೆ.

ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ಒಂದು ವೇಳೆ ಸೋತರೆ ಶೇ. 54.55 ರಿಂದ ಶೇ.53.84ಕ್ಕೆ ಕುಸಿತವಾಗಲಿದೆ. ಇತ್ತ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ತಂಡ ಎರಡು ಟೆಸ್ಟ್ ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿದ್ದು ಸೋಲು-ಗೆಲುವು ಲೆಕ್ಕಾಚಾರ ನೋಡಿದರೆ ಅವರು ಶೇ. 53.33 ದಿಂದ ಶೇ. 52.78ಕ್ಕೆ ಕುಸಿಯಬಹುದು. ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಹಿಡಿತ ಸಾಧಿಸುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದು ಅವಕಾಶ ಹೆಚ್ಚಿದೆ.

ಫೈನಲ್ ರೇಸ್‌ನಿಂದ ಹೊರಬಿದ್ದ ಇಂಗ್ಲೆಂಡ್‌-ಪಾಕ್​​: ಪಾಕಿಸ್ತಾನದ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ವೈಟ್ ವಾಶ್ ಮಾಡಿದ ನಂತರ ಕೂಡ ಇಂಗ್ಲೆಂಡ್‌ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಅವರು 46.97 ಪಿಸಿಟಿ ಹೊಂದಿದ್ದು, ಇನ್ನು ಯಾವುದೇ ಟೆಸ್ಟ್ ಪಂದ್ಯವನ್ನು ಹೊಂದಿಲ್ಲ. ಪಾಕಿಸ್ತಾನಕ್ಕೆ ಫೈನಲ್ ತಲುಪುವ ಅವಕಾಶ ಇತ್ತಾದರೂ ಇಂಗ್ಲೆಂಡ್‌ ವಿರುದ್ಧದ ಹೀನಾಯ ಸೋಲಿನ ನಂತರ ರೇಸ್‌ನಿಂದ ಹೊರಬಿದ್ದಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ವೆಸ್ಟ್ ಇಂಡೀಸ್ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ರೇಸ್‌ನಿಂದ ಹೊರಗುಳಿದಿದ್ದು ಸದ್ಯ ಆಸ್ಟ್ರೇಲಿಯಾ ಮಾತ್ರ ಫೈನಲ್‌ಗೆ ತಲುಪುವುದು ಖಚಿತ.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ದಾಖಲೆಗಳ ಸುರಿಮಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.