ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ 2021-23: ಭಾರತ - ಇಂಗ್ಲೆಂಡ್​ ಸರಣಿಯಿಂದ ಟೂರ್ನಿ ಆರಂಭ - ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿ

ಭಾರತ - ಇಂಗ್ಲೆಂಡ್​ ನಡುವಿನ ಟೆಸ್ಟ್​​ ಸರಣಿ ಮೂಲಕ 2021-23ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಚಾಲನೆ ಸಿಗಲಿದೆ. ಪ್ರತಿ ಟೆಸ್ಟ್​ ಪಂದ್ಯದಲ್ಲಿ ಗೆಲ್ಲುವ ತಂಡ 12 ಅಂಕ ಕಲೆ ಹಾಕಲಿದೆ.

World Test Championship 2021-23
World Test Championship 2021-23
author img

By

Published : Jun 30, 2021, 7:13 PM IST

Updated : Jun 30, 2021, 7:18 PM IST

ಹೈದರಾಬಾದ್​: ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ಇದೀಗ ಆಂಗ್ಲರ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಈ ಮೂಲಕ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ 2021 - 23ಕ್ಕೆ ಚಾಲನೆ ಸಿಗಲಿದೆ. ಮುಂದಿನ ತಿಂಗಳಿಂದ ಐದು ಪಂದ್ಯಗಳ ಟೆಸ್ಟ್​ ಸರಣಿ ಆರಂಭಗೊಳ್ಳುತ್ತಿದ್ದು, ಈ ಮೂಲಕ ಕೊಹ್ಲಿ ಪಡೆ ಮತ್ತೊಮ್ಮೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಅಣಿಯಾಗಲಿದೆ.​​

ಟೆಸ್ಟ್​ ಪಂದ್ಯದಲ್ಲಿ ಗೆಲ್ಲುವ ತಂಡ 12 ಪಾಯಿಂಟ್​ ಗಳಿಕೆ ಮಾಡಲಿದ್ದು, ಟೈ ಆದರೆ, 6 ಅಂಕ ಹಾಗೂ ಡ್ರಾಗೊಂಡರೆ 4 ಅಂಕ ಪಡೆದುಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಇಂಗ್ಲೆಂಡ್​ 21 ಟೆಸ್ಟ್​, ಭಾರತ 19, ಆಸ್ಟ್ರೇಲಿಯಾ 18, ದಕ್ಷಿಣ ಆಪ್ರಿಕಾ 15 ಟೆಸ್ಟ್​​​​ ಪಂದ್ಯಗಳನ್ನಾಡಲಿದ್ದು, ನ್ಯೂಜಿಲ್ಯಾಂಡ್​ ಕೇವಲ 13 ಟೆಸ್ಟ್​​ ಪಂದ್ಯಗಳಲ್ಲಿ ಭಾಗಿಯಾಗಲಿದೆ. ಉಳಿದಂತೆ ವೆಸ್ಟ್​ ಇಂಡೀಸ್​, ಶ್ರೀಲಂಕಾ ಹಾಗೂ ಪಾಕಿಸ್ತಾನ 14 ಪಂದ್ಯಗಳನ್ನಾಡಲಿದೆ. ಈ ಹಿಂದಿನ ಟೆಸ್ಟ್​ ಚಾಂಪಿಯನ್​ಶಿಪ್​​ಗೋಸ್ಕರ ನಡೆಯುವ ಟೆಸ್ಟ್ ಸರಣಿಗೋಸ್ಕರ ಐಸಿಸಿ 120 ಅಂಕ ನಿಗದಿಪಡಿಸಿತ್ತು. ಆದರೆ, ಇದೀಗ ಅದರಲ್ಲಿ ಬದಲಾವಣೆ ಮಾಡಿದೆ.

ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. 9 ತಂಡಗಳು ಒಟ್ಟು ಆರು ಟೆಸ್ಟ್​ ಸರಣಿ ಆಡಲಿದ್ದು, ಮೂರು ತವರಿನಲ್ಲಿ ಹಾಗೂ ಇತರ ಮೂರು ಸರಣಿ ವಿದೇಶದಲ್ಲಿ ನಡೆಯಲಿವೆ.

ಇದನ್ನೂ ಓದಿರಿ: ಲವರ್​ ಮೇಲಿನ ಸಿಟ್ಟು: ಕುಟುಂಬದ ಐವರ ಕೊಲೆ ಮಾಡಿ ಹೂತು ಹಾಕಿದ್ದ ವ್ಯಕ್ತಿ!

ಕಳೆದ ಕೆಲ ದಿನಗಳ ಹಿಂದೆ ನಡೆದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ, ನ್ಯೂಜಿಲ್ಯಾಂಡ್​ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದೆ. ಇದರ ಜೊತೆಗೆ ಕಿವೀಸ್​ ಪಡೆ ಚೊಚ್ಚಲ ಚಾಂಪಿಯನ್​ಪಟ್ಟ ಅಲಂಕಾರ ಮಾಡಿದೆ.

Last Updated : Jun 30, 2021, 7:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.