ದೋಹಾ (ಕತಾರ್): ಏಷ್ಯಾ ಲಯನ್ಸ್ ಆರಂಭಿಕರಾದ ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶಾನ್ ಅವರ ಅರ್ಧಶತಕದ ನೆರವಿನಿಂದ ವರ್ಲ್ಡ್ ಜೈಂಟ್ಸ್ ತಂಡವು 7 ವಿಕೆಟ್ ಸೋಲನುಭವಸಿದರು. ಇದರಿಂದ ಶಾಹಿದ್ ಅಫ್ರಿದಿ ನಾಯಕ್ವದ ಏಷ್ಯಾ ಲಯನ್ಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ಮಾಸ್ಟರ್ಸ್‌ನ ಹೊಸ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.
ದೋಹಾದ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಇನ್ನೂ 23 ಎಸೆತಗಳು ಬಾಕಿ ಇರುವಂತೆಯೇ ಏಷ್ಯಾ ಲಯನ್ಸ್ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ತರಂಗ ಮತ್ತು ದಿಲ್ಶನ್ ವರ್ಲ್ಡ್ ಜೈಂಟ್ಸ್ರ ದಾಳಿಗೆ ತಕ್ಕೆ ಉತ್ತರ ನೀಡಿ 9.6 ಓವರ್‌ಗಳಲ್ಲಿ 115 ರನ್ ಆರಂಭಿಕ ಜೊತೆಯಾಟವನ್ನು ನೀಡಿದರು. ದಿಲ್ಶಾನ್ 42 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 58 ರನ್ ಗಳಿಸಿದರೆ, ತರಂಗ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು. ಭಾರತ ಮಹಾರಾಜರ ವಿರುದ್ಧ 50 ರನ್ ಗಳಿಸಿ ಏಷ್ಯಾ ಲಯನ್ಸ್ ತಂಡವನ್ನು ಫೈನಲ್‌ಗೆ ತಲುಪಿಸಿದ ತರಂಗ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
-
It's Official - The Lions rule the Season 2 of LLCMasters! 🏏🦁💥@AsiaLionsLLC#LegendsLeagueCricket #LLCT20 #SkyexchnetLLCMaster #YahanSabBossHain pic.twitter.com/7oETzHflGf
— Legends League Cricket (@llct20) March 20, 2023 " class="align-text-top noRightClick twitterSection" data="
">It's Official - The Lions rule the Season 2 of LLCMasters! 🏏🦁💥@AsiaLionsLLC#LegendsLeagueCricket #LLCT20 #SkyexchnetLLCMaster #YahanSabBossHain pic.twitter.com/7oETzHflGf
— Legends League Cricket (@llct20) March 20, 2023It's Official - The Lions rule the Season 2 of LLCMasters! 🏏🦁💥@AsiaLionsLLC#LegendsLeagueCricket #LLCT20 #SkyexchnetLLCMaster #YahanSabBossHain pic.twitter.com/7oETzHflGf
— Legends League Cricket (@llct20) March 20, 2023
ಇದಕ್ಕೂ ಮೊದಲು, ವರ್ಲ್ಡ್ ಜೈಂಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಏಷ್ಯಾ ಲಯನ್ಸ್ ದಾಳಿಗೆ ವರ್ಲ್ಡ್ ಜೈಂಟ್ಸ್ ತಂಡ ಆರಂಭಿಕ ಆಘಾತ ಎದುರಿಸಿ ಪುಟಿದೆದ್ದು 20 ಓವರ್ನಲ್ಲಿ 147 ರನ್ನ ಗುರಿ ನೀಡಿತ್ತು. ಲೆಂಡಲ್ ಸಿಮನ್ಸ್ ಮತ್ತು ಮೊರ್ನೆ ವ್ಯಾನ್ ವೈಕ್ ಇನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿದರು. ಮೊರ್ನೆ ವ್ಯಾನ್ ವೈಕ್ ಶೂನ್ಯಕ್ಕೆ ವಿಕೆಟ್ ಕೊಟ್ಟರೆ ಅವರ ಬೆನ್ನಲ್ಲೇ ಬಂದ ನಾಯಕ ವ್ಯಾಟ್ಸನ್ ಕೂಡ ಡಕ್ ಔಟ್ ಆದರು.
ಏಷ್ಯಾ ಲಯನ್ಸ್ ದಾಳಿಗೆ ವರ್ಲ್ಡ್ ಜೈಂಟ್ಸ್ ತಂಡ ಆರಂಭಿಕ ಆಘಾತದ ನಂತರ ಪುಟಿದೆದಿತು. 54 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 78 ರನ್‌ಗಳ ಜಾಕ್ವೆಸ್ ಕಾಲಿಸ್ ಗಳಿಸಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. 33 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿದ ರಾಸ್ ಟೇಲರ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ ಕಾಲಿಸ್ 11.1 ಓವರ್‌ಗಳಲ್ಲಿ 92 ರನ್‌ಗಳ ಜೊತೆಯಾಟವನ್ನು ನಡೆಸಿದರು. ಇವರ ಜೊತೆಯಾಟದಿಂದ 147 ರನ್ ಸಾಧಾರಣ ಗುರಿ ನೀಡಲು ಸಾಧ್ಯವಾಯಿತು.
ಈ ಗುರಿಯನ್ನು ಸುಲಭವಾಗಿ 16.1 ಓವರ್ನಲ್ಲಿ ಬೆನ್ನು ಹತ್ತಿದ ಏಷ್ಯಾ ಲಯನ್ಸ್ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಉತ್ತಮ ಬೌಲಿಂಗ್ ಮಾಡಿ 2 ವಿಕೆಟ್ ಪಡೆದ ಅಬ್ದುಲ್ ರಜಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ತಂಡಗಳು: ಏಷ್ಯಾ ಲಯನ್ಸ್: ಉಪುಲ್ ತರಂಗ(ವಿಕೆಟ್ ಕೀಪರ್), ತಿಲಕರತ್ನೆ ದಿಲ್ಶನ್, ಮೊಹಮ್ಮದ್ ಹಫೀಜ್, ಅಸ್ಗರ್ ಅಫ್ಘಾನ್, ತಿಸಾರ ಪೆರೆರಾ, ಅಬ್ದುರ್ ರಜಾಕ್, ಶಾಹಿದ್ ಅಫ್ರಿದಿ(ನಾಯಕ), ಮಿಸ್ಬಾ-ಉಲ್-ಹಕ್, ಸೊಹೈಲ್ ತನ್ವೀರ್, ಪಾರಸ್ ಖಡ್ಕಾ, ಅಬ್ದುಲ್ ರಜಾಕ್
ವರ್ಲ್ಡ್ ಜೈಂಟ್ಸ್: ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್ (ನಾಯಕ), ರಾಸ್ ಟೇಲರ್, ಜಾಕ್ವೆಸ್ ಕಾಲಿಸ್, ಲೆಂಡ್ಲ್ ಸಿಮನ್ಸ್, ಪಾಲ್ ಕಾಲಿಂಗ್‌ವುಡ್, ಸಮಿತ್ ಪಟೇಲ್, ಮಾಂಟಿ ಪನೇಸರ್, ಟಿನೋ ಬೆಸ್ಟ್, ಕ್ರಿಸ್ ಎಂಪೋಫು, ಬ್ರೆಟ್ ಲೀ
ಇದನ್ನೂ ಓದಿ: ಟಾಸ್ ಗೆದ್ದ ಕೌರ್ ಕ್ಷೇತ್ರ ರಕ್ಷಣೆ ಆಯ್ಕೆ: ನೇರ ಫೈನಲ್ ಪ್ರವೇಶವೇ ಗುರಿ ಎಂದ ಹರ್ಮನ್ಪ್ರೀತ್