ETV Bharat / sports

ಡಚ್ಚರು ಎಲ್ಲರೂ ನೆನಪಿನಲ್ಲಿಡುವಂತಹ ಪಂದ್ಯ ಆಡುವ ಸಾಮರ್ಥ್ಯ ಹೊಂದಿದ್ದಾರೆ: ಆಕಾಶ್​ ಚೋಪ್ರಾ - Cricket World Cup 2023

ಕ್ರಿಕೆಟ್​ ವಿಚಾರದಲ್ಲಿ ನೆದರ್ಲೆಂಡ್​ ತಂಡ ಆರ್ಥಿಕವಾಗಿ ಅಷ್ಟು ಸಾಮರ್ಥ್ಯ ಹೊಂದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್​ ಚೋಪ್ರಾ ಹೇಳಿದ್ದಾರೆ.

World Cup
World Cup
author img

By ETV Bharat Karnataka Team

Published : Oct 18, 2023, 7:14 PM IST

ಹೈದರಾಬಾದ್: 2023ರ ವಿಶ್ವಕಪ್​ನ ಕಾಲು ಭಾಗದಷ್ಟು ಪಂದ್ಯಗಳು ನಡೆದಿದೆ ಅಷ್ಟೇ. ಅಷ್ಟರಲ್ಲೇ ಎರಡು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ತಂಡಗಳು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕ ಕ್ರಮವಾಗಿ ಅಫ್ಘಾನಿಸ್ತಾನ, ನೆದರ್ಲೆಂಡ್​ ಎದುರು ಸೋಲು ಕಂಡಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮತ್ತು ಧರ್ಮಶಾಲಾ ಮೈದಾನ ಈ ಫಲಿತಾಂಶಕ್ಕೆ ಸಾಕ್ಷಿಯಾಯಿತು.

ಕಳೆದ ಐದು ಪಂದ್ಯಗಳಲ್ಲಿ ಹರಿಣಗಳ ಪಡೆ 338, 416, 315, 428, 311 ರನ್​ ಕಲೆಹಾಕಿತ್ತು. ನಿನ್ನೆ ಡಚ್ಚರು ನೀಡಿದ್ದ 246 ರನ್​ನ ಗುರಿಯನ್ನು ಬೆನ್ನಟ್ಟಿದ ತಂಡ 207 ರನ್​ಗೆ ಸರ್ವಪತನ ಕಂಡಿತು. ಕಳೆದ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದ ಆಟಗಾರರು ಡಚ್​ ಬೌಲಿಂಗ್​ ಮುಂದೆ ಮಂಕಾಗಿದ್ದರು.

ಭಾರತದಲ್ಲಿ ಕ್ರಿಕೆಟ್​ ಅನ್ನು ವೃತ್ತಿ ಪರವಾಗಿ ಆಡಲಾಗುತ್ತಿದೆ. ಆದರೆ, ನೆದರರ್ಲೆಂಡ್​ನಲ್ಲಿ ಆ ರೀತಿ ಇನ್ನೂ ಕ್ರಿಕೆಟ್​ ಬೆಳೆದಿಲ್ಲ. ನೆದರ್ಲೆಂಡ್​ ಉತ್ತಮ ಸಾಕರ್ - ಆಡುವ ದೇಶ ಎಂದು ಕರೆಯಲ್ಪಡುತ್ತದೆ. ಅವರು 2014 ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು ಮತ್ತು 2010 ಫಿಫಾ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಡಚ್ಚರ ತಂಡ ಹಾಕಿಯಲ್ಲಿಯೂ ಉತ್ತಮವಾಗಿದೆ. ಆದರೆ, ಈ ಯುರೋಪಿಯನ್ ರಾಷ್ಟ್ರದ ಕೆಲವೇ ಆಟಗಾರರು ಕ್ರಿಕೆಟ್ ವೃತ್ತಿಪರವಾಗಿ ತೆಗೆದುಕೊಡಿಂದ್ದಾರೆ. ಟೆಸ್ಟ್​ ಆಡುವ ತಂಡವನ್ನು ನೆದರ್ಲೆಂಡ್​ ವಿಶ್ವಕಪ್​ನಲ್ಲಿ ಮಣಿಸಿದ ಸಾಧನೆ ಮಾಡಿತು. ಈ ಸಮಯದಲ್ಲಿ ಗಮನಾರ್ಹ ವಿಷಯ ಎಂದರೆ 2022ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್​ ಹರಿಣಗಳ ಪಡೆಯನ್ನು ಹೊರಹಾಕಿತ್ತು.

ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ನೆದರ್ಲೆಂಡ್​ನಲ್ಲಿ ಕ್ರಿಕೆಟ್​ ಬಗ್ಗೆ ಮಾತನಾಡಿದ್ದು, "ನೆದರ್ಲೆಂಡ್​ ಹವ್ಯಾಸಿಗಳಿಂದ ತುಂಬಿರುವ ತಂಡವಾಗಿದೆ. ಕೆಲವೇ ಕೆಲವು ವೃತ್ತಿಪರರಿದ್ದಾರೆ. ಅದಕ್ಕೆ ಕಾರಣ ಹಣವಿಲ್ಲ. ಅಲ್ಲಿ ಯಾರೂ ಒಪ್ಪಂದ ಹೊಂದಿಲ್ಲ. ಅವರು ತಂಡದಲ್ಲಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳುತ್ತಾರೆ ಮತ್ತು ಎಷ್ಟು ಆಟಗಾರರು ಆಡುತ್ತಾರೆ ಎಂಬುದರ ಮೇಲೆ ನಿಂತಿದೆ" ಎಂದಿದ್ದಾರೆ.

"ಕ್ವಾಲಿಫೈಯರ್ ಸಮಯದಲ್ಲಿ, ಅವರ ಏಳು ಆಟಗಾರರು ಸಹ ಇರಲಿಲ್ಲ. ಅವರೆಲ್ಲ ಕೌಂಟಿ ಕ್ರಿಕೆಟ್ ಆಡುತ್ತಿದ್ದರು. ಬಾಸ್ ಡಿ ಲೀಡೆ ಅವರಂತಹವರು ಅರ್ಹತಾ ಪಂದ್ಯಗಳಿಗಾಗಿ ಬಂದವರು. ಮತ್ತು ಅರ್ಹತಾ ಪಂದ್ಯಗಳನ್ನು ಆಡಲು ಹಣವಿಲ್ಲದ ಕಾರಣ ಅವರೆಲ್ಲ ಹಿಂತಿರುಗಿದರು. ಆದ್ದರಿಂದ ಜನರು ನೆದರ್ಲೆಂಡ್ಸ್‌ಗಾಗಿ ಆಡಲು ಬಯಸಿದ್ದರೂ, ಹಣದ ಕೊರತೆ ಕೂಡಾ ಎದುರಿಸುತ್ತಿದ್ದಾರೆ. ಆದರೆ ಅವರಲ್ಲಿ ಎಲ್ಲರೂ ನೆನಪಿನಲ್ಲಿಡುವಂತಹ ಒಂದು ಪಂದ್ಯವನ್ನು ಆಡುವ ಸಾಮರ್ಥ್ಯ ಇದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅವರು ಅದನ್ನೇ ಮಾಡಿದ್ದಾರೆ" ಎಂದು ಚೋಪ್ರಾ ತಿಳಿಸಿದರು.

ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಕೇವಲ ಮೂರನೇ ಗೆಲುವು ದಾಖಲಿಸಿದ ನೆದರ್ಲೆಂಡ್ಸ್, ಅಕ್ಟೋಬರ್ 21 ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್: ಯಂಗ್​, ಲ್ಯಾಥಮ್​, ಫಿಲಿಫ್ಸ್​ ಅರ್ಧಶತಕದಾಟ: ಆಫ್ಘನ್ನರಿಗೆ 289 ರನ್​ಗಳ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.