ETV Bharat / sports

ಸೋತರೂ ಬಟ್ಲರ್ ತಂಡ ಬಲಿಷ್ಠ: ಮಾರ್ಗನ್ ಹೇಳಿಕೆ ತಳ್ಳಿ ಹಾಕಿದ ಇಂಗ್ಲೆಂಡ್ ಕೋಚ್ - ವಿಶ್ವಕಪ್ 2023

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಭಾನುವಾರ ಲಕ್ನೋದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ 100 ರನ್‌ಗಳಿಂದ ಸೋಲು ಅನುಭವಿಸಿತು.

World Cup: We're an incredibly tight-knit unit, insists England chief coach Matthew Mott after side crashes out of the tournament

author img

By ETV Bharat Karnataka Team

Published : Oct 30, 2023, 3:13 PM IST

ಲಕ್ನೋ (ಉತ್ತರ ಪ್ರದೇಶ): 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​​ ಅಭಿಯಾನದಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಐದು ಸೋಲು ಕಂಡಿರುವ ಇಂಗ್ಲೆಂಡ್‌ ಸೆಮೀಸ್​ನಿಂದ ಭಾಗಶಃ ಹೊರಬಿದ್ದಿದೆ. ಪವಾಡ ನಡೆದರೆ ಮಾತ್ರ ಅದಕ್ಕೊಂದು ಅವಕಾಶ ಸಿಗಬಹುದಷ್ಟೇ. ಇದಷ್ಟೇ ಅಲ್ಲ, ಕಳಪೆ ಪ್ರದರ್ಶನದಿಂದ ದೊಡ್ಡ ಮೊತ್ತದ ಬೆಲೆ ತೆತ್ತಿರುವ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್‌, 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದು ಕೂಡ ಅನುಮಾನ. ಈಗಿನ ಅಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯದ ಹೊರತು ಕನಸಿನ ಮಾತು.!

ಇಂಗ್ಲೆಂಡ್ ತಂಡದ ಮುಖ್ಯ ತರಬೇತುದಾರ ಮ್ಯಾಥ್ಯೂ ಮೋಟ್ ಕೂಡ ಇದೇ ವಿಚಾರವನ್ನು ಬೇಸರದಿಂದ ಹೇಳಿಕೊಂಡಿದ್ದಾರೆ. ''ಐಸಿಸಿ ಅರ್ಹತೆಯೊಂದಿಗೆ ನಿಯಮಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುತ್ತದೆ. ನಿಜ ಹೇಳಬೇಕೆಂದರೆ, ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರದು. ಈವರೆಗೆ ನಾವು ಆಡಿದ ರೀತಿಯಲ್ಲಿ ಅದು ದೊಡ್ಡ ವಿಷಯವೇ ಅಲ್ಲ. ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಉತ್ತಮ ಪ್ರದರ್ಶನದೊಂದಿಗೆ ಪುಟಿದೇಳಬೇಕಿದೆ. ಆದರೆ, ಈಗಿನ ಪ್ರಯತ್ನದಲ್ಲಿ ನಾವು ಅಂಕ ಪಟ್ಟಿಯಲ್ಲಿ ಮೇಲೆ ಬರಲು ಸಾಧ್ಯವಿಲ್ಲ. ಸೆಮಿಫೈನಲ್ಸ್‌ ಭರವಸೆಗಳು ಮುಗಿದು ಹೋಗಿವೆ. ನಮ್ಮ ನೆಟ್ ರನ್‌ರೇಟ್ ಮತ್ತು ಇನ್ನೂ ಅನೇಕ ತಂಡಗಳನ್ನು ಎದುರಿಸಬೇಕಾಗಿರುವುದರಿಂದ ನಾವು ಗೌರವಕ್ಕಾಗಿ ಮಾತ್ರ ಆಡಬಹುದು'' ಎಂದರು.

ತಾಂತ್ರಿಕವಾಗಿ ಜೋಸ್ ಬಟ್ಲರ್ ತಂಡ ಸೆಮಿಫೈನಲ್‌ಗೆ ಹೋಗುವ ಅವಕಾಶಗಳಿವೆ. ಆದರೆ, ಅದು ಅಷ್ಟು ಸುಲಭವಲ್ಲ. ನಮ್ಮ ಅಭಿಮಾನಿಗಳು, ಕುಟುಂಬಗಳು, ಬೆಂಬಲಿಗರು, ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬ ನಿರೀಕ್ಷೆಗಳನ್ನು ನಾವು ನಿರಾಸೆಗಳೊಳಿಸಿದ್ದೇವೆ ಎಂದು 2019ರ ವಿಶ್ವಕಪ್​ನ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿಕೆಗೂ ಮೋಟ್ ಪ್ರತಿಕ್ರಿಯಿಸಿದರು.

ಇಯಾನ್ ಮಾರ್ಗನ್, ''ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಮೇಲೆ ಪರಿಣಾಮ ಬೀರುವ ಏನೋ ನಡೆದಿದೆ. ಈ ರೀತಿಯ ಕಳಪೆ ಪ್ರದರ್ಶನ ನೀಡಿದ ಕ್ರೀಡಾ ತಂಡವನ್ನು ನಾನು ಎಂದಿಗೂ ನೋಡಿಲ್ಲ. ಆಟಗಾರರನ್ನು ಅಸ್ಥಿರವಾಗಿರುವಂತಹ ಯಾವುದೋ ಒಂದು ಘಟನೆ ನಡೆದಿದೆ'' ಎಂದು ತಂಡದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಮ್ಯಾಥ್ಯೂ ಮೋಟ್​, ಅಂತಹ ಯಾವುದೇ ಘಟನೆಗಳು ನಡೆದಿಲ್ಲ, ನಡೆಯಲು ಸಾಧ್ಯವಿಲ್ಲ. ಭಾರತದ ವಿರುದ್ಧ 100 ರನ್​ಗಳಿಂದ ಸೋತರು ಕೂಡ ಬಟ್ಲರ್ ಪಡೆ ಊಹಿಸಲಾರಷ್ಟು ಬಲಿಷ್ಠ ಎಂದು ತಾವು ನೀಡುತ್ತಿರುವ ತರಬೇತಿ ಬಗ್ಗೆಯೂ ಹೇಳಿಕೊಂಡರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಆಂಗ್ಲರ ವಿರುದ್ಧ ಭಾರತಕ್ಕೆ 100 ರನ್​ಗಳ ಭರ್ಜರಿ ಗೆಲುವು.. ಸೆಮಿಸ್​ಗೆ ರೋಹಿತ್​​ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.