ರಾಜ್‌ಕೋಟ್ (ಗುಜರಾತ್): ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಭಾರತ ತಂಡವು ಭಾನುವಾರ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 199 ರನ್‌ಗಳಿಗೆ ಮಣಿಸಿತ್ತು. ಜಡೇಜಾ ಟರ್ನಿಂಗ್ ಪಿಚ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡರು ಮತ್ತು ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು. ಜೊತೆಗೆ ಆ ಪಂದ್ಯವನ್ನು ಭಾರತದ ಪರವಾಗಿ ಪರಿವರ್ತಿಸಲು ಪೂರಕ ವಾತಾವರಣ ನಿರ್ಮಿಸಿಕೊಟ್ಟಿದ್ದರು.
ಭಾರತವು 2023 ರ ವಿಶ್ವಕಪ್ ಗೆಲ್ಲುತ್ತೆ-ಜಡೇಜಾ ಹಿರಿಯ ಸಹೋದರಿ: ಈಟಿವಿ ಭಾರತ ಜೊತೆಗೆ ಸೋಮವಾರ ರವೀಂದ್ರ ಜಡೇಜಾ ಅವರ ಹಿರಿಯ ಸಹೋದರಿ ನಯನಾಬಾ ಜಡೇಜಾ ಅವರೊಂದಿಗೆ ಮಾತನಾಡಿದ್ದಾರೆ. ಅತ್ಯಾಸಕ್ತಿಯ ಕ್ರಿಕೆಟ್ ಅಭಿಮಾನಿಯೂ ಆಗಿರುವ ನಯನಾಬಾ ಅವರು, ಈ ವಿಶ್ವಕಪ್‌ಗಾಗಿ ಸ್ಟಾರ್ ಆಟಗಾರರ ಕುಟುಂಬದ ಭರವಸೆ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಭಾನುವಾರದ ಪಂದ್ಯದ ವೇಳೆ ತನ್ನ ಸಹೋದರ ಉತ್ತಮ ಪ್ರದರ್ಶನ ನೀಡುತ್ತಾನೆ ಎಂದು ತಾನು ಇದಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದೇನೆ ಎಂದು ಹೇಳಿದ್ದಾರೆ. ಇತರ ಲಕ್ಷಾಂತರ ಭಾರತೀಯರಂತೆ, ಅವರು ಭಾರತವು 2023 ರ ವಿಶ್ವಕಪ್ ಗೆಲ್ಲುತ್ತದೆ ಎಂದು ಆಶಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ನಯನಾಬಾ ಅವರು, 'ಭಾರತೀಯ ತಂಡವು ಗೆಲುವಿನ ಆರಂಭವನ್ನು ಮಾಡಿದೆ. ಜೊತೆಗೆ ತಂಡವು 2023ರ ವಿಶ್ವಕಪ್ ಅನ್ನು ಗೆಲ್ಲಲಿದೆ ಎಂಬ ಭರವಸೆ ನನಗಿದೆ. ಮೊದಲ ಪಂದ್ಯದಲ್ಲಿ ಆರಂಭದಲ್ಲಿಯೇ ಭಾರತಕ್ಕೆ ಗೆಲುವು ಕಷ್ಟ ಎಂದುಕೊಂಡಿದ್ದೆ. ಆದರೆ, ಕೊನೆಯವರೆಗೂ ದೃಢಸಂಕಲ್ಪ ತೋರಿದ ತಂಡ ಅಂತಿಮವಾಗಿ ಪಂದ್ಯವನ್ನು ಗೆದ್ದುಕೊಂಡಿತು.
''ಮೊದಲ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿದ್ದು, ರವೀಂದ್ರ ಉತ್ತಮ ಪ್ರದರ್ಶನ ನೀಡಿ ಮೂರು ವಿಕೆಟ್ ಪಡೆದರು. ಅವರ ಕಾರ್ಯವೈಖರಿಗೆ ನಾವು ಪುಳಕಿತರಾಗಿದ್ದೇವೆ. ಮುಂಬರುವ ಪಂದ್ಯಗಳಲ್ಲಿಯೂ ಅವರ ಅತ್ಯುತ್ತಮ ಪ್ರದರ್ಶನ ನೋಡಲು ನಾವು ಉತ್ಸುಕರಾಗಿದ್ದೇವೆ. ಪಂದ್ಯಗಳ ಸಮಯದಲ್ಲಿ, ಆಟಗಾರನ ಕುಟುಂಬ ಸದಸ್ಯರ ಭಾವನೆಗಳು ರವೀಂದ್ರ ಜೊತೆಗೆ ಇರುತ್ತವೆ. ಆದರೆ, ಲಕ್ಷಾಂತರ ಅಭಿಮಾನಿಗಳು ಆಟಗಾರನಿಗಾಗಿ ಪ್ರಾರ್ಥಿಸುತ್ತಿದ್ದಾರೆ'' ಎಂದು ಆಶಯ ವ್ಯಕ್ತಪಡಿಸಿದರು.
ತನ್ನ ಸಹೋದರನ ಆಟವನ್ನು ನೋಡಿದಾಗ ನಿಮಗೆ ಹೇಗೆ ಅನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಯನಾಬಾ ಅವರು, ''ರವೀಂದ್ರ ಆಡಿದಾಗಲೆಲ್ಲಾ ನಾವು ಕೂಡ ಸ್ವಲ್ಪ ಒತ್ತಡ ಅನುಭವಿಸುತ್ತೇವೆ. ಇನ್ನಿಂಗ್ಸ್‌ನ ನಂತರ ರವೀಂದ್ರ ಎಷ್ಟು ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ಎಷ್ಟು ರನ್ ಗಳಿಸುತ್ತಾರೆ ಎಂಬ ಅಂಕಿ- ಅಂಶಗಳನ್ನು ನಾನು ಊಹಿಸುತ್ತೇನೆ. ಉದಾಹರಣೆಗೆ, ಮೊನ್ನೆ ಪಿಚ್ ಸ್ಪಿನ್ನರ್‌ಗಳಿಗೆ ಸ್ವಲ್ಪ ಬೆಂಬಲ ನೀಡುತ್ತಿದೆ ಮತ್ತು ಅವರು ಆ ಪಿಚ್‌ನಲ್ಲಿ ಕನಿಷ್ಠ 3-4 ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ. ನಾನು ಅಂದುಕೊಂಡಿದ್ದನ್ನು ಅಂತಿಮವಾಗಿ ಸಹೋದರ ನಿಜ ಮಾಡಿದರು. ಅದರಲ್ಲೂ ಸ್ಟೀವ್ ಸ್ಮಿತ್ ಅವರ ವಿಕೆಟ್ ಪಂದ್ಯದಲ್ಲಿ ಬಹುಮುಖ್ಯವಾಗಿದ್ದು, ಇದು ಆಟದ ಟರ್ನಿಂಗ್ ಪಾಯಿಂಟ್ ಕೂಡ ಆಗಿತ್ತು'' ಎಂದು ತಿಳಿಸಿದ್ದಾರೆ.
ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ನಯನಾಬಾ ಜಡೇಜಾ, ''ಈ ಬಾರಿ ಭಾರತ ಕ್ರಿಕೆಟ್ ತಂಡ ವಿಭಿನ್ನ ರೂಪದಲ್ಲಿ ಕಾಣುತ್ತಿದೆ. ಭಾರತ ಕ್ರಿಕೆಟ್ ತಂಡವನ್ನು ಹುರಿದುಂಬಿಸಲು ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ನರೇಂದ್ರ ಮೋದಿ ಸ್ಟೇಡಿಯಂಗೆ ಬರುವುದರಿಂದ ಈ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದು ನಾನು ಬಲವಾಗಿ ಭಾವಿಸುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತಾ ದೇವಿಗೆ ಪ್ರಾರ್ಥಿಸಿದ ನಯನಾಬಾ: ''ನವರಾತ್ರಿ ಹಬ್ಬ ಮತ್ತು ವಿಶ್ವಕಪ್ ಎರಡೂ ಒಟ್ಟಿಗೆ ಬಂದಿವೆ. ಆದರೆ, ನವರಾತ್ರಿಗೆ ನಮಗೆ ವಿಶೇಷ ಮಹತ್ವವಿದೆ'' ಎಂದ ಅವರು, ''ವರ್ಷಗಳಿಂದ ದೇವಿಗೆ ಪೂಜೆ ಸಲ್ಲಿಸಿದ್ದೇವೆ. ದೇವಿಯು ನನ್ನ ಪ್ರಾರ್ಥನೆಯನ್ನು ದ್ವಿಗುಣಗೊಳಿಸುತ್ತಾಳೆ. 2023ರ ವಿಶ್ವಕಪ್‌ನಲ್ಲಿ ನನ್ನ ಸಹೋದರ ಅತ್ಯುತ್ತಮ ಪ್ರದರ್ಶನ ನೀಡಲಿ ಮತ್ತು ಭಾರತ ಗೆಲ್ಲಲಿ ಎಂದು ನಾನು ಮಾತಾ ದೇವಿಗೆ ಪ್ರಾರ್ಥಿಸುತ್ತೇನೆ'' ಎಂದು ನಯನಾಬಾ ಮನದಾಳದ ಮಾತನ್ನು ತಿಳಿಸಿದ್ದಾರೆ.
ಇದನ್ನೂ ಓದಿ: 128 ವರ್ಷಗಳ ಬಳಿಕ 2028ರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ: ಅ.15ರಂದು ಅಧಿಕೃತ ಘೋಷಣೆ