ETV Bharat / sports

World Cup 2023: 1992ರ ವಿಶ್ವಕಪ್ ವಿಜೇತ ಪಾಕ್ ನಾಯಕ ಇಮ್ರಾನ್ ಖಾನ್​ಗೆ ಮೊದಲ ಪಂದ್ಯ ವೀಕ್ಷಣೆಗೆ ಬೇಕಿದೆ ಅನುಮತಿ - ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ

ಇಮ್ರಾನ್ ಖಾನ್ ಏಕೈಕ ವಿಶ್ವಕಪ್ ವಿಜೇತ ದಂತಕಥೆ ಪಾಕ್​ ನಾಯಕ ಆಗಿದ್ದಾರೆ. ಟಿವಿ ಸ್ಟುಡಿಯೋದಲ್ಲಿ ಆಟದ ಬಗ್ಗೆ ತಜ್ಞರ ಕಾಮೆಂಟ್‌ಗಳನ್ನು ನೀಡುವ ಬದಲು ತಮ್ಮ ಜೈಲಿನೊಳಗೆ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಅನುಮತಿ ಪಡೆಯಬೇಕಾಗುತ್ತದೆ. ಅದೇ ಜನ್ಮದಿನವು ಕೂಡಾ ಇದೆ ಎಂದು ಈಟಿವಿ ಭಾರತ ಖುರ್ಷಿದ್ ವಾನಿ ವರದಿ ಮಾಡಿದ್ದಾರೆ.

World Cup 2023
1992ರ ವಿಶ್ವಕಪ್ ವಿಜೇತ ಪಾಕ್ ನಾಯಕ ಇಮ್ರಾನ್ ಖಾನ್​ಗೆ ಮೊದಲ ಪಂದ್ಯ ವೀಕ್ಷಣೆಗೆ ಬೇಕಿದೆ ಅನುಮತಿ...
author img

By ETV Bharat Karnataka Team

Published : Sep 30, 2023, 2:10 PM IST

ಹೈದರಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಆರಂಭಿಕ ಪಂದ್ಯ ಅಕ್ಟೋಬರ್ 5ಕ್ಕೆ ನಡೆಯಲಿದೆ.

ಅದೇ ದಿನ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲ್ಲಾ ಜೈಲಿನಲ್ಲಿ 71ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರ ಜನ್ಮದಿನ ಇದೆ. 1992ರ ವಿಶ್ವಕಪ್​ ವಿಜೇತ ಪಾಕ್ ನಾಯಕರಾಗಿದ್ದಾರೆ. ಇಮ್ರಾನ್ ಖಾನ್ ಟಿವಿ ಸ್ಟುಡಿಯೋದಲ್ಲಿ ಆಟದ ಕುರಿತು ತಜ್ಞರ ಕಾಮೆಂಟ್‌ಗಳನ್ನು ನೀಡುವ ಬದಲು, ಜೈಲಿನ ಕೊಠಡಿಯೊಳಗೆ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಅನುಮತಿ ಪಡೆಯಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದೆ. ಅಡಿಯಾಲಾ ಜೈಲಿನಲ್ಲಿ ಭದ್ರತೆ ಹೊರತಾಗಿ, ಇಲ್ಲಿ ಸ್ನಾನಗೃಹ ಮತ್ತು ದೂರದರ್ಶನ ಸೌಲಭ್ಯವಿಲ್ಲ ಎಂದು ಇಮ್ರಾನ್ ಖಾನ್ ಅವರ ಕುಟುಂಬ ಮತ್ತು ವಕೀಲರು ದೂರಿದ್ದರು.

ಖಾನ್ ಅವರನ್ನು ಸೆಪ್ಟೆಂಬರ್ 27 ರಂದು ಅಟಾಕ್‌ನಿಂದ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಹಲವಾರು ವಾರಗಳನ್ನು ಕಳೆದಿದ್ದಾರೆ. ಆಗಸ್ಟ್ 5 ರಂದು ಬಂಧನ ಮಾಡಲಾಗಿದೆ. ಖಾನ್ ಅವರು ಅಧಿಕೃತ ರಹಸ್ಯಗಳನ್ನು "ಸೋರಿಕೆ" ಮಾಡುವ ಆರೋಪ, ತಮ್ಮ ಆಡಳಿತದ ಅವಧಿಯಲ್ಲಿ ಸ್ವೀಕರಿಸಿದ ಉಡುಗೊರೆಗಳ ಮಾರಾಟದಿಂದ ಆದ ಹಣ ವಂಚನೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದೇಶದ 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕ್ರಿಕೆಟ್‌ನಲ್ಲಿ ದೇಶದ ಪಯಣವನ್ನು ಸ್ಮರಿಸಲು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇಮ್ರಾನ್ ಖಾನ್ ವಿಶ್ವಕಪ್ ವಿಜಯದ ಜೊತೆಗೆ ವಿವಿಧ ಸಾಧನೆ ಮಾಡಿದ್ದಾರೆ. ಆದರೆ, ಇಮ್ರಾನ್ ಅವರ ದೃಶ್ಯಗಳನ್ನು ಆ ವಿಡಿಯೋದಿಂದ ಕೈಬಿಡಲಾಗಿದೆ. ಲೆಜೆಂಡರಿ ವೇಗಿ ವಾಸಿಂ ಅಕ್ರಮ್ ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಈ ವಿಡಿಯೋ ತಿದ್ದುಪಡಿಗಾಗಿ ಪಿಸಿಬಿಯನ್ನು ಒತ್ತಾಯಿಸಲಾಗಿದೆ. ಇಮ್ರಾನ್ ಖಾನ್ ಅವರ ಹೆಸರನ್ನು ಅಳಿಸಿಹಾಕುವ ಕಾರ್ಯ ನಡೆದಿದೆ ಎಂದು ಆರೋಪ ಮಾಡಲಾಗಿದೆ. 1987ರಲ್ಲಿ ವಿಶ್ವಕಪ್‌ನಲ್ಲಿ ಸೆಮಿಸ್‌ನ ಆಚೆಗೆ ಹೋಗಲು ಪಾಕ್​ ವಿಫಲವಾಗಿತ್ತು. ನಂತರ, ಇಮ್ರಾನ್ ನೇತೃತ್ವದಲ್ಲಿ 1992ರ ವಿಶ್ವಕಪ್​ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ್ದರು.

ಇಮ್ರಾನ್ ಖಾನ್ ಕ್ರಿಕೆಟ್​ ವೃತ್ತಿಜೀವನದ ಮಾಹಿತಿ:

  • ಪಾದಾರ್ಪಣೆ: ಖಾನ್ 1971ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
  • ಪ್ರತಿನಿಧಿಸುವ ಜವಾಬ್ದಾರಿ: ಪಾಕಿಸ್ತಾನ, ದಾವೂದ್ ಕ್ಲಬ್ ಲಾಹೋರ್, ನ್ಯೂ ಸೌತ್ ವೇಲ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, ಸಸೆಕ್ಸ್, ವೋರ್ಸೆಸ್ಟರ್‌ಶೈರ್
  • ಚೊಚ್ಚಲ/ಕೊನೆಯ ಪಂದ್ಯಗಳು: ಚೊಚ್ಚಲ ಟೆಸ್ಟ್ ಪಂದ್ಯ: ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ - ಜೂನ್ 03- 08, 1971, ಕೊನೆಯದು: ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ- ಜನವರಿ 02 - 07, 1992
  • ಒಡಿಐ ಪಂದ್ಯಗಳು: ಚೊಚ್ಚಲ: ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ - ಆಗಸ್ಟ್ 31, 1974, ಕೊನೆಯದು: ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ - ಮಾರ್ಚ್ 25, 1992
  • ಎಫ್​ಸಿ ಪಂದ್ಯಗಳ ಅವಧಿ: 1969/70 – 1991/92

ಇದನ್ನೂ ಓದಿ: ’ವಿಶ್ವಕಪ್​ ತಂಡ ಸಮತೋಲನದಿಂದ ಕೂಡಿದೆ, ಆದರೆ ತಂಡದಲ್ಲಿ ಆ ಸ್ಪಿನ್ನರ್ ಇರಬೇಕಿತ್ತು’: ಯುವಿ ಆಯ್ಕೆಯ ಆಟಗಾರ ಯಾರು?​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.