ಬೆಂಗಳೂರು: ನಡೆಯುತ್ತಿರುವ ವಿಶ್ವಕಪ್ನಲ್ಲಿ ಸೆಮೀಸ್ ಸ್ಥಾನಕ್ಕೆ ಬಿರುಸಿನ ಪೈಪೋಟಿ ಆರಂಭವಾಗಿದೆ. ಈ ಪ್ರಮುಖ ಹಂತದಲ್ಲಿ ನ್ಯೂಜಿಲೆಂಡ್ಗೆ ಭಾರಿ ಹಿನ್ನಡೆ ಆಗಿದೆ. ಪ್ರಮುಖ ವೇಗದ ಬೌಲರ್ ಮ್ಯಾಟ್ ಹೆನ್ರಿ ಬಲ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದು, ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಮ್ಯಾಟ್ ಹೆನ್ರಿ ಅವರ ಬದಲಾಗಿ ಕೈಲ್ ಜೇಮಿಸನ್ ಕಿವೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
🚨 JUST IN: New Zealand replacement named as experienced pacer is ruled out of #CWC23.
— ICC (@ICC) November 3, 2023 " class="align-text-top noRightClick twitterSection" data="
Details 👇https://t.co/HThGoPATs9
">🚨 JUST IN: New Zealand replacement named as experienced pacer is ruled out of #CWC23.
— ICC (@ICC) November 3, 2023
Details 👇https://t.co/HThGoPATs9🚨 JUST IN: New Zealand replacement named as experienced pacer is ruled out of #CWC23.
— ICC (@ICC) November 3, 2023
Details 👇https://t.co/HThGoPATs9
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೆನ್ರಿ ಗಾಯಗೊಂಡರು, ಎಂಆರ್ಐ ಸ್ಕ್ಯಾನ್ನ ನಂತರ ವೈದ್ಯಕೀಯ ಸಲಹೆಯಂತೆ ಅವರು ಚೇತರಿಸಿಕೊಳ್ಳಲು ಕನಿಷ್ಠ ಎರಡರಿಂದ ನಾಲ್ಕು ವಾರಗಳ ಅಗತ್ಯವಿದೆ ಎನ್ನಲಾಗಿದೆ. ತಂಡ ಗಾಯಾಳುವಿನ ಬಗ್ಗೆ ಮಾಹಿತಿ ನೀಡಿದ ಕೋಚ್ "ತಂಡ ಹೆನ್ರಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ" ಎಂದಿದ್ದಾರೆ.
"ನಾವು ಅವರಿಗೆ ಧೈರ್ಯ ತುಂಬಿದ್ದೇವೆ. ಮ್ಯಾಟ್ ದೀರ್ಘಕಾಲದಿಂದ ನಮ್ಮ ಏಕದಿನ ತಂಡದಲ್ಲಿ ನಿರ್ಣಾಯಕ ಭಾಗವಾಗಿದ್ದಾರೆ ಮತ್ತು ನಾವು ಈ ಪಂದ್ಯಾವಳಿಯ ಪ್ರಮುಖ ಹಂತವನ್ನು ತಲುಪಿದಾಗ ಅವರನ್ನು ಹೊರಗಿಡುವುದು ನಿರಾಶಾದಾಯಕವಾಗಿದೆ. ಅವರು ಸತತವಾಗಿ ಐಸಿಸಿ ಟಾಪ್ 10 ಬೌಲರ್ಗಳಲ್ಲಿ ಇರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಏಕದಿನ ಮಾದರಿಯಲ್ಲಿ ತಂಡಕ್ಕೆ ಪ್ರಮುಖ ಬೌಲರ್ ಆಗಿದ್ದಾರೆ" ಎಂದು ಕೋಚ್ ಗ್ಯಾರಿ ಸ್ಟೆಡ್ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಮ್ಯಾಟ್ ಹೆನ್ರಿ ಕಿವೀಸ್ಗಾಗಿ 80 ಏಕದಿನ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ್ದು, 26.4 ಸರಾಸರಿಯಲ್ಲಿ 5.22 ಎಕಾನಮಿಯಲ್ಲಿ ಎರಡು ಬಾರಿ 5 ವಿಕೆಟ್ ಸೇರಿ, 141 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 30 ರನ್ ಕೊಟ್ಟು 5 ವಿಕೆಟ್ ಕಬಳಿಸಿರುವುದು ಅವರ ಏಕದಿನದ ಬೆಸ್ಟ್ ಬೌಲಿಂಗ್ ಆಗಿದೆ. ಕೈಲ್ ಜೇಮಿಸನ್ 12 ಏಕದಿನ ಇನ್ನಿಂಗ್ಸ್ ಆಡಿದ್ದು, 5.7ರ ಎಕಾನಮಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.
ವಿಶ್ವಕಪ್ನಲ್ಲಿ ನ್ಯೂಜಿಲೆಂಡ್: ಹಾಲಿ ರನ್ನರ್ ಅಪ್ ಆಗಿರುವ ನ್ಯೂಜಿಲೆಂಡ್ ತಂಡ ಈ ವರ್ಷ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿಚಾಂಪಿಯನ್ ಇಂಗ್ಲೆಂಡ್ ಮಣಿಸಿತು. ನಂತರ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದ ಕಿವೀಸ್ ಪಡೆ ಕಳೆದ ಮೂರು ಪಂದ್ಯವನ್ನು ಕಳೆದುಕೊಂಡಿದೆ. 7 ಪಂದ್ಯಗಳನ್ನು ಆಡಿರುವ ಕಿವೀಸ್ 4 ರಲ್ಲಿ ಗೆದ್ದು, 3 ಸೋತಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ನವೆಂಬರ್ 4 ರಂದು ಪಾಕಿಸ್ತಾನವನ್ನು ನ್ಯೂಜಿಲೆಂಡ್ ಎದುರಿಸಲಿದ್ದು ಇದು ಸೆಮೀಸ್ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಿವೀಸ್ ಗೆದ್ದಲ್ಲಿ ಸೆಮೀಸ್ ಕನಸು ಜೀವಂತವಾಗಿರಲಿದೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಟೀಮ್ ಇಂಡಿಯಾ ಗೆಲುವಿನಲ್ಲಿ ಸಚಿನ್ ದಾಖಲೆ ಮುರಿದ ವಿರಾಟ್