ಲಖನೌ (ಉತ್ತರಪ್ರದೇಶ): ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್‌ನ ಮಹತ್ವದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಟೂರ್ನಿಯ 29ನೇ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಪಂದ್ಯದಲ್ಲಿ ಸೋತರೆ ಇಂಗ್ಲೆಂಡ್ ತಂಡ ವಿಶ್ವಕಪ್ನಿಂದ ಬಹುತೇಕ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
-
Toss news from Lucknow 📰
— ICC (@ICC) October 29, 2023 " class="align-text-top noRightClick twitterSection" data="
Jos Buttler calls it right and England will bowl first 🏏#CWC23 | #INDvENG pic.twitter.com/8LeeqJFBAF
">Toss news from Lucknow 📰
— ICC (@ICC) October 29, 2023
Jos Buttler calls it right and England will bowl first 🏏#CWC23 | #INDvENG pic.twitter.com/8LeeqJFBAFToss news from Lucknow 📰
— ICC (@ICC) October 29, 2023
Jos Buttler calls it right and England will bowl first 🏏#CWC23 | #INDvENG pic.twitter.com/8LeeqJFBAF
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಸತತ ಐದನೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇನ್ನೊಂದೆಡೆ, ಸತತ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ಐದು ಪಂದ್ಯದಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.
ರೋಹಿತ್ ನಾಯಕತ್ವದ 100ನೇ ಪಂದ್ಯ: ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಭಾರತವನ್ನು ಮುನ್ನಡೆಸುತ್ತಿರುವ ನೂರನೇ ಪಂದ್ಯ ಇದಾಗಿದ್ದು, ಈ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಶರ್ಮಾ ಮುಂದಾಗಿದ್ದಾರೆ. 2017 ಡಿಸೆಂಬರ್ 10ರಂದು ರೋಹಿತ್ ಶರ್ಮಾ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ್ದರು. ಬಳಿಕ 2021ರ ಅಂತ್ಯದಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಂಡರು.
-
A special TON! 💯
— BCCI (@BCCI) October 29, 2023 " class="align-text-top noRightClick twitterSection" data="
Congratulations to #TeamIndia skipper Rohit Sharma who is all set to play his 1⃣0⃣0⃣th international match as a Captain 👏👏 #TeamIndia | #CWC23 | #MenInBlue | #INDvENG pic.twitter.com/WqX3rDuddk
">A special TON! 💯
— BCCI (@BCCI) October 29, 2023
Congratulations to #TeamIndia skipper Rohit Sharma who is all set to play his 1⃣0⃣0⃣th international match as a Captain 👏👏 #TeamIndia | #CWC23 | #MenInBlue | #INDvENG pic.twitter.com/WqX3rDuddkA special TON! 💯
— BCCI (@BCCI) October 29, 2023
Congratulations to #TeamIndia skipper Rohit Sharma who is all set to play his 1⃣0⃣0⃣th international match as a Captain 👏👏 #TeamIndia | #CWC23 | #MenInBlue | #INDvENG pic.twitter.com/WqX3rDuddk
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಇದುವರೆಗೆ ಒಟ್ಟು 99 ಪಂದ್ಯಗಳನ್ನು ಆಡಿದೆ. 99 ಪಂದ್ಯಗಳಲ್ಲಿ ಒಟ್ಟು 73 ಪಂದ್ಯಗಳಲ್ಲಿ ಜಯಗಳಿಸಿದ್ದು, 23 ಪಂದ್ಯಗಳನ್ನು ಸೋತಿದ್ದಾರೆ. ಮೂರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಇಲ್ಲ. ರೋಹಿತ್ ಮುನ್ನಡೆಸಿದ ಪಂದ್ಯಗಳಲ್ಲಿ ಒಟ್ಟು ಶೇ. 73.37ರಷ್ಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
51 ಟಿ 20 ಪಂದ್ಯದಲ್ಲಿ 39 ಪಂದ್ಯಗಳಲ್ಲಿ ಗೆಲುವು ಗಳಿಸಿದ್ದು, 12 ಪಂದ್ಯಗಳಲ್ಲಿ ಸೋಲಾಗಿದೆ. ಈ ಮೂಲಕ ಟಿ 20 ಪಂದ್ಯದಲ್ಲಿ ಶೇ. 76.47ರಷ್ಟು ಗೆಲುವು ಸಾಧಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ರೋಹಿತ್ 9 ಪಂದ್ಯಗಳನ್ನು ಮುನ್ನಡೆಸಿದ್ದು, ಐದು ಬಾರಿ ಗೆಲುವು ಸಾಧಿಸಿದ್ದಾರೆ. 2 ಬಾರಿ ಸೋಲನುಭವಿಸಿದ್ದು, 2 ಪಂದ್ಯಗಳು ಡ್ರಾ ಆಗಿವೆ. 39 ಏಕದಿನ ಪಂದ್ಯಗಳನ್ನು ಮುನ್ನಡೆಸಿರುವ ರೋಹಿತ್ 29 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 9 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಇಂಗ್ಲೆಂಡ್ ವಿರುದ್ಧ ನೂರನೇ ಪಂದ್ಯವನ್ನು ರೋಹಿತ್ ಮುನ್ನಡೆಸುತ್ತಿದ್ದಾರೆ.
-
🚨 Toss and Team Update 🚨
— BCCI (@BCCI) October 29, 2023 " class="align-text-top noRightClick twitterSection" data="
England win the toss and elect to bowl in Lucknow.
A look at #TeamIndia's Playing XI 👌
Follow the match ▶️ https://t.co/etXYwuCQKP#CWC23 | #MenInBlue | #INDvENG pic.twitter.com/oIo82skT3v
">🚨 Toss and Team Update 🚨
— BCCI (@BCCI) October 29, 2023
England win the toss and elect to bowl in Lucknow.
A look at #TeamIndia's Playing XI 👌
Follow the match ▶️ https://t.co/etXYwuCQKP#CWC23 | #MenInBlue | #INDvENG pic.twitter.com/oIo82skT3v🚨 Toss and Team Update 🚨
— BCCI (@BCCI) October 29, 2023
England win the toss and elect to bowl in Lucknow.
A look at #TeamIndia's Playing XI 👌
Follow the match ▶️ https://t.co/etXYwuCQKP#CWC23 | #MenInBlue | #INDvENG pic.twitter.com/oIo82skT3v
ಇಂಗ್ಲೆಂಡ್ ವಿರುದ್ಧದ ಗೆಲುವು ಭಾರತಕ್ಕೆ ನಾಲ್ಕು ಫೈನಲ್ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಹಕಾರಿಯಾಗುತ್ತದೆ. ಅಂಕಿ ಅಂಶಗಳ ಪ್ರಕಾರ ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆಯುವುದು ಕಷ್ಟ ಸಾಧ್ಯ ಎಂದು ಹೇಳಲಾಗಿದೆ.
ತಂಡಗಳು-ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ
ಇಂಗ್ಲೆಂಡ್: ಜಾನಿ ಬೇರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.
ಇದನ್ನೂ ಓದಿ: ವಿಶ್ವಕಪ್‌ನಲ್ಲಿಂದು ಮತ್ತೊಂದು ರೋಚಕ ಫೈಟ್: ಭಾರತ ಗೆದ್ದರೆ ಸೆಮೀಸ್‌ಗೆ ಸನಿಹ; ಇಂಗ್ಲೆಂಡ್ ಸೋತರೆ ಕಪ್ ಕನಸು ಭಗ್ನ